ಮನೆಯಲ್ಲಿ ಚಿನ್ನದ ಸರ, ರಿಂಗ್,ಒಲೆ,ಬ್ರೇಸ್ಲೆಟ್ ಒಂದಿಷ್ಟು ಆಭರಣಗಳು ಪೂಜಾ ವಸ್ತುಗಳು ಹೀಗೆ ಸಾಕಷ್ಟಿರುತ್ತದೆ. ಹೊಸದಾಗಿ ತಂದಾಗ ಚಿನ್ನ ವಸ್ತುಗಳ ಹೊಳಪು ಹೆಚ್ಚಿರುತ್ತದೆ. ದಿನೇ ದಿನೇ ಕಳೆದಂತೆ ಅವು ತಮ್ಮ ಹೊಳಪುವನ್ನು ಕಳೆದುಕೊಳ್ಳುತ್ತವೆ. ಹಾಗೂ ಕೆಲ್ಕಾ ಭಾರಿ. ವಸ್ತುಗಳಲ್ಲಿ ಕಪ್ಪಾಗುತ್ತವೆ.. ವಸ್ತುಗಳಲ್ಲಿ ಇರುವಂತಹ ಕಲೆಗಳನ್ನ ಶಮನ ಮಾಡಿ ಹೊಳೆಯುವಂತೆ ಮಾಡಲು ಈ ಸಿಂಪಲ್ ಟಿಪ್ಸ್ ಅನ್ನ ಟ್ರೈ ಮಾಡಿ.

ಸೂಪ್ ಅಥವಾ ಶಾಂಪು
ಒಂದು ಬೌಲಲ್ಲಿ, ಒಂದೆರಡು ಟೇಬಲ್ ಸ್ಪೂನ್ ನಷ್ಟು ಶಾಂಪೂ ಹಾಕಿ ಚಿನ್ನದ ಸರ ಅಥವಾ ಆಭರಣಗಳನ್ನ ಕೆಲವು ನಿಮಿಷಗಳ ಕಾಲ ನೆನೆಯಲು. ಬಿಡಿ ನಂತರ ಒಂದು ಬ್ರಷ್ ನಿಂದ ಚೆನ್ನಾಗಿ ಉಜ್ಜಿದರೆ ಕಪ್ಪು ಕಲೆಗಳು ತಕ್ಷಣವೇ ಹೋಗುತ್ತದೆ.
ಅಡುಗೆ ಸೋಡಾ
ಒಂದು ಟೇಬಲ್ ಸ್ಪೂನ್ ಅಷ್ಟು ಅಡುಗೆ ಸೋಡಕ್ಕೆ ಸ್ವಲ್ಪ ನೀರನ್ನು ಹಾಕಿ ನಂತರ ಆ ಮಿಶ್ರಣವನ್ನ ಚಿನ್ನದ ಆಭರಣಗಳ ಮೇಲೆ ಲೇಪಿಸಿ. ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಟೂತ್ ಬ್ರೆಶ್ ಇಂದ ಚೆನ್ನಾಗಿ ಉಜ್ಜುವುದರಿಂದ ಕಲೆಗಳು ಶಮನಗೊಳ್ಳುತ್ತವೆ.

ವೈಟ್ ವಿನೆಗರ್
ಒಂದೆರಡು ಟೇಬಲ್ ಸ್ಪೂನ್ ಅಷ್ಟು ವೈಟ್ ವಿನೆಗರ್ ಅನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ. ನಂತರ ಚಿನ್ನದ ಪದಾರ್ಥಗಳನ್ನ ಆ ನೀರಿನೊಳಗೆ ಹಾಕಿ 10 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಬ್ರಷ್ ನಿಂದ ಉಜ್ಜಿರಿ.ಬೇಗನೆ ರಿಸಲ್ಟ್ ಸಿಗುತ್ತದೆ.

ಟೂತ್ ಪೇಸ್ಟ್
ಪ್ರತಿಯೊಬ್ಬರ ಮನೆಯಲ್ಲೂ ಪೇಸ್ಟ್ ಇದ್ದೇ ಇರುತ್ತದೆ. ಚಿನ್ನದ ಆಭರಣಗಳ ಮೇಲೆ ಟೂತ್ಪೇಸ್ಟ್ ಲೇಪಿಸಿ. ಒಂದಿಷ್ಟು ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ವಾಶ್ ಮಾಡುವುದರಿಂದ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.
ಹಾಗೂ ಯಾವುದೇ ಕಾರಣಕ್ಕೂ ಹಾರ್ಷ್ ಕೆಮಿಕಲ್ಸ್ ಅನ್ನ ಬಳಸಬೇಡಿ , ಚಿನ್ನದ ಆಭರಣಗಳನ್ನ ವಾಶ್ ಮಾಡಿದ ನಂತರ ಒಂದು ಕಾಟನ್ ಬಟ್ಟೆಯಿಂದ ಹೊರಸಿಡಿ ,ಹಾಗೂ ತಂಪಾಗಿರುವ ಸ್ಥಳದಲ್ಲಿ ಇಡುವುದು ಉತ್ತಮ.






