• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಚಿತ್ರರಂಗದಲ್ಲಿ ಮೀಟೂ ಆರೋಪ.. ವಾಣಿಜ್ಯ ಮಂಡಳಿ ಸಭೆ ಅಪೂರ್ಣ

ಕೃಷ್ಣ ಮಣಿ by ಕೃಷ್ಣ ಮಣಿ
September 16, 2024
in ಕರ್ನಾಟಕ, ಸಿನಿಮಾ
0
ಚಿತ್ರರಂಗದಲ್ಲಿ ಮೀಟೂ ಆರೋಪ.. ವಾಣಿಜ್ಯ ಮಂಡಳಿ ಸಭೆ ಅಪೂರ್ಣ
Share on WhatsAppShare on FacebookShare on Telegram

ADVERTISEMENT

ಕೇರಳದಲ್ಲಿ ಜಸ್ಟೀಸ್‌ ಹೇಮಾ ಸಮಿತಿ ವರದಿ ಬಳಿಕ ಕರ್ನಾಟಕದಲ್ಲೂ ಲೈಂಗಿಕ ದೌರ್ಜನ್ಯದ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ಮಾಡುವಂತೆ FIRE ಸಂಸ್ಥೆ ಒತ್ತಾಯ ಮಾಡಿತ್ತು. ಕಲಾವಿದರೂ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಮಂದಿ ಸಹಿ ಮಾಡಿದ್ದರು. ಸಿಎಂ ಸಿದ್ದರಾಮಯ್ಯಗೆ ಮನವಿ ಕೊಟ್ಟ ಬಳಿಕ ಮಹಿಳಾ ಆಯೋಗ ಈ ಬಗ್ಗೆ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಸಭೆ ಆಯೋಜನೆಗೆ ಸೂಚಿಸಿತ್ತು. ಅದರಂತೆ ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆದಿದ್ದು, ಸಭೆ ಅಪೂರ್ಣವಾಗಿ ಮುಕ್ತಾಯವಾಗಿದೆ.

ಮೀಟೂ ಆರೋಪ ವಿಚಾರವಾಗಿ ಫಿಲ್ಮ್ ಚೇಂಬರ್‌‌ನಲ್ಲಿ ಮಹತ್ವದ ಸಭೆ ನಡೆಸಲಾಯ್ತು. ಕನ್ನಡ ಚಿತ್ರರಂಗಕ್ಕೆ ಕೇರಳ ಮಾದರಿ ಕಮಿಟಿ ಬೇಕು ಅಂತಾ ಸಿಎಂಗೆ ಮನವಿ ಸಲ್ಲಿಸಿದ ಬಳಿಕ ಫಿಲ್ಮ್ ಚೇಂಬರ್​ನಲ್ಲಿ ಸಭೆ ನಡೆಸಿ ಕಮಿಟಿ ಬೇಕಾ..? ಬೇಡವಾ..? ಅನ್ನೋ ಬಗ್ಗೆ ಸದಸ್ಯರು ಚರ್ಚೆ ನಡೆಸಿದ್ರು. ಸಭೆಯಲ್ಲಿ ಮೀಟೂ ಪರ ವಿರೋಧ ಇರುವ ಸದಸ್ಯರ ನಡುವೆ ಜಟಾಪಟಿ ನಡೆದಿದ್ದು, ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಹಾಗೂ ಮಹಿಳಾ ಆಯೋಗದ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಗಲಾಟೆ ನಡುವೆ ಸಭೆಗೆ ಆಗಮಿಸಿದ್ದ ಕಲಾವಿದರು ವಾಪಸ್ ಎದ್ದು ಹೋಗಿದ್ದಾರೆ.

ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್, ಇವತ್ತು ಕಲಾವಿದರು, ನಿರ್ಮಾಪಕರ ಜೊತೆ ಚರ್ಚೆ ನಡೆಸಿದ್ದೇವೆ. ಕಮಿಟಿ ಆದ್ರೆ ಸಮಸ್ಯೆ ಹೊರ ಬರುತ್ತೆ ಅಂತ ಅಲ್ಲ. ಇಂತಹ ಕಮಿಟಿ ಆದ್ರೆ ವ್ಯಾಪಾರ ವ್ಯವಹಾರಕ್ಕೆ ಸಮಸ್ಯೆ ಆಗುತ್ತದೆ. ಇದರಿಂದ ಸಣ್ಣಪುಟ್ಟ ನಿರ್ಮಾಪಕರಿಗೆ ಸಮಸ್ಯೆ ಎದುರಾಗುತ್ತದೆ ಎಂದಿದ್ದಾರೆ. ಇನ್ನು ನಟಿ ನೀತು ಮಾತನಾಡಿ, ಪಾಶ್ ಕಮಿಟಿ ಆಗಬೇಕು ಅನ್ನೋದು ಗೆಜೆಟ್ ಅಲ್ಲೇ ಇದೆ. ಇವತ್ತಿನ ಸಭೆಯಲ್ಲಿ ಸಮಸ್ಯೆ ಕೇಳಬೇಕು ಅಂತ ಬಂದಿರೋದು. ಕೆಲವರು ಇದೆಲ್ಲ ಎನು ಇಲ್ಲ ಅಂದ್ರು. ನನಗೆ ಆಗಿರೋ ಸಮಸ್ಯೆ ಬಗ್ಗೆ ನಾನು ಒಪೆನ್ ಆಗಿ ಮಾತನಾಡಿದ್ದೀನಿ. ಮಾತನಾಡಲು ನನಗೆ ಬಿಡಲಿಲ್ಲ ಆದ್ರು ಸಹ‌ ಮಾತನಾಡಿದ್ದೀನಿ. ಸಾರಾ ಗೋವಿಂದ್ ನನ್ನನ್ನು ಹತ್ತಿಕ್ಕುವ ಕೆಲಸ ಮಾಡಿದ್ರು. ನನಗೆ ವಾಯ್ಸ್ ಕೊಡಲಿಲ್ಲ ಎಂದಿದ್ದಾರೆ.

ರಾಜ್ಯ ಮಹಿಳಾ ಅಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಮಾತನಾಡಿ, ದೌರ್ಜನ್ಯ ಅಂದಾಗ ದೈಹಿಕ ಇರಬಹುದು ಅಥವಾ ಬೇರೆ ಇರಬಹುದು. ಭಾರತ ಸರ್ಕಾರದ ಗೆಜೆಟೆಡ್ ಕಮಿಟಿ ಇದೆ. ಇದರ ವಿರುದ್ದ ನಾವು ಯಾರು ಮಾತನಾಡೊಕೆ ಆಗಲ್ಲ. ಚಿತ್ರರಂಗಕ್ಕೆ ಮಕ್ಕಳು ಬರಬೇಕಾದರೆ ತಂದೆ ತಾಯಿ ಖುಷಿಯಿಂದ ಕಳಿಸಬೇಕು. ಇದನ್ನೇ ಮಹಿಳಾ ಅಯೋಗವೂ ಬಯಸುತ್ತದೆ. ಪಾಶ್ ಕಮಿಟಿ ಮಾಡಬೇಕು ಅಂತ ಹೇಳಿದ್ದೀವಿ. ಇವತ್ತಿನ ಮೀಟಿಂಗ್‌‌ಗೆ ಬಹಳ ಕಡಿಮೆ ನಟಿಯರು ಬಂದಿದ್ದರು. ಇಲ್ಲೊಂದು ಕಮಿಟಿ ಆದಾಗ ಎಲ್ಲರು ಬರಬೇಕು. ಕಮಿಟಿ ಹೆಂಗಿರಬೇಕು ಅಂತ ಕಾನೂನು ಇದೆ. ಮುಂದಿನ ಸಭೆಗೆ 10 ಜನ ಅಲ್ಲ, ಎಲ್ಲಾ ನಟಿಯರನ್ನು ಕರೆಯಿರಿ. ಹೆಣ್ಣು ಮಗಳು ಶೂಟಿಂಗ್‌‌ನಲ್ಲಿ ಭಾಗಿಯಾದಾಗ ಏನೆಲ್ಲ ವ್ಯವಸ್ಥೆ ಕೊಡಬೇಕು ಕೊಡಿ. ನಾವು ಅಯೋಗದಿಂದಲೂ ಒಂದು ಸರ್ವೆ ಮಾಡ್ತೇವೆ ಎಂದಿದ್ದಾರೆ.

Tags: ambareesh film chamberdhruva film chamberdhruva sarja in film chamberFilm Chamberfilm chamber liveKannadakannada actorKannada FIlm ChamberKannada Film Industrykannada film newskannada live newskannada newskannada pichharme too caseme too case in kannada film industryme too case in sandalwoodsandalwood me too casesandalwood me too casessandalwood metoo casestv5 kannadazee kannada newszee news kannada
Previous Post

ಕೋಲಾರದಲ್ಲಿ ಈದ್‌ ಮೆರವಣಿಗೆ ವೇಳೆ ಘರ್ಷಣೆ

Next Post

ಶಾಸಕ ಮುನಿರತ್ನ ಆರೋಗ್ಯದಲ್ಲಿ ಏರುಪೇರು.. ICU ನಲ್ಲಿ ಚಿಕಿತ್ಸೆ..

Related Posts

ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ: ಕಾರಣವೇನು ಗೊತ್ತೆ ?
Top Story

ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ: ಕಾರಣವೇನು ಗೊತ್ತೆ ?

by ಪ್ರತಿಧ್ವನಿ
May 2, 2026
0

ಖ್ಯಾತ ನಟ-ನಿರ್ದೇಶಕ ರಿಷಭ್ ಶೆಟ್ಟಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದು ಸಿನಿ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಈ ಬಗ್ಗೆ...

Read moreDetails
ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ..

ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ..

May 2, 2026
ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

May 2, 2026
ವಿಮಾನ ಪ್ರಯಾಣದ ಭಯ ಬಿಚ್ಚಿಟ್ಟ ಆಮೀರ್ ಖಾನ್: “ನನಗೆ ಏನಾದರೂ ಆದ್ರೆ ….

ವಿಮಾನ ಪ್ರಯಾಣದ ಭಯ ಬಿಚ್ಚಿಟ್ಟ ಆಮೀರ್ ಖಾನ್: “ನನಗೆ ಏನಾದರೂ ಆದ್ರೆ ….

May 2, 2026
ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   

ಮೊದಲ ದಿನವೇ ಕೆಡಿ ಭರ್ಜರಿ ಓಪನಿಂಗ್:  ಮೊದಲ‌ ದಿನದ ಕಲೆಕ್ಷನ್ ಎಷ್ಟು ?

May 1, 2026
Next Post
ಶಾಸಕ ಮುನಿರತ್ನ ಆರೋಗ್ಯದಲ್ಲಿ ಏರುಪೇರು.. ICU ನಲ್ಲಿ ಚಿಕಿತ್ಸೆ..

ಶಾಸಕ ಮುನಿರತ್ನ ಆರೋಗ್ಯದಲ್ಲಿ ಏರುಪೇರು.. ICU ನಲ್ಲಿ ಚಿಕಿತ್ಸೆ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada