ಹೆಣ್ಣು ಮಕ್ಕಳಿಗೂ ಕೂಡ ಮುಖದ ಭಾಗದಲ್ಲಿ ಹೇರ್ ಬೆಳೆಯುತ್ತದೆ ಆದರೆ ಕೆಲವರಿಗೆ ಅದು ಜಾಸ್ತಿ ಇರುತ್ತದೆ. ಫೇಸಲ್ಲಿ ಹೇರ್ ಜಾಸ್ತಿಯಾದಾಗ ಒಂದು ರೀತಿಯ ಮುಜುಗರ ಹಾಗೂ ಮುಖದ ಅಂದವನ್ನ ಕೂಡ ಕಡಿಮೆ ಮಾಡುತ್ತದೆ ಮತ್ತು ಕಪ್ಪಾಗಿ ಕಾಣಿಸುತ್ತಿವಿ..
ಇನ್ನು ಕೆಲವರು ತುಟಿಯ ಮೇಲ್ಬಾಗ(ಅಪ್ಪರ್ ಲಿಪ್) ಹೇರ್ ನ ರಿಮೂವ್ ಮಾಡ್ಸ್ತಾರೆ .ಆದರೆ ಕೆನ್ನೆ ಭಾಗದಲ್ಲಿ ಹೇರಳವಾಗಿ ಕೂದಲು ಇದ್ರೆ ಅದನ್ನ ತೆಗೆಸುವುದಕ್ಕೆ ಸ್ವಲ್ಪ ಕಷ್ಟ ಆಗುತ್ತೆ.. ಹಾಗಾಗಿ ಶೇವ್ ಮಾಡಿಸ್ತಾರೆ..ಆದ್ರೆ ಶೇವ್ ಮಾಡುವ ಮುನ್ನ ಕೆಲವು ಪ್ರಿಕಾಶನ್ ತೆಗೆದುಕೊಳ್ಳುವುದು ಉತ್ತಮ.
ಮುಖವನ್ನು ತೊಳೆಯಿರಿ
ಮುಖದಲ್ಲಿರುವ ಕೂದಲನ್ನ ತೆಗೆಯುವ ಮುಂಚೆ ಮುಖವನ್ನು ತೊಳೆಯುವಂತದ್ದು ಉತ್ತಮ. ನಂತರ ಒಂದು ಕಾಟನ್ ಬಟ್ಟೆಯಿಂದ ಮುಖವನ್ನು ಒರೆಸಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಶೇವ್ ಮಾಡಬೇಕು.
ಜೆಲ್ ಬಳಸಿ
ಶೇವಿಂಗ್ ಮಾಡುವ ಮುನ್ನ ಕ್ರೀಮ್ ಅಥವಾ ಜಲ್ ಹಚ್ಚುವುದರಿಂದ ಹೇರ್ ನ ಈಸಿಯಾಗಿ ರಿಮೋ ಮಾಡಬಹುದು ಹಾಗೂ ಯಾವುದೇ ರೀತಿಯ ಗಾಯಗಳಾಗುವುದಿಲ್ಲ.
ರೇಜರ್ ಬಳಕೆ
ಶಾರ್ಪ್ ಇರುವ ರೇಜರ್ ಬಳಸುವುದು ಉತ್ತಮ.ರೇಜರ್ಗಳನ್ನು ಇನ್ನೊಬ್ಬರ ಬಳಿ ಹಂಚಿಕೊಳ್ಳುವುದನ್ನು ತಪ್ಪಿಸಿ ಇಲ್ಲವಾದಲ್ಲಿ ಇನ್ಫೆಕ್ಷನ್ ಆಗುತ್ತದೆ. ಶೇವಿಂಗ್ ಮಾಡಿದ ನಂತರ ರೇಜರ್ ವಾಶ್ ಮಾಡಿ ಡ್ರೈ ಇರುವ ಜಾಗದಲ್ಲಿಡಿ.