
‘ದೈಜಿ’ Daiji ಮುಂಬರುವ ಥ್ರಿಲ್ಲರ್-ಹಾರರ್ Thriller-Horror)ಚಿತ್ರವಾಗಿದ್ದು, ನಟ ಡಾ.ರಮೇಶ್ Actor Dr. Ramesh)ಅರವಿಂದ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ ಮತ್ತು ಇದನ್ನು ಆಕಾಶ್ Akash Srivatsaravara ಶ್ರೀವತ್ಸರವರು ನಿರ್ದೇಶಿಸಲಿದ್ದಾರೆ.ವಿಭಾ ಕಶ್ಯಪ್ ನಿರ್ಮಾಣದ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ಅವರು ಈ ಚಿತ್ರವನ್ನು ನಿರ್ಮಿಸಲಿದ್ದಾರೆ.

ಈ ಚಿತ್ರವು ಡಾ.ರಮೇಶ್ ಅರವಿಂದ್ ಅವರ 106 ನೇ ಚಿತ್ರವಾಗಿದ್ದು, ಈ ಹಿಂದೆ ಶಿವಾಜಿ ಸುರತ್ಕಲ್ 1 ಮತ್ತು 2 ಸಿನಿಮಾಗಳನ್ನು ನಿರ್ದೇಶಸಿದ್ದ ನಿರ್ದೇಶಕ ಆಕಾಶ್ ಶ್ರೀವತ್ಸರವರು ಮೂರನೇ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊರಲಿದ್ದಾರೆ.ದೈಜಿಯು ಹಾರರ್-ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು,ಈ ಚಿತ್ರದಲ್ಲಿ ಡಾ.ರಮೇಶ್ ಅರವಿಂದ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರತಂಡ ಶೀಘ್ರದಲ್ಲೇ ವಿದೇಶದಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲಿದೆ ಮತ್ತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.ಡಾ.ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡವು ಚಿತ್ರದ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.