
ಬೆಳಗಾವಿ: ಹಗರಣಗಳ ಟೆನ್ಶನ್, ಸಿಎಂ ಬದಲಾವಣೆ ಕೂಗು ನಡುವೆ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸತೀಶ್ ಜಾರಕಿಹೊಳಿ ಭೇಟಿಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು.
ಈ ಬೆನ್ನಲ್ಲೇ ಇಂದು ನಿಪ್ಪಾಣಿಯಲ್ಲಿ ಸತೀಶ್ ಜಾರಕಿಹೊಳಿಯವರು ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದರು.ದೆಹಲಿಯಲ್ಲಿ ಖರ್ಗೆಯವರನ್ನು ಭೇಟಿಯಾಗಿದ್ದು ನಿಜ. ಆದರೆ ಇದು ಮಾಮೂಲಿ ಭೇಟಿ ಅಷ್ಟೇ..ಸಂಚಲನದ ಬೆಳವಣಿಗೆ ಅಲ್ಲ ಎಂದರು.
ಖರ್ಗೆ ವರಿಷ್ಠರು, ಹೀಗಾಗಿ ದೆಹಲಿಗೆ ಹೋದಾಗ ಭೇಟಿಯಾಗಿದ್ದೆ. ನಮ್ಮ ಭೇಟಿ ವೇಳೆ ರಾಜಕೀಯ ಸಮಸ್ಯೆಗಳನ್ನು ಮಾತ್ರ ಚರ್ಚೆ ಮಾಡಿದ್ದೇವೆ. ಇಲ್ಲಿ ದಲಿತ ಸಿಎಂ ಕೂಗು ಎದ್ದಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದರು.





