ಮುಖದ ಅಂದ ಹೆಚ್ಚಿಸುವಲ್ಲಿ ಕಣ್ಣಿನ ಪಾತ್ರ ಮಹತ್ವದ್ದು .ಕಣ್ಣನ್ನ ನೋಡ್ತಾ ಇದ್ದಂತೆ ಮತ್ತೊಬ್ಬರ ಒಳ ಮನಸು ಅರ್ಥವಾಗುತ್ತದೆ. ಹೀಗೆ ಕಣ್ಣಿನ ಅಂದವನ್ನು ಮತ್ತಷ್ಟು ಹೆಚ್ಚಿಸುವುದಕ್ಕೆ ಹೆಚ್ಚು ಹೆಣ್ಣುಮಕ್ಕಳು ಕಾಡಿಗೆ ಮಸ್ಕರಾ ಹಚ್ಚಿಕೊಳ್ಳುತ್ತಾರೆ. ಮಸ್ಕರಾ ಹಚ್ಚುವುದು ಸುಲಭ ಆದರೆ ತೆಗೆಯುವುದು ತುಂಬಾನೇ ಕಷ್ಟಕರ. ತೆಗೆಯುವಾಗ ಸ್ವಲ್ಪ ಆಚೆ ಈಚೆ ಆದ್ರೂ ಕಣ್ಣಿನ ಸುತ್ತ ಕಪ್ಪಾಗುತ್ತದೆ.
ಮೇಕಪ್ ರಿಮೂವರ್ ಇದ್ದಾಗ ಸುಲಭವಾಗಿ ಮಸ್ಕರ ಅಥವಾ ಕಾಜಲನ್ನು ತೆಗೆಯಬಹುದು ಆದರೆ ನಿಮ್ಮ ಬಳಿ ಮೇಕಪ್ ರಿಮೂವರ್ ಇಲ್ಲದಿದ್ದಾಗ ಮನೆಯಲ್ಲಿರುವ ಕೆಲವು ಪದಾರ್ಥಗಳನ್ನ ಬಳಸಿ ಸುಲಭವಾಗಿ ಕಣ್ಣಿನ ಮಸ್ಕರಾ ತೆಗೆಯಬಹುದು ಅದು ಹೇಗೆ ಅನ್ನೋದರ ಟಿಪ್ಸ್ ಇಲ್ಲಿದೆ.
ಆಲಿವ್ ಆಯಿಲ್
ನಿಮ್ಮ ಬೆರಳುಗಳಿಗೆ ಒಂದೆರಡು ಡ್ರಾಪ್ ಆಲಿವ್ ಎಣ್ಣೆಯನ್ನು ಹಾಕಿ ಕಣ್ಣಿನ ರೆಪ್ಪೆಗಳಿಗೆ ಅವುಗಳನ್ನ ಹಚ್ಚಿ ಒಂದಿಷ್ಟು ಸೆಕೆಂಡ್ ಗಳು ಹಾಗೆ ಬಿಡಿ. ನಂತರ ಕಾಟನ್ ಬಟ್ಟೆಯಿಂದ ವೈಫ್ ಮಾಡುವುದರಿಂದ ಮಸ್ಕಾರವನ್ನು ಈಜಿಯಾಗಿ ತೆಗೆಯಬಹುದು.
ಬೇಬಿ ಆಯಿಲ್
ಮಕ್ಕಳಿರುವ ಮನೆಯಲ್ಲಿ ಖಂಡಿತವಾಗಿಯೂ ಬೇಬಿ ಆಯಿಲ್ ಇದ್ದೇ ಇರುತ್ತದೆ ಒಂದು ಕಾಟನ್ ಪಾಡಿಗೆ ಮೂರ್ನಾಲ್ಕು ಡ್ರಾಪ್ ಅಷ್ಟು ಬೇಬಿ ಆಯಿಲ್ ಅನ್ನು ಹಾಕಿ ನಂತರ ಅದರಿಂದ ಮಸ್ಕಾರವನ್ನ ಒರೆಸಬೇಕು.
ಲಿಪ್ ಬಾಮ್
ಕೆಲವೊಂದು ಲಿಪ್ ಬಾಮ್ ಗಳನ್ನ ಬಳಸಿಯು ಕೂಡ ಮಸ್ಕಾರವನ್ನ ತೆಗೆಯಬಹುದು .ಆದರೆ ಪ್ರತಿದಿನ ಬಳಸಬೇಡಿ. ನಿಮ್ಮ ಬೆರುಗುಳುಗಳಿಗೆ ಲಿಂಬುನ್ನ ಹಾಕಿ ನಂತರ ಅವುಗಳನ್ನ ಕಣ್ಣಿನ ರೆಪ್ಪೆಗಳಿಗೆ ಹಚ್ಚಿ, ಒಂದು ಕಾಟನ್ ಬಟ್ಟೆಯಿಂದ ಮಸ್ಕರವನ್ನ ವೈಪ್ ಮಾಡಬಹುದು.
ಸ್ಟೀಮ್
ಒಂದು ಬೌಲ್ಗೆ ಕುದಿಸಿದ ಬಿಸಿ ನೀರನ್ನು ಹಾಕಿ ಅದರ ಸ್ಟೀಮ್ ತೆಗೆದುಕೊಳ್ಳುವುದರಿಂದ ಈಜಿಯಾಗಿ ಮುಖದ ಮೇಕಪ್ ತೆಗೆಯಬಹುದು ಹಾಗೂ ಮಸ್ಕರವನ್ನ ಕೂಡ ವರಿಸಬಹುದು .ಸ್ಟೀಮ್ ತೆಗೆದುಕೊಂಡು ನಂತರ ಒಂದು ಕಾಟನ್ ಬಟ್ಟೆಯಿಂದ ಮಸ್ಕರವನ್ನು ಒರೆಸಿ.