• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಗ್ರಾಮೀಣ ಮಹಿಳಾ ಉದ್ಯಮಶೀಲರಿಗೆ ನೆರವಾಗಲು ಸರ್ಕಾರ ಜಿಲ್ಲಾ ಮಟ್ಟದಲ್ಲಿ “ಸ್ವಾವಲಂಭನೆ” ಕಾರ್ಯಕ್ರಮವನ್ನು ವಿಸ್ತರಿಸಲಿದೆ

ಪ್ರತಿಧ್ವನಿ by ಪ್ರತಿಧ್ವನಿ
August 29, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಬೆಂಗಳೂರು: ಕೋಲಾರದ ಸಾಮಾನ್ಯ ಬಡ ಕುಟುಂಬದ ಗೃಹಿಣಿ ಜಯಸುಧಾ ಜೀವನ ನಡೆಸಲು ಕಷ್ಟವಾಗುತಿತ್ತು.ಆಕೆಗೆ ಮೂರು ಬೆಳೆದು ನಿಂತ ಮಕ್ಕಳಿದ್ದರು. ನಿತ್ಯದ ಬದುಕಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಜಯಸುಧಾ ಅವರಿಗೆ ಸಾಧ್ಯವಾಗುತ್ತಿರಲಿಲ್ಲ.

ADVERTISEMENT

ಹೀಗಿರಲಾಗಿ ಭರವಸೆಯನ್ನೇ ಕಳೆದುಕೊಂಡಿದ್ದ ಜಯಸುಧಾ ಅವರಿಗೆ ಹೇಗೋ ಸರ್ಕಾರದ “ಸ್ವಾವಲಂಭನೆ” ಯೋಜನೆಯ ಪರಿಚಯವಾಗುತ್ತದೆ. ಈ ಯೋಜನೆಯಡಿಯಲ್ಲಿ ಸ್ವಸಹಾಯ ಗುಂಪುಗಳಲ್ಲಿನ ಮಹಿಳೆಯರ ಉದಮಶೀಲತೆಯ ಉತ್ಸಾಹವನ್ನು ಪೋಷಿಸುವ ಅವಕಾಶಗಳಿಗೆ ಆಕೆ ತೆರೆದುಕೊಂಡರು. ಕರ್ನಾಟಕ ರಾಷ್ಟೀಯ ಜೀವನೋಪಾಯ ಇಲಾಖೆಯ ಈ ಯೋಜನೆಯು ಜಯಸುಧಾ ಅವರ ಬದುಕನ್ನೇ ಬದಲಿಸಿಬಿಟ್ಟಿದೆ.

ಆಕೆ ಅಡುಗೆ ಹಾಗೂ ಆರೋಗ್ಯ ಸಂಬಂಧಿಸಿದ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲು ತೊಡಗಿದರು. ಇದೀಗ ಜಯಸುಧಾ ವಾರ್ಷಿಕ ಎರಡು ಲಕ್ಷ ರೂಪಾಯಿಗಳಷ್ಟು ವಹಿವಾಟು ನಡೆಸುತ್ತಿದ್ದಾರೆ. ಎರಡು ದಿನಗಳ ಕಾಲ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ “ ಉದ್ಯಮಶೀಲ ಮಹಿಳೆಯರ ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ಜಯಸುಧಾ ಅವರಂತೆ ಸುಮಾರು 150 ಮಹಿಳೆಯರು ತಮ್ಮ ಯಶೋಗಾಥೆಯುನ್ನು ಹೇಳಿಕೊಂಡರು.

ಸಮಾವೇಶವನ್ನು ಉದ್ಘಾಟಿಸಿದ ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ವೈಧ್ಯಕ್ಷೀಯ ಶಿಕ್ಷಣ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಗ್ರಾಮೀಣ ಆರ್ಥಿಕತೆಗೆ ಕೊಡುಗೆ ನೀಡುತ್ತಿರುವ ಮಹಿಳಾ ಸ್ವಸಹಾಯ ಗುಂಪಿನ ಉದ್ಯಮಶೀಲ ಮಹಿಳೆಯರನ್ನು ಹಾಡಿಹೊಗಳಿದರು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಡಾ.ಪಾಟೀಲರು ಸರ್ಕಾರದ ’ಸ್ವಾವಲಂಭನೆ” ಯೋಜನೆಯು ಗ್ರಾಮೀಣ ಮಹಿಳೆಯರನ್ನು ಉದ್ಯಮಶೀಲರನ್ನಾಗಿಸುವಲ್ಲಿ ಮತ್ತು ಸಶಕ್ತರನ್ನಾಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು. “ಸ್ವಾವಲಂಭನೆ” ಯೋಜನೆಯು ಐ ಐ ಎಂ ಬೆಂಗಳೂರಿನ ಸಹಯೋಗದಲ್ಲಿ 2023 ರ ಅಕ್ಟೋಬರ್ 11 ರಂದು ಉದ್ಘಾಟನೆಗೊಂಡಿತ್ತು.

ಈ ಕಾರ್ಯಕ್ರಮವು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗಾಗಿ ನಮ್ಮ ಸಾಂಘಿಕ ಪ್ರಯತ್ನದ ಫಲ, ಇದು ಸ್ವಸಹಾಯ ಸಂಘಗಳ ಗ್ರಾಮೀಣ ಮಹಿಳೆಯರಲ್ಲಿ ಉದ್ಯಮಶೀಲತೆಯ ಉತ್ಸಾಹ ಚಿಮ್ಮಿಸುವ ಹಾಗೂ ಸುಸ್ಥಿರ ಬದುಕು ಕಟ್ಟಿಕೊಳ್ಳುವ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಸದೃಢಗೊಳಿಸುವ ಮಹತ್ವದ ಕಾರ್ಯಕ್ರಮವಾಗಿದೆ. ಇದರ ಗುರಿ 150 ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರಿಗೆ ನೆರವು ಕೊಡುವುದಾಗಿತ್ತು ಆದರೆ ನಮ್ಮ ಗುರಿಯನ್ನೂ ದಾಟಿದ ಈ ಯೋಜನೆಯು ಗ್ರಾಮೀಣ ಭಾಗದಲ್ಲಿ ಮಹತ್ವದ ಮೈಲಿಗಲ್ಲನ್ನು ಸೃಷ್ಟಿಸಿದೆ ಎಂದು ಸಚಿವ ಡಾ. ಪಾಟೀಲರು ಅಭಿಮಾನದಿಂದ ನುಡಿದರು.

ಇದೀಗ 40,000 ಮಹಿಳೆಯರು ಸರ್ಕಾರದ ನೆರವಿಗೆ ಅರ್ಜಿ ಸಲ್ಲಿಸಿದ್ದಾರೆ, ಈ ಹಿನ್ನೆಲೆಯಲ್ಲಿ ಸರ್ಕಾರವು ಜಿಲ್ಲಾ ಮಟ್ಟದಲ್ಲಿ ಸ್ವಾವಲಂಭನೆ ಯೋಜನೆಯನ್ನು ಆರಂಭಿಸಲಿದೆ. ಅದರ ಫಲವಾಗಿ ಗ್ರಾಮೀಣ ಭಾಗದ ಹೆಚ್ಚಿನ ಮಹಿಳೆಯರಿಗೆ ಯೋಜನೆಯ ಅನುಕೂಲ ಸಿಗಲಿದೆ ಎಂದು ಹೇಳಿದರು.

ಕರ್ನಾಟಕ ಸರ್ಕಾರದ ಜೀವನೋಪಾಯ ಮಿಷನ್ ನ ನಿರ್ದೇಶಕರಾದ ಶ್ರೀವಿಧ್ಯಾ, ಹೆಚ್ಚುವರಿ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್ ಒಡೆಯರ್, ಗ್ರಾಮೀಣ ಜೀವನೋಪಾಯ ಕೇಂದ್ರದ ನಿರ್ದೇಶಕರಾದ ಎಸ್.ಎಂ. ರಾಜೇಶ್ವರಿ, ತ್ರಿಪುರಾ ಜೀವನೋಪಾಯ ಮಿಷನ್ ನ ಸಿ.ಇ.ಒ ಅಜಿತ್ ಶುಕ್ಲಾ ದಾಸ್, ಹರಿಯಾಣ ಜೀವನೋಪಾಯ ಮಿಷನ್ ನ ಸಿ.ಇ.ಒ ಡಾ. ಅರವಿಂದ್ ಕೌರ್, ಕೊಲ್ಕತ್ತಾ ಐಐಎಂ ನ ಸಿ.ಇ.ಒ ಗೌರವ್ ಕಪೂರ್, ಪಶ್ಚಿಮ ಬಂಗಾಳದ ಜೀವನೋಪಾಯ ಮಿಷನ್ ನ ಸಿ.ಇ.ಒ ಸುದೀಪ್ ಸರ್ಕಾರ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Tags: Congress Partye-marketMinister Dr. Sharan Prakash PatilSwavalambane” scheme
Previous Post

ಅವನೇನು ರೋಲ್‌ ಮಾಡೆಲ್ಲಾ ಸಮಾಜಕ್ಕೆ?

Next Post

ವಾಸ್ತವಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದೆ “ತದ್ವಿರುದ್ಧ”

Related Posts

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ
Top Story

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

by ಪ್ರತಿಧ್ವನಿ
April 29, 2026
0

ಕೊಲ್ಕತ್ತಾ ಸೇರಿ ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ನಡೆದ ಮತದಾನದಲ್ಲಿ ಭರ್ಜರಿ ಸ್ಪಂದನೆ ಕಂಡುಬಂದಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಅರ್ಗವಾಲ್ ಮಾಹಿತಿ ನೀಡಿದಂತೆ, ಒಟ್ಟು ಮತದಾನದ...

Read moreDetails
ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

April 29, 2026
ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

April 29, 2026
ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

April 29, 2026
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
Next Post

ವಾಸ್ತವಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದೆ "ತದ್ವಿರುದ್ಧ"

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada