ಬಾಲಿವುಡ್ ನಟ (Bollywood actor) ಹಾಗೂ ಶಿವಸೇನೆ (Shiva sene) ಮುಖಂಡ ಗೋವಿಂದ ಅವರ ಕಾಲಿಗೆ ಗುಂಡೇಟು ತಗುಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ಗೋವಿಂದ ತಮ್ಮ ಸ್ವ ರಕ್ಷಣೆಗೆ ಹೊಂದಿರುವ ಲೈಸೆನ್ಸ್ ಹೊಂದಿದ ಗನ್ ನಿಂದಲೇ ಗುಂಡು ಹಾರಿದೆ.
ಇಂದು ಬೆಳಗ್ಗಿನ ಜಾವ 5 ಗಂಟೆಗೆ ನಟ ಗೋವಿಂದ ಅವರು ತಮ್ಮ ರಿವಾಲ್ವರ್ ಅನ್ನು ಹೊರತೆಗೆದು ಸ್ವಚ್ಛಗೊಳಿಸುತ್ತಿರುವಾಗ ಆಚನಾಕ್ ಆಗಿ ಟ್ರಿಗರ್ ಒತ್ತಿದ್ದು ಕಾಲಿಗೆ ಗುಂಡು ಹಾರಿದೆ.
ಈ ವೇಳೆ ತಕ್ಷಣ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.