• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, September 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ದರ್ಶನ್, ವಿಜಯಲಕ್ಷ್ಮಿಗೆ ಸಮನ್ಸ್‌: ಹೈಕೋರ್ಟ್‌ ಮೆಟ್ಟಿಲೇರಿದ ದಂಪತಿ

ಪ್ರತಿಧ್ವನಿ by ಪ್ರತಿಧ್ವನಿ
September 10, 2026
in ಕರ್ನಾಟಕ
0
ದರ್ಶನ್, ವಿಜಯಲಕ್ಷ್ಮಿಗೆ ಸಮನ್ಸ್‌: ಹೈಕೋರ್ಟ್‌ ಮೆಟ್ಟಿಲೇರಿದ ದಂಪತಿ
Share on WhatsAppShare on FacebookShare on Telegram

ಮೈಸೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಅವರಿಗೆ ಇದೀಗ ಮತ್ತೊಂದು ಪ್ರಕರಣದ ಸಂಕಷ್ಟ ಎದುರಾಗಿದೆ. ಮೈಸೂರಿನ ಟಿ. ನರಸೀಪುರ ರಸ್ತೆಯಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಸಂರಕ್ಷಿತ ‘ಪಟ್ಟೆ ತಲೆ ಹೆಬ್ಬಾತು’ (Bar-headed Goose) ಪಕ್ಷಿಗಳನ್ನು ಕಾನೂನುಬಾಹಿರವಾಗಿ ಸಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.

ADVERTISEMENT

ಈ ಸಮನ್ಸ್‌ ಹಾಗೂ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಪ್ರಶ್ನಿಸಿ ದರ್ಶನ್, ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಫಾರ್ಮ್‌ಹೌಸ್ ವ್ಯವಸ್ಥಾಪಕ ನಾಗರಾಜ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

2023ರ ಜನವರಿಯಲ್ಲಿ ದರ್ಶನ್ ಅಭಿನಯದ ‘ಕ್ರಾಂತಿ’ ಸಿನಿಮಾ ಬಿಡುಗಡೆಗೂ ಮುನ್ನ ನೀಡಿದ್ದ ಸಂದರ್ಶನವೊಂದರಲ್ಲಿ, ತಮ್ಮ ಫಾರ್ಮ್‌ಹೌಸ್‌ನಲ್ಲಿದ್ದ ಅಪರೂಪದ ವಲಸೆ ಹಕ್ಕಿಗಳನ್ನು ಸಾರ್ವಜನಿಕವಾಗಿ ತೋರಿಸಿದ್ದರು. ಪಂಜರದಲ್ಲಿದ್ದ ಪಕ್ಷಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ವಿಡಿಯೋ ಗಮನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಫಾರ್ಮ್‌ಹೌಸ್‌ಗೆ ತೆರಳಿ ಪರಿಶೀಲನೆ ನಡೆಸಿದ್ದು, ಅಲ್ಲಿ ಇದ್ದ ನಾಲ್ಕು ಪಟ್ಟೆ ತಲೆ ಹೆಬ್ಬಾತುಗಳನ್ನು ವಶಕ್ಕೆ ಪಡೆದಿದ್ದರು ಎಂದು ವರದಿಯಾಗಿದೆ. ಬಳಿಕ ನ್ಯಾಯಾಲಯದ ಅನುಮತಿ ಪಡೆದು ಈ ಪಕ್ಷಿಗಳನ್ನು ಮೈಸೂರು ಬಳಿಯ ‘ಹದಿನಾರು ಕೆರೆ’ ವಲಸೆ ಹಕ್ಕಿಗಳ ತಾಣಕ್ಕೆ ಬಿಡುಗಡೆ ಮಾಡಲಾಗಿತ್ತು.

 

BK Hariprasad On BJP : ಕೇಂದ್ರ ಸರ್ಕಾರದ ವಿರುದ್ಧ ಹರಿಪ್ರಸಾದ್‌ ವಾಗ್ದಾಳಿ..! | #pratidhvani

ಪಟ್ಟೆ ತಲೆ ಹೆಬ್ಬಾತುಗಳು ಚಳಿಗಾಲದಲ್ಲಿ ಮಂಗೋಲಿಯಾ ಮತ್ತು ಟಿಬೆಟ್ ಸೇರಿದಂತೆ ಪ್ರದೇಶಗಳಿಂದ ಭಾರತಕ್ಕೆ ವಲಸೆ ಬರುವ ಪಕ್ಷಿಗಳಾಗಿವೆ. ಇವು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತ ಪ್ರಭೇದಗಳ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ ಇಂತಹ ಪಕ್ಷಿಗಳನ್ನು ಖಾಸಗಿಯಾಗಿ ಬಂಧನದಲ್ಲಿಡುವುದು ಅಥವಾ ಸಾಕುವುದು ಕಾನೂನುಬಾಹಿರವಾಗಬಹುದು.ಈ ಹಿನ್ನೆಲೆಯಲ್ಲಿ ಟಿ. ನರಸೀಪುರ ಅರಣ್ಯ ಅಧಿಕಾರಿಗಳು ದರ್ಶನ್, ವಿಜಯಲಕ್ಷ್ಮಿ ಮತ್ತು ನಾಗರಾಜ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಸೆಕ್ಷನ್ 9, 39 ಮತ್ತು 51ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

BS Yediyurappa : ಬಿಜೆಪಿ ಬಳ್ಳಾರಿ ಪಾದಯಾತ್ರೆ ಬಗ್ಗೆ ಮಾಜಿ ಸಿಎಂ ಏನಂದ್ರು..! #ballari #padayatra

ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಟಿ. ನರಸೀಪುರದ ನ್ಯಾಯಾಲಯ ದರ್ಶನ್, ವಿಜಯಲಕ್ಷ್ಮಿ ಮತ್ತು ನಾಗರಾಜ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.ಇದನ್ನು ಪ್ರಶ್ನಿಸಿರುವ ದರ್ಶನ್ ಹಾಗೂ ಇತರರು, ತಾವು ನಾಲ್ಕು ಪಟ್ಟೆ ತಲೆ ಹೆಬ್ಬಾತುಗಳನ್ನು ಸಾಕಿಲ್ಲ. ಅವು ಸ್ವಯಂಪ್ರೇರಿತವಾಗಿ ಫಾರ್ಮ್‌ಹೌಸ್‌ಗೆ ಬಂದಿದ್ದವು ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ.ಹೀಗಾಗಿ ತಮ್ಮ ವಿರುದ್ಧ ದಾಖಲಾಗಿರುವ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕರಣ ಹಾಗೂ ಸ್ಥಳೀಯ ನ್ಯಾಯಾಲಯ ಜಾರಿಗೊಳಿಸಿರುವ ಸಮನ್ಸ್‌ ಅನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಅರ್ಜಿಯ ವಿಚಾರಣೆ ಶೀಘ್ರದಲ್ಲೇ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

 

Tags: Bar Headed GooseDarshan Casedarshan latest newsDARSHAN THOOGUDEEPAForest Department‌High courtkannada newsKarnataka High Courtkarnataka newsmysore newsRenukaswamy Casesandalwood newsT narasipuraVijayalakshmi darshanWildlife CaseWildlife CrimeWildlife Protection Act
Previous Post

‘ಜಾಹೀರಾತಿಗೆ ಕೋಟ್ಯಂತರ ಖರ್ಚು, ಗೃಹಲಕ್ಷ್ಮಿ ಬಾಕಿ ಏಕೆ?’; ಡಿಕೆಶಿಗೆ ಸಿಟಿ ರವಿ ಪ್ರಶ್ನೆ

Next Post

*ದೇಶದಲ್ಲಿ ಏಕರೂಪ ರಾಷ್ಟ್ರೀಕೃತ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು: ಡಾ.ಮೂಡ್ನಾಕೂಡು ಚಿನ್ನಸ್ವಾಮಿ*

Related Posts

ಬಳ್ಳಾರಿ ಚಲೋ : ವಿಜಯೇಂದ್ರ ನಾಯಕತ್ವಕ್ಕೆ ಅಗ್ನಿಪರೀಕ್ಷೆ!
Top Story

ಬಳ್ಳಾರಿ ಚಲೋ : ವಿಜಯೇಂದ್ರ ನಾಯಕತ್ವಕ್ಕೆ ಅಗ್ನಿಪರೀಕ್ಷೆ!

by ಪ್ರತಿಧ್ವನಿ
September 11, 2026
0

ಬಳ್ಳಾರಿ : ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಬಳ್ಳಾರಿ ತಲುಪಿದೆ. ಲಿಂಗಸುಗೂರಿನಿಂದ ಆರಂಭವಾದ 10 ದಿನಗಳ ಪಾದಯಾತ್ರೆ ರಾಯಚೂರು,...

Read moreDetails
ಕೆಐಎಡಿಬಿ ಕರ್ಮಕಾಂಡದಲ್ಲಿ ಅಧಿಕಾರಿಗಳ ಸರಮಾಲೆ!

ಕೆಐಎಡಿಬಿ ಕರ್ಮಕಾಂಡದಲ್ಲಿ ಅಧಿಕಾರಿಗಳ ಸರಮಾಲೆ!

September 10, 2026
ನಾ. ದಿವಾಕರ ಕಂಡಂತೆ ರಂಗ ಸಂತೆಯಲ್ಲಿ ಕಬೀರನ ಸಾಮರಸ್ಯ ಧ್ವನಿ..!

ನಾ. ದಿವಾಕರ ಕಂಡಂತೆ ರಂಗ ಸಂತೆಯಲ್ಲಿ ಕಬೀರನ ಸಾಮರಸ್ಯ ಧ್ವನಿ..!

September 10, 2026
‘ಜಾಹೀರಾತಿಗೆ ಕೋಟ್ಯಂತರ ಖರ್ಚು, ಗೃಹಲಕ್ಷ್ಮಿ ಬಾಕಿ ಏಕೆ?’; ಡಿಕೆಶಿಗೆ ಸಿಟಿ ರವಿ ಪ್ರಶ್ನೆ

‘ಜಾಹೀರಾತಿಗೆ ಕೋಟ್ಯಂತರ ಖರ್ಚು, ಗೃಹಲಕ್ಷ್ಮಿ ಬಾಕಿ ಏಕೆ?’; ಡಿಕೆಶಿಗೆ ಸಿಟಿ ರವಿ ಪ್ರಶ್ನೆ

September 10, 2026
ಇಡಿ ಇಕ್ಕಳದಲ್ಲಿ ಜಾರಕಿಹೊಳಿ : ಸಾಹುಕಾರ್‌ ಮನೆಯ ಮೇಲಿನ ರೇಡ್‌ಗೆ ಬಿಗ್‌ ಟ್ವಿಸ್ಟ್..!

ಇಡಿ ಇಕ್ಕಳದಲ್ಲಿ ಜಾರಕಿಹೊಳಿ : ಸಾಹುಕಾರ್‌ ಮನೆಯ ಮೇಲಿನ ರೇಡ್‌ಗೆ ಬಿಗ್‌ ಟ್ವಿಸ್ಟ್..!

September 9, 2026
Next Post
*ದೇಶದಲ್ಲಿ ಏಕರೂಪ ರಾಷ್ಟ್ರೀಕೃತ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು: ಡಾ.ಮೂಡ್ನಾಕೂಡು ಚಿನ್ನಸ್ವಾಮಿ*

*ದೇಶದಲ್ಲಿ ಏಕರೂಪ ರಾಷ್ಟ್ರೀಕೃತ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು: ಡಾ.ಮೂಡ್ನಾಕೂಡು ಚಿನ್ನಸ್ವಾಮಿ*

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada