• Home
  • About Us
  • ಕರ್ನಾಟಕ
Sunday, February 1, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಈಶ ಪ್ರತಿಷ್ಠಾನಕ್ಕೆ ಸಂಬಂಧಿಸಿದ ಎಲ್ಲಾ ಕ್ರಿಮಿನಲ್ ಪ್ರಕರಣಗಳ ವಿವರ ಸಲ್ಲಿಸುವಂತೆ ಸೂಚಿಸಿದ ಮದ್ರಾಸ್ ಹೈಕೋರ್ಟ್

ಪ್ರತಿಧ್ವನಿ by ಪ್ರತಿಧ್ವನಿ
October 1, 2024
in Top Story, ಇತರೆ / Others
0
ಈಶ ಪ್ರತಿಷ್ಠಾನಕ್ಕೆ ಸಂಬಂಧಿಸಿದ ಎಲ್ಲಾ ಕ್ರಿಮಿನಲ್ ಪ್ರಕರಣಗಳ ವಿವರ ಸಲ್ಲಿಸುವಂತೆ ಸೂಚಿಸಿದ ಮದ್ರಾಸ್ ಹೈಕೋರ್ಟ್
Share on WhatsAppShare on FacebookShare on Telegram

ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಅವರ ಈಶ ಪ್ರತಿಷ್ಠಾನ ವಿರುದ್ಧ ದಾಖಲಾಗಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳ ವಿವರ ಸಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ಸೋಮವಾರ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ADVERTISEMENT

ಪ್ರತಿಷ್ಠಾನ ವಿರುದ್ಧ ಅನೇಕ ಕ್ರಿಮಿನಲ್ ದೂರುಗಳಿರುವುದರಿಂದ ಈ ವಿಚಾರ ಹೆಚ್ಚಿನ ಚರ್ಚೆಗೆ ಅರ್ಹವಾಗಿದೆ ಎಂದು ನ್ಯಾಯಮೂರ್ತಿಗಳಾದ ಎಸ್‌ಎಂ ಸುಬ್ರಮಣ್ಯಂ ಮತ್ತು ವಿ ಶಿವಜ್ಞಾನಂ ಅವರಿದ್ದ ಪೀಠ ತಿಳಿಸಿತು.

“ಅರ್ಜಿದಾರರ ಪರ ವಕೀಲರು ಅರ್ಜಿದಾರರ ವಿರುದ್ಧ ಇರುವ ಉಳಿದ ಕ್ರಿಮಿನಲ್‌ ಪ್ರಕರಣಗಳ ವಿವರವನ್ನು ಸಲ್ಲಿಸಬೇಕು. ಸಂಸ್ಥೆಯ ವಿರುದ್ಧದ ಆರೋಪಗಳ ಗಂಭೀರ ಸ್ವರೂಪ ಹಾಗೂ ಸಂಸ್ಥೆಯ ವಶದಲ್ಲಿರುವವರು ನಮ್ಮೆದುರು ಮಾತನಾಡಿರುವ ರೀತಿಯಿಂದಾಗಿ ಆರೋಪಗಳ ಹಿಂದಿನ ಸತ್ಯಾಸತ್ಯತೆ ಅರ್ಥ ಮಾಡಿಕೊಳ್ಳಲು ಇನ್ನಷ್ಟು ಚರ್ಚೆ ನಡೆಸುವ ಅಗತ್ಯವಿದೆ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಆದ್ದರಿಂದ ಅರ್ಜಿದಾರರು ಸಂಸ್ಥೆಯ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಮೊಕದ್ದಮೆಗಳ ವಿವರ ನೀಡಬೇಕು. ಹೆಚ್ಚುವರಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರು ಈ ಎಲ್ಲಾ ಪ್ರಕರಣಗಳ ವಿವರ ಕಲೆ ಹಾಕಿ ನ್ಯಾಯಾಲಯಕ್ಕೆ ನೀಡಬೇಕು” ಎಂದು ಪೀಠ ವಿವರಿಸಿತು.

ಮದ್ರಾಸ್ ಹೈಕೋರ್ಟ್ಆರೋಪಗಳ ಹಿಂದಿನ ಸತ್ಯಾಸತ್ಯತೆ ಅರ್ಥ ಮಾಡಿಕೊಳ್ಳಲು ಇನ್ನಷ್ಟು ಚರ್ಚೆ ನಡೆಸುವ ಅಗತ್ಯವಿದೆ.ತಮ್ಮ ಮಗಳಿಗೆ ಮದುವೆ ಮಾಡಿ ಅವರು ಜೀವನದಲ್ಲಿ ಸುವ್ಯವಸ್ಥಿತವಾಗಿ ನೆಲೆಸುವಂತೆ ಮಾಡಿರುವ ಜಗ್ಗಿ ವಾಸುದೇವ್ ಬೇರೆ ಮಹಿಳೆಯರು ಐಹಿಕ ಜೀವನ ತ್ಯಜಿಸುವಂತೆ ಏಕೆ ಪ್ರೋತ್ಸಾಹಿಸಿದರು ಎಂಬ ಕುರಿತು ನ್ಯಾಯಾಲಯ ಗಂಭೀರ ಅನುಮಾನ ವ್ಯಕ್ತಪಡಿಸಿತು.

“ತನ್ನ ಮಗಳನ್ನು ಮದುವೆ ಮಾಡಿಸಿ ಜೀವನದಲ್ಲಿ ಚೆನ್ನಾಗಿ ನೆಲೆಸುವಂತೆ ಮಾಡಿದ ವ್ಯಕ್ತಿ ಬೇರೆಯವರ ಹೆಣ್ಣುಮಕ್ಕಳು ತಲೆ ಬೋಳಿಸಿಕೊಂಡು ಸನ್ಯಾಸ ಜೀವನ ನಡೆಸುವಂತೆ ಏಕೆ ಪ್ರೋತ್ಸಾಹಿಸುತ್ತಿದ್ದಾರೆ ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಅದು ಅನುಮಾನಸ್ಪದ ” ಎಂದು ಪೀಠ ಮೌಖಿಕವಾಗಿ ಟೀಕಿಸಿತು.

ತಮ್ಮ 42 ಮತ್ತು 39 ವರ್ಷ ವಯಸ್ಸಿನ ಇಬ್ಬರು “ಸುಶಿಕ್ಷಿತ ಹೆಣ್ಣುಮಕ್ಕಳು” ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ವಾಸಿಸುವಂತೆ ತಲೆ ಕೆಡಿಸಲಾಗಿದೆ ಎಂದು ದೂರಿ ಕೊಯಮತ್ತೂರಿನ ನಿವೃತ್ತ ಪ್ರಾಧ್ಯಾಪಕ ಎಸ್ ಕಾಮರಾಜ್ ಎಂಬುವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ತಮ್ಮಮಕ್ಕಳು ಕುಟುಂಬದೊಂದಿಗೆ ನಂಟು ಇರಿಸಿಕೊಳ್ಳಲು ಪ್ರತಿಷ್ಠಾನದ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದಿರುವ ಅರ್ಜಿದಾರರು ಪ್ರತಿಷ್ಠಾನದ ವಿರುದ್ಧದ ಲೈಂಗಿಕ ಕಿರುಕುಳ ಸೇರಿದಂತೆ ವಿವಿಧ ಕ್ರಿಮಿನಲ್‌ ಪ್ರಕರಣಗಳನ್ನು ನ್ಯಾಯಾಲಯಕ್ಕೆ ತಿಳಿಸಿದರು.

ಈ ಹಿಂದಿನ ಆದೇಶದಂತೆ ನ್ಯಾಯಾಲಯದಲ್ಲಿ ಹಾಜರಿದ್ದ ಕಾಮರಾಜ್‌ ಅವರ ಇಬ್ಬರು ಪುತ್ರಿಯರು ಸ್ವಇಚ್ಛೆಯಿಂದ ಪ್ರತಿಷ್ಠಾನದಲ್ಲಿದ್ದೇವೆ ಅಲ್ಲಿರಲು ನಮ್ಮನ್ನು ಯಾರೂ ಒತ್ತಾಯಿಸಿಲ್ಲ ಎಂದು ಹೇಳಿದರು.ಆದರೆ ಆ ಬಳಿಕ ಅವರನ್ನು ಕೋಣೆಗೆ ಕರೆಸಿ ಗೌಪ್ಯವಾಗಿ ಮಾತುಕತೆ ನಡೆಸಿದ ನ್ಯಾಯಾಲಯ ತನ್ನ ಅನುಮಾನಗಳು ಹೆಚ್ಚಿವೆ ಎಂದಿತು.

ಜೊತೆಗೆ ಪ್ರತಿಷ್ಠಾನದ ಪರ ವಕೀಲರನ್ನು ಉದ್ದೇಶಿಸಿ ತಮ್ಮ ಸ್ವಂತ ಮಗಳು ಉತ್ತಮ ರೀತಿಯಲ್ಲಿ ನೆಲೆಸುವಂತೆ ಮಾಡಿರುವ ಜಗ್ಗಿ ವಾಸುದೇವ್‌ ಉಳಿದ ಮಹಿಳೆಯರು ಪ್ರಾಪಂಚಿಕ ಜೀವನ ತ್ಯಜಿಸುವಂತೆ ಏಕೆ ಪ್ರೋತ್ಸಾಹಿಸುತ್ತಿದ್ದಾರೆ?” ಎಂದಿತು. ಅಕ್ಟೋಬರ್ 4ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಸಲಿದೆ.

Tags: criminal cases against Isha FoundationJustices SM Subramaniam and V SivagnanamMadras High Court
Previous Post

ಇಸ್ರೇಲ್ ಪ್ರಧಾನಿ ಜೊತೆ ಮೋದಿ ಮಾತು – ಯುದ್ಧದ ಆಗುಹೋಗುಗಳ ಬಗ್ಗೆ ಚರ್ಚೆ !

Next Post

ಬಾಲಿವುವ್ ನಟ ಗೋವಿಂದ ಕಾಲಿಗೆ ಗುಂಡೇಟು – ಆಸ್ಪತ್ರೆಗೆ ದಾಖಲು !

Related Posts

Union Budget 2026: ಕೇಂದ್ರ ಬಜೆಟ್‌ ದಿನವೇ ಬಿಗ್‌ ಶಾಕ್:‌ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ
Top Story

Union Budget 2026: ಕೇಂದ್ರ ಬಜೆಟ್‌ ದಿನವೇ ಬಿಗ್‌ ಶಾಕ್:‌ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ

by ಪ್ರತಿಧ್ವನಿ
February 1, 2026
0

ಬೆಂಗಳೂರು: ಫೆಬ್ರವರಿ ತಿಂಗಳ ಮೊದಲ ದಿನವೇ ಹಾಗೂ ಕೇಂದ್ರ ಬಜೆಟ್‌ ಮಂಡನೆ ದಿನವೇ ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ...

Read moreDetails
Union Budget 2026: ತಮಿಳುನಾಡಿನ ಕಾಂಜೀವರಂ ಸಿಲ್ಕ್ ಸೀರೆ ಧರಿಸಿ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡನೆ

Union Budget 2026: ತಮಿಳುನಾಡಿನ ಕಾಂಜೀವರಂ ಸಿಲ್ಕ್ ಸೀರೆ ಧರಿಸಿ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡನೆ

February 1, 2026
ಬೆಂಗಳೂರಲ್ಲಿ ಮನೆಕೆಲಸದವನಿಂದಲೇ ಮನೆ ಮಹಿಳೆ ಕೊಲೆ

ಬೆಂಗಳೂರಲ್ಲಿ ಮನೆಕೆಲಸದವನಿಂದಲೇ ಮನೆ ಮಹಿಳೆ ಕೊಲೆ

February 1, 2026
CJ Roy: ಆತ್ಮ** ಮಾಡಿಕೊಳ್ಳುವ ಮುನ್ನ ಸಿಜೆ ರಾಯ್ ಅವರ ಕೊನೆಯ ಇನ್‌ಸ್ಟಾಗ್ರಾಮ್ ಪೋಸ್ಟ್  ಏನಾಗಿತ್ತು ?

CJ Roy: ಆತ್ಮ** ಮಾಡಿಕೊಳ್ಳುವ ಮುನ್ನ ಸಿಜೆ ರಾಯ್ ಅವರ ಕೊನೆಯ ಇನ್‌ಸ್ಟಾಗ್ರಾಮ್ ಪೋಸ್ಟ್  ಏನಾಗಿತ್ತು ?

February 1, 2026
Daily Horoscope February 1: ಇಂದು ಈ 3 ರಾಶಿಯವರಿಗೆ ಅದೃಷ್ಟದ ಸುರಿಮಳೆ..!

Daily Horoscope February 1: ಇಂದು ಈ 3 ರಾಶಿಯವರಿಗೆ ಅದೃಷ್ಟದ ಸುರಿಮಳೆ..!

February 1, 2026
Next Post
ಬಾಲಿವುವ್ ನಟ ಗೋವಿಂದ ಕಾಲಿಗೆ ಗುಂಡೇಟು – ಆಸ್ಪತ್ರೆಗೆ ದಾಖಲು !

ಬಾಲಿವುವ್ ನಟ ಗೋವಿಂದ ಕಾಲಿಗೆ ಗುಂಡೇಟು - ಆಸ್ಪತ್ರೆಗೆ ದಾಖಲು !

Recent News

Union Budget 2026: ಕೇಂದ್ರ ಬಜೆಟ್‌ ದಿನವೇ ಬಿಗ್‌ ಶಾಕ್:‌ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ
Top Story

Union Budget 2026: ಕೇಂದ್ರ ಬಜೆಟ್‌ ದಿನವೇ ಬಿಗ್‌ ಶಾಕ್:‌ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ

by ಪ್ರತಿಧ್ವನಿ
February 1, 2026
Union Budget 2026: ತಮಿಳುನಾಡಿನ ಕಾಂಜೀವರಂ ಸಿಲ್ಕ್ ಸೀರೆ ಧರಿಸಿ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡನೆ
Top Story

Union Budget 2026: ತಮಿಳುನಾಡಿನ ಕಾಂಜೀವರಂ ಸಿಲ್ಕ್ ಸೀರೆ ಧರಿಸಿ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡನೆ

by ಪ್ರತಿಧ್ವನಿ
February 1, 2026
CJ Roy: ಆತ್ಮ** ಮಾಡಿಕೊಳ್ಳುವ ಮುನ್ನ ಸಿಜೆ ರಾಯ್ ಅವರ ಕೊನೆಯ ಇನ್‌ಸ್ಟಾಗ್ರಾಮ್ ಪೋಸ್ಟ್  ಏನಾಗಿತ್ತು ?
Top Story

CJ Roy: ಆತ್ಮ** ಮಾಡಿಕೊಳ್ಳುವ ಮುನ್ನ ಸಿಜೆ ರಾಯ್ ಅವರ ಕೊನೆಯ ಇನ್‌ಸ್ಟಾಗ್ರಾಮ್ ಪೋಸ್ಟ್  ಏನಾಗಿತ್ತು ?

by ಪ್ರತಿಧ್ವನಿ
February 1, 2026
Daily Horoscope February 1: ಇಂದು ಈ 3 ರಾಶಿಯವರಿಗೆ ಅದೃಷ್ಟದ ಸುರಿಮಳೆ..!
Top Story

Daily Horoscope February 1: ಇಂದು ಈ 3 ರಾಶಿಯವರಿಗೆ ಅದೃಷ್ಟದ ಸುರಿಮಳೆ..!

by ಪ್ರತಿಧ್ವನಿ
February 1, 2026
ಜಮೀನು ದಾನಕ್ಕೂ ಅಡ್ಡಿಯಾದ ಅಧಿಕಾರಿಗಳು: ಬಿ. ಜಯಶ್ರೀ ಅವರನ್ನು ಅಲೆದಾಡಿಸಿದ ಭೂ ಮಾಪನ ಇಲಾಖೆ
Top Story

ಜಮೀನು ದಾನಕ್ಕೂ ಅಡ್ಡಿಯಾದ ಅಧಿಕಾರಿಗಳು: ಬಿ. ಜಯಶ್ರೀ ಅವರನ್ನು ಅಲೆದಾಡಿಸಿದ ಭೂ ಮಾಪನ ಇಲಾಖೆ

by ಪ್ರತಿಧ್ವನಿ
January 31, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Union Budget 2026: ಕೇಂದ್ರ ಬಜೆಟ್‌ ದಿನವೇ ಬಿಗ್‌ ಶಾಕ್:‌ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ

Union Budget 2026: ಕೇಂದ್ರ ಬಜೆಟ್‌ ದಿನವೇ ಬಿಗ್‌ ಶಾಕ್:‌ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ

February 1, 2026
Union Budget 2026: ತಮಿಳುನಾಡಿನ ಕಾಂಜೀವರಂ ಸಿಲ್ಕ್ ಸೀರೆ ಧರಿಸಿ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡನೆ

Union Budget 2026: ತಮಿಳುನಾಡಿನ ಕಾಂಜೀವರಂ ಸಿಲ್ಕ್ ಸೀರೆ ಧರಿಸಿ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡನೆ

February 1, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!