ಮಕ್ಕಳು ಬಹಳ ಇಷ್ಟಪಟ್ಟು ಆಡುವ ಆಟಿಕೆಗಳೇ ಅವುಗಳ ಪಾಲಿಗೆ ಜೀವ ಸಂಚಕಾರ ತಂದಿಟ್ಟರೆ ಹೇಗಾಗಬೇಡ ಇದೇ ರೀತಿ ಹಿಮಾಚಲ ಪ್ರದೇಶದ (Himachal Pradesh)ಕಂಗ್ರಾ ಪಟ್ಟಣದ ಆಘಾತಕಾರಿ ಘಟನೆಯಲ್ಲಿ, ಬಲೂನ್ (balloon)ನೊಂದಿಗೆ ಆಟವಾಡುತ್ತಿದ್ದ 13 boy died ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.
ಬಾಲಕ ವಿವೇಕ್ ಶಾಲೆ ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ, ಶಾಲೆಯ ಗೇಟ್ ಬಳಿ ನಿಂತು ಬಲೂನ್ ಊದಲು ಆರಂಭಿಸಿದ್ದ.
ಆದ್ರೆ ಇದ್ದಕ್ಕಿದ್ದ ಹಾಗೇ ಬಲೂನ್ ನಿಂದ ಗಾಳಿ ಹಿಂದಿರುಗಿ ಬಂದು ಆತ ಗಂಟಲು ಸೇರಿದೆ. ಕ್ಷಣಮಾತ್ರದಲ್ಲೇ ಆ ಬಲೂನ್ ಕೂಡ ಬಾಲಕ ವಿವೇಕ್ ಕುಮಾರ್ ನ ಗಂಟಲು ಹೊಕ್ಕಿದೆ. ಇದರಿಂದ ಬಾಲಕ ಅಸ್ವಸ್ಥಗೊಂಡಿದ್ದಾನೆ.
ಈ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಶಾಲೆಯ ಸಿಬ್ಬಂದಿ ತಕ್ಷಣ ಬಾಲಕನನ್ನ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಬಾಲಕನ ಗಂಟಲಿನಿಂದ ಬಲೂನ್ ಹೊರತೆಗೆದಿದ್ದಾರೆ. ಹಾಗಾಗಿಯೂ ಎರಡು ದಿನಗಳ ಸತತ ಚಿಕಿತ್ಸೆಯ ನಂತರವೂ ಬಾಲಕನನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.