ಅತಿಯಾದ ಹೊಟ್ಟೆ ನೋವಿನಿಂದ (Stomach pain) ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ವೈದ್ಯರಿಗೆ ಅಚ್ಚರಿ ಕಾದಿತ್ತು. ಉತ್ತರಪ್ರದೇಶದ (Uttar pradesh) 31 ವರ್ಷದ ಈ ಮಹಿಳೆಯ ಹೊಟ್ಟೆಯಲ್ಲಿ ದಪ್ಪದಾದ ಕೂದಲಿನ ಉಂಡೆ ಕಾಣಸಿಕ್ಕಿದೆ. ಇದನ್ನು ಕಂಡು ವೈದ್ಯರೇ ಶಾಕ್ ಆಗಿದ್ದಾರೆ.
ಈಕೆಗೆ 31 ವರ್ಷ ವಯಸ್ಸಾಗಿದ್ದು, ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು, ಹೀಗಾಗಿ ಸ್ಕ್ಯಾನಿಂಗ್ (Scanning) ಮಾಡಿದಾಗ ಹೊಟ್ಟೆಯಲ್ಲಿ ಗಂಟು ಪತ್ತೆಯಾದ ಕಾರಣ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲು ಮುಂದಾಗಿದ್ದಾರೆ. ಆದ್ರೆ ವೈದ್ಯರಿಗೆ ಈಕೆಯ ಹೊಟ್ಟೆಯಲ್ಲಿ 2 ಕೆಜಿ ತೂಕದ ಕೂದಲಿನ ಉಂಡೆ ಪತ್ತೆಯಾಗಿದೆ.
ಈ ಮಹಿಳೆಗೆ ಕೂದಲು ತಿನ್ನುವ ರೋಗವಿದ್ಯಂತೆ.ಸದ್ಯ ಈ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ತಿಳಿದುಬಂದಿದ್ದು, ಟ್ರೈಕೊಲೊಟೊಮೇನಿಯಾ ಎಂಬ ಕಾಯಿಲೆಗೆ ತುತ್ತಾಗಿದ್ದಾರೆ. ಹೀಗಾಗಿ ಮಹಿಳೆ ಕಳೆದ 15 ವರ್ಷಗಳಿಂದ ತನ್ನ ಕೂದಲನ್ನೇ ತಿನ್ನುತ್ತಿದ್ದರಂತೆ. ಇದು ಹೊಟ್ಟೆಯಲ್ಲಿ ಶೇಕರಣೆಗೊಂಡು 2 ಕೆಜಿ ಕೂದಲು ಉಂಡೆಯಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.