• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, September 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಹಾಸನಾಂಬೆ ದೇಗುಲದಲ್ಲಿ ಸ್ಥಳೀಯರಿಗೆ ಬೆಲೆಯೇ ಇಲ್ವಾ..? ಜಿಲ್ಲಾಡಳಿತ ನಿರ್ಲಕ್ಷ್ಯ ಯಾಕೆ..?

ಕೃಷ್ಣ ಮಣಿ by ಕೃಷ್ಣ ಮಣಿ
October 24, 2024
in ಕರ್ನಾಟಕ, ಜೀವನದ ಶೈಲಿ
0
ಹಾಸನಾಂಬೆ ದೇಗುಲದಲ್ಲಿ ಸ್ಥಳೀಯರಿಗೆ ಬೆಲೆಯೇ ಇಲ್ವಾ..? ಜಿಲ್ಲಾಡಳಿತ ನಿರ್ಲಕ್ಷ್ಯ ಯಾಕೆ..?
Share on WhatsAppShare on FacebookShare on Telegram

ಪ್ರತಿ ವರ್ಷದಲ್ಲಿ ಒಮ್ಮೆ ಮಾತ್ರ ತೆರೆಯುವ ಹಾಸನಾಂಬೆ ದರ್ಶನ ಇಂದಿನಿಂದ ಆರಂಭವಾಗಿದೆ. ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ಬಾಗಿಲು ತೆರೆಯುವ ಕಾರ್ಯಕ್ರಮ ನೆರವೇರಿತು. ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಶಾಸಕ ಸ್ವರೂಪ್, ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿಯಾಗಿದ್ರು.

ADVERTISEMENT

ಇಂದಿನಿಂದ ನವೆಂಬರ್ 3ರವರೆಗೆ ಭಕ್ತರು ಹಾಸನಾಂಬ ದೇವಿಯನ್ನು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ದೇವಾಲಯವನ್ನು ಹೂವಿನಿಂದ ಅಲಂಕರಿಸಲಾಗಿದ್ದು, ರಾಜ್ಯದ ಹಲವೆಡೆಯಿಂದ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ನಾಲ್ಕು ಎಎಸ್‌ಪಿ, 12 ಡಿವೈಸ್‌ಪಿ, 76 ಸಿಪಿಐಗಳು, 126 ಸಬ್‌‌ ಇನ್ಸ್‌ಪೆಕ್ಟರ್‌ಗಳು ಸೇರಿ ಸಾವಿರಕ್ಕೂ ಅಧಿಕ ಪೊಲೀಸರ‌ ನಿಯೋಜನೆ ಮಾಡಲಾಗಿದೆ. ಸರತಿ ಸಾಲು ಬ್ಯಾರಿಕೇಡ್‌, ಪಾರ್ಕಿಂಗ್, ನೀರು, ಶೌಚಾಲಯ ಸೇರಿದಂತೆ‌ ಎಲ್ಲಾ ವ್ಯವಸ್ಥೆಯನ್ನೂ ಮಾಡಿರುವ ಜಿಲ್ಲಾಡಳಿತ, ಕಾರ್ಯಕ್ರಮದಲ್ಲಿ ಸ್ಥಳೀಯರನ್ನು ನಿರ್ಲಕ್ಷಿಸಿರುವ ಆರೋಪ ಕೇಳಿ ಬಂದಿದೆ.

ಹಾಸನಾಂಬ ದೇವಸ್ಥಾನದಲ್ಲಿ ವಿತರಣೆ ಮಾಡುವ ಪ್ರಸಾದಕ್ಕಾಗಿ ಬೆಂಗಳೂರಿನ ಇಸ್ಕಾನ್‌ ದೇವಸ್ಥಾನದ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ಸ್ಥಳೀಯರು, ಹಾಸನ ಜಿಲ್ಲಾಡಳಿತದ ವಿರುದ್ಧ ವಾಗ್ದಾಳಿ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲೂ ತರಾಟೆಗೆ ತೆಗೆದುಕೊಂಡು, ಸ್ಥಳೀಯ ಬಾಣಸಿಗರಿಂದಲೇ ಮಾಡಿಸಬೇಕಿತ್ತು. ಹಾಸನ ಹಾಲು ಒಕ್ಕೂಟದಿಂದ ತುಪ್ಪ ತರಿಸಿಕೊಂಡು ರುಚಿಕರ ಲಡ್ಡು ತಯಾರಿಸಬೇಕಿತ್ತು ಎಂದು ಆಗ್ರಹಿಸಿದ್ದರು. ಈ ಬಗ್ಗೆ ಜಿಲ್ಲಾಡಳಿತಕ್ಕೂ ಮನವಿ ಮಾಡಿದ್ದರು.

ಇನ್ನು ಇಂದು ದೇವಸ್ಥಾನ ತೆರೆಯುವ ಸಂಧರ್ಭದಲ್ಲಿ ಕೇರಳದ ಚಂಡೆ ವಾದ್ಯ ಮಾಡುವ ತಂಡವನ್ನು ಕರೆಸಿ ನೃತ್ಯ ಮಾಡಿಸಲಾಗಿದೆ. ಕರ್ನಾಟಕದಲ್ಲೇ ಹಲವಾರು ಜಾನಪದ ನ್ಯತ್ಯತಂಡಗಳು ಇವೆ. ಅದೂ ಅಲ್ಲದೆ ಕರ್ನಾಟಕದ ಸಂಸ್ಕೃತಿ, ಪರಂಪರೆ ಎತ್ತಿ ಹಿಡಿಯುವ ಕೆಲಸ ಮಾಡಬೇಕಿದ್ದ ಜಿಲ್ಲಾಡಳಿತ ಕೇರಳ ಶೈಲಿಯ ಚಂಡೆ ವಾದ್ಯವನ್ನು ಪ್ರಚುರಪಡಿಸಿದ್ದು ಯಾಕೆ..? ಅನ್ನೋ ಪ್ರಶ್ನೆಗೆ ಜಿಲ್ಲಾಡಳಿತವೇ ಉತ್ತರ ಕೊಡಬೇಕಿದೆ.

Tags: godess hasanamba templehasanamba devihasanamba devi templehasanamba templehasanamba temple hassanhasanamba temple historyhasanamba temple history in kannadahasanamba temple livehasanamba temple miracleshasanamba temple mysteryhasanamba temple openhasanamba temple secretshasanamba temple storyhasanamba temple story in kannadahasanamba temple videohassan hasanamba templehistoric hasanamba templehistory of hasanamba temple
Previous Post

ಮುಕ್ತಾಯದ ಹಂತದಲ್ಲಿ ಆರ್.ಚಂದ್ರು ಕನಸಿನ ಫಾದರ್

Next Post

ರಾಮನಗರದಲ್ಲಿ ರಣವಿಳ್ಯ ಕೊಟ್ಟ ಕಾಂಗ್ರೆಸ್‌.. ನಿಖಿಲ್‌ಗೆ ಮತ್ತೆ ಮುಖಭಂಗನಾ..?

Related Posts

ಬಳ್ಳಾರಿ ಚಲೋ : ವಿಜಯೇಂದ್ರ ನಾಯಕತ್ವಕ್ಕೆ ಅಗ್ನಿಪರೀಕ್ಷೆ!
Top Story

ಬಳ್ಳಾರಿ ಚಲೋ : ವಿಜಯೇಂದ್ರ ನಾಯಕತ್ವಕ್ಕೆ ಅಗ್ನಿಪರೀಕ್ಷೆ!

by ಪ್ರತಿಧ್ವನಿ
September 11, 2026
0

ಬಳ್ಳಾರಿ : ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಬಳ್ಳಾರಿ ತಲುಪಿದೆ. ಲಿಂಗಸುಗೂರಿನಿಂದ ಆರಂಭವಾದ 10 ದಿನಗಳ ಪಾದಯಾತ್ರೆ ರಾಯಚೂರು,...

Read moreDetails
ಕೆಐಎಡಿಬಿ ಕರ್ಮಕಾಂಡದಲ್ಲಿ ಅಧಿಕಾರಿಗಳ ಸರಮಾಲೆ!

ಕೆಐಎಡಿಬಿ ಕರ್ಮಕಾಂಡದಲ್ಲಿ ಅಧಿಕಾರಿಗಳ ಸರಮಾಲೆ!

September 10, 2026
ನಾ. ದಿವಾಕರ ಕಂಡಂತೆ ರಂಗ ಸಂತೆಯಲ್ಲಿ ಕಬೀರನ ಸಾಮರಸ್ಯ ಧ್ವನಿ..!

ನಾ. ದಿವಾಕರ ಕಂಡಂತೆ ರಂಗ ಸಂತೆಯಲ್ಲಿ ಕಬೀರನ ಸಾಮರಸ್ಯ ಧ್ವನಿ..!

September 10, 2026
ದರ್ಶನ್, ವಿಜಯಲಕ್ಷ್ಮಿಗೆ ಸಮನ್ಸ್‌: ಹೈಕೋರ್ಟ್‌ ಮೆಟ್ಟಿಲೇರಿದ ದಂಪತಿ

ದರ್ಶನ್, ವಿಜಯಲಕ್ಷ್ಮಿಗೆ ಸಮನ್ಸ್‌: ಹೈಕೋರ್ಟ್‌ ಮೆಟ್ಟಿಲೇರಿದ ದಂಪತಿ

September 10, 2026
‘ಜಾಹೀರಾತಿಗೆ ಕೋಟ್ಯಂತರ ಖರ್ಚು, ಗೃಹಲಕ್ಷ್ಮಿ ಬಾಕಿ ಏಕೆ?’; ಡಿಕೆಶಿಗೆ ಸಿಟಿ ರವಿ ಪ್ರಶ್ನೆ

‘ಜಾಹೀರಾತಿಗೆ ಕೋಟ್ಯಂತರ ಖರ್ಚು, ಗೃಹಲಕ್ಷ್ಮಿ ಬಾಕಿ ಏಕೆ?’; ಡಿಕೆಶಿಗೆ ಸಿಟಿ ರವಿ ಪ್ರಶ್ನೆ

September 10, 2026
Next Post
ರಾಮನಗರದಲ್ಲಿ ರಣವಿಳ್ಯ ಕೊಟ್ಟ ಕಾಂಗ್ರೆಸ್‌.. ನಿಖಿಲ್‌ಗೆ ಮತ್ತೆ ಮುಖಭಂಗನಾ..?

ರಾಮನಗರದಲ್ಲಿ ರಣವಿಳ್ಯ ಕೊಟ್ಟ ಕಾಂಗ್ರೆಸ್‌.. ನಿಖಿಲ್‌ಗೆ ಮತ್ತೆ ಮುಖಭಂಗನಾ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada