ಮೂಡ ಪ್ರಕರಣ (Muda scam) ಗಂಭೀರತೆ ಪಡೆದುಕೊಂಡ ಬೆನ್ನಲ್ಲೇ ರಾಜ್ಯದಲ್ಲಿ ಸಿಎಂ (Cm) ಸ್ಥಾನದ ಬಗ್ಗೆ ಕಾಂಗ್ರೆಸ್ (Congress) ಪಾಳಯದಲ್ಲೇ ಬಹಿರಂಗ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಸಚಿವರ ಹೇಳಿಕೆಗಳನ್ನ ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಅಂತ ಹೇಳಲಾಗ್ತಿದೆ.

ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲದೆ ಇದ್ದರೂ ಸಚಿವರು ಬಹಿರಂಗವಾಗಿ ಈ ಬಗ್ಗೆ ಚರ್ಚಿಸುತ್ತಿದ್ದಾರೆ. ಆರ್.ವಿ.ದೇಶಪಾಂಡೆ (R V Deshpande), ಎಂ.ಬಿ ಪಾಟೀಲ್ (M B patil), ಸತೀಶ್ ಜಾರಕಿಹೊಳಿ (Satish Jarkiholi), ಸೇರಿದಂತೆ ಹಲವು ನಾಯಕರು ಸಿಎಂ ಆಕಾಂಕ್ಷಿಗಳಾಗಿದ್ದು, ಇದೀಗ ಸಿಎಂ ಆಸೆ ವ್ಯಕ್ತಪಡಿಸುತ್ತಿರುವ ಸಚಿವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು ಎಐಸಿಸಿ (AICC) ನಾಯಕರಿಗೂ ಪತ್ರ ಬರೆದು ಸಚಿವರ ಹೇಳಿಕೆಗಳಿಗೆ ಬ್ರೇಕ್ ಹಾಕುವಂತೆ ಸೂಚಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.