• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

‘ಸಿದ್ದರಾಮಯ್ಯ ಹೇಳಿದ್ರೆ ನಾನು ಸಿಎಂ ಆಗ್ತೀನಿ’ ಸಂಚಲನ.. ಸಿಎಂ ಉತ್ತರ

ಕೃಷ್ಣ ಮಣಿ by ಕೃಷ್ಣ ಮಣಿ
September 3, 2024
in Top Story, ಕರ್ನಾಟಕ, ದೇಶ, ರಾಜಕೀಯ, ವಿಶೇಷ
0
‘ಸಿದ್ದರಾಮಯ್ಯ ಹೇಳಿದ್ರೆ ನಾನು ಸಿಎಂ ಆಗ್ತೀನಿ’ ಸಂಚಲನ.. ಸಿಎಂ ಉತ್ತರ
Share on WhatsAppShare on FacebookShare on Telegram

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ Siddaramaiah ಹೆಸರು ತಳುಕು ಹಾಕಿಕೊಂಡಿರುವ ಬೆನ್ನಲ್ಲೇ ಹಿರಿಯ ಸಚಿವ ಆರ್​.ವಿ ದೇಶಪಾಂಡೆ ಹೇಳಿರುವ ಮಾತು ಕಾಂಗ್ರೆಸ್​ ಒಳಗೆ ಸಂಚಲನ ಮೂಡಿಸಿದೆ. ಆರ್​.ವಿ ದೇಶಪಾಂಡೆ ಅವರು ಈ ರೀತಿ ಹೇಳಿಕೆ ಹಿಂದಿನ ಗುಟ್ಟೇನು ಅನ್ನೋ ಬಗ್ಗೆ ಕಾಂಗ್ರೆಸ್​ Congress ಒಳಗೆ ಚರ್ಚೆ ಶುರು ಆಗಿದೆ. ಈ ಬಗ್ಗೆ ಸಾಕಷ್ಟು ಸಚಿವರು ಮಾತನಾಡಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ, ದೇಶಪಾಂಡೆ ಅವರು ಹಿರಿಯರಿದ್ದಾರೆ. ಅದರು ಏನೋ ಹೇಳಿದ್ದಾರೆ. ನಾನು ಅವರ ಮಟ್ಟದಲ್ಲಿ ಮಾತನಾಡಲು ಆಗಲ್ಲ. ನಾನಿನ್ನು ಸಣ್ಣವನು ಎಂದಿದ್ದಾರೆ.

ADVERTISEMENT

ಧಾರವಾಡದಲ್ಲಿ ಸಚಿವ ಎನ್ ಎಸ್ ಭೋಸರಾಜು ಮಾತನಾಡಿ, ದೇಶಪಾಂಡೆ ಅವರು ಅತ್ಯಂತ ಹಿರಿಯರು. 8 ಬಾರಿ ಶಾಸಕರಾದವರು. ಸಿದ್ದರಾಮಯ್ಯ ಹೇಳಿದ್ರೆ ನಾನು ಸಿಎಂ ಆಗ್ತೀನಿ ಅಂತ ಅವರು ಹೇಳಿದ್ದಾರೆ ಅಷ್ಟೇ. ಮೈಸೂರಿಗೆ ಹೋದಾಗ ಮಾಧ್ಯಮದವರು ಪ್ರಶ್ನೆ ಕೇಳಿದ್ದಕ್ಕೆ ಹಾಗೆ ಹೇಳಿದ್ದಾರೆ. ‘ನೋಡಪ್ಪಾ, ನಾನು ಸೀನಿಯರ್ ಇದೀನಿ, ಮಿನಿಸ್ಟರ್ ಆಗಿ ಬಹಳ ದಣಿದುಕೊಂಡಿದ್ದೀನಿ’ ಅಂತ ಹಾಗೆ ಹೇಳಿದ್ದಾರೆ. ಅದನ್ನು ನೀವು ಜಮೀರ್ ಆಹ್ಮದ್​ ಬಳಿ ಕೇಳಿದಾಗ ಅವರು ಸಹ ಯಾರೂ ಬೇಕಾದ್ರೂ ಸಿಎಂ ಆಗಬಹುದು. ಆದ್ರೆ ಸಿದ್ದರಾಮಯ್ಯ ಅಲ್ಲಿದ್ದಾರೆ ಎಂದಿದ್ದಾರೆ. ಯಾರೂ ಕೂಡ ಸಿದ್ದರಾಮಯ್ಯ ವಿರುದ್ಧ ಮಾತಾಡಿಲ್ಲ. ಇಲ್ಲಿ ಸಿಎಂ ಆಗುವ ಆಸೆಯ ಪ್ರಶ್ನೆ ಬರುವುದಿಲ್ಲ. ಪ್ರಸ್ತುತ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ, ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್​ ಪಕ್ಷದಿಂದ ರಾಜ್ಯದ ಜನರು ಆಯ್ಕೆ ಮಾಡಿರುವ 136 ಶಾಸಕರು ಸಿದ್ದರಾಮಯ್ಯ ಪರವಾಗಿದ್ದಾರೆ. ಮೊನ್ನೆ ನಡೆದ ಸಭೆಯಲ್ಲೂ ಎಲ್ಲರೂ ಒಂದೇ ಮಾತಿನಲ್ಲಿ ಹೇಳಿದ್ದು, ಸಿದ್ದರಾಮಯ್ಯ ಜೊತೆ ನಾವಿದ್ದೇವೆ. ನಮ್ಮ ಹೈಕಮಾಂಡ್ ಕೂಡ ಸಿದ್ದರಾಮಯ್ಯ ಜೊತೆಗಿದೆ. ಮುಂದೆ ಇನ್ನೊಬ್ಬರು ಸಿಎಂ ಆಗೋದು ಈಗ ಅಪ್ರಸ್ತುತ ಎಂದಿದ್ದಾರೆ ಸಚಿವ ಭೋಸರಾಜು.

ಈ ಬಗ್ಗೆ ಮೈಸೂರಿನಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಮಾತನಾಡಿ, ಸಿಎಂ ಮಾಡುವುದು ಯಾರು ಹೇಳಿ..? ಶಾಸಕರು ಹಾಗೂ ಹೈಕಮಾಂಡ್ ನಾಯಕರು. ಸಿಎಂ ಯಾರಾಗಬೇಕು ಎಂದು ತೀರ್ಮಾನ ಅವರು ಮಾಡುವಾಗ ನಾನು ಹೇಗೆ ಸಿಎಂ ಮಾಡಲಿ..? ಎಂದು ಪ್ರಶ್ನೆ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯ. ಈ ಮೂಲಕ ಸಿದ್ದರಾಮಯ್ಯ ಅನುಮತಿ ಕೊಟ್ರೆ ಸಿಎಂ ಆಗುತ್ತೇನೆ ಎಂಬ ದೇಶಪಾಂಡೆ ಹೇಳಿಕೆಯನ್ನು ನಯವಾಗಿಯೇ ತಳ್ಳಿ ಹಾಕಿದ್ದಾರೆ.

Tags: BJPCM Siddaramaiahcm siddaramaiah latest newscm siddaramaiah reacts on rv deshpande statementcm siddaramaiah wife in muda scamCongress Partydeshpande rvkarnataka cm siddaramaiahminister rv deshpandeR V DeshpandeRV Deshpanderv deshpande latest newsrv deshpande ministerrv deshpande newsrv deshpande news liverv deshpande speechrv deshpande today newssiddaramaiahsiddaramaiah muda scamsiddaramaiah newssiddaramaiah on rv deshpandeಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಗೋವು ಕಳ್ಳನೆಂದು ತಪ್ಪಾಗಿ ಭಾವಿಸಿ PUC ವಿದ್ಯಾರ್ಥಿ ಹತ್ಯೆ: 25 KM ಚೇಸ್​ ಮಾಡಿ ಗುಂಡಿಕ್ಕಿದ ಸ್ವಘೋಷಿತ ಗೋರಕ್ಷಕರು!

Next Post

ಆಂಧ್ರದಲ್ಲಿ ಭಾರೀ ಮಳೆ ! 110 ರೈಲುಗಳ ಸಂಚಾರ ಬಂದ್ !

Related Posts

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!
Top Story

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!

by ಪ್ರತಿಧ್ವನಿ
April 20, 2026
0

ಬೆಂಗಳೂರು : ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು‌ ಕಳೆದ ಮಾರ್ಚ್‌ 29ರಂದು ಜಲಸಮಾಧಿಯಾಗಿರುವ ಘಟನೆಗೆ...

Read moreDetails
ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ  : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

April 20, 2026
“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

April 20, 2026
ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

April 20, 2026
ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

April 20, 2026
Next Post
ಆಂಧ್ರದಲ್ಲಿ ಭಾರೀ ಮಳೆ ! 110 ರೈಲುಗಳ ಸಂಚಾರ ಬಂದ್ !

ಆಂಧ್ರದಲ್ಲಿ ಭಾರೀ ಮಳೆ ! 110 ರೈಲುಗಳ ಸಂಚಾರ ಬಂದ್ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada