Newzeland ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಭಾರತ ತಂಡವು ಕೇವಲ 46 ರನ್ಗಳಿಗೆ ಆಲೌಟ್ ಆಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಆದರೆ ಈ ನಿರ್ಧಾರ ತಪ್ಪು ಎಂಬುದನ್ನು Newzeland ವೇಗಿಗಳು ಕೇವಲ 31.2 ಓವರ್ಗಳಲ್ಲಿ ನಿರೂಪಿಸಿದ್ದರು. ಅಂದರೆ 188 ಎಸೆತಗಳಲ್ಲಿ ಭಾರತ ತಂಡವು ಕೇವಲ 46 ರನ್ ಗಳಿಸಿ ಆಲೌಟ್ ಆಯಿತು.
ಇದು ಭಾರತದಲ್ಲಿ ಟೀಮ್ ಇಂಡಿಯಾದ ಅತ್ಯಲ್ಪ ಮೊತ್ತ. ಇದಕ್ಕೂ ಮುನ್ನ 1987 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 75 ರನ್ಗೆ ಆಲೌಟ್ ಆಗಿದ್ದು ಕಳಪೆ ದಾಖಲೆಯಾಗಿತ್ತು. ಇದೀಗ 46 ರನ್ಗೆ ಆಲೌಟ್ ಆಗಿ ಟೀಮ್ ಇಂಡಿಯಾ ಬ್ಯಾಟರ್ಗಳು ಹಳೆಯ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅತೀ ಕಡಿಮೆ ಸ್ಕೋರ್ಗೆ ಆಲೌಟ್ ಆದ ಅನಗತ್ಯ ದಾಖಲೆ ಕೂಡ ಟೀಮ್ ಇಂಡಿಯಾ ಪಾಲಾಗಿದೆ. ಇದಕ್ಕೂ ಮುನ್ನ 2021 ರಲ್ಲಿ ನ್ಯೂಝಿಲೆಂಡ್ ತಂಡವು 62 ರನ್ಗೆ ಆಲೌಟ್ ಆಗಿದ್ದು ಕಳಪೆ ಪ್ರದರ್ಶನವಾಗಿತ್ತು ಭಾರತೀಯ ಉಪಖಂಡದಲ್ಲಿ ಅತೀ ಕಡಿಮೆ ಸ್ಕೋರ್ಗಳಿಸಿದ ಹೀನಾಯ ದಾಖಲೆ ಕೂಡ ಟೀಮ್ ಇಂಡಿಯಾ ಪಾಲಾಗಿದೆ.
78 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡವೊಂದು 50 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ.