ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renuka swamy murder case) ಆರೋಪಿ, ನಟ ದರ್ಶನ್ (actor darshan) ಪರಪ್ಪನ ಅಗ್ರಹಾರ ಜೈಲಿ ಪಾಲಾಗಿದ್ದ ಸಂದರ್ಭದಲ್ಲಿ ಅವರಿಗೆ ಖೈದಿ ನಂಬರ್ ನೀಡಲಾಗಿತ್ತು. 6106 ಎಂಬ ಈ ನಂಬರ್ ಭಾರೀ ಫೇಮಸ್ ಆಗಿತ್ತು. ದರ್ಶನ್ ರ ಅಭಿಮಾನಿಗಳು ತಮ್ಮ ಗಾಡಿಗಳ ಈ ಖೈದಿ ನಂಬರ್ ಹಾಕಿಸಿ ಸಪೋರ್ಟ್ ತೋರಿದ್ರು. ಈಗ ದರ್ಶನ್ ಕೈದಿ ನಂಬರ್ ಚೇಂಜ್ ಆಗಿದೆ.
ಹೌದು, ಈ 6106 ಖೈದಿ ನಂಬರ್ನ ದರ್ಶನ್ ಗೆ ಪರಪ್ಪನ ಅಗ್ರಹಾರದಲ್ಲಿ (Parappana agrahara) ಕೊಡಲಾಗಿತ್ತು.ಆದ್ರೆ ಈಗ ಅವರನ್ನ ಬಳ್ಳಾರಿಯ ಜೈಲಿಗೆ ಶಿಫ್ಟ್ ಮಾಡಿರುವ ಹಿನ್ನಲೇ ದರ್ಶನ್ ಖೈದಿ ನಂಬರ್ ಕೂಡ ಚೇಂಜ್ ಆಗಿದ್ದು 511 ನಂಬರ್ ಕೊಡಲಾಗಿದೆ.
ಬಳ್ಳಾರಿ ಜೈಲಿನಲ್ಲಿ (Bellary jall) ಇರುವ ಖೈದಿಗಳ ಸಂಖ್ಯೆ ಕಡಿಮೆ ಇದೆ. ಒಮ್ಮೆ ಬಳ್ಳಾರಿಯ ಜೈಲಿನಲ್ಲಿ ಎಂಟ್ರಿ ಆದ್ಮೇಲೆ, ದರ್ಶನ್ ಖೈದಿ ನಂಬರ್ 511 ಆಗಿ ಬದಲಾಗಿದೆ.ಹೀಗಾಗಿ, ಗಾಡಿಗಳಿಗೆ ಅಭಿಮಾನಿಗಳು ಹಾಕಿಸಿರು ಸಿಕ್ಚರ್ ನ ಬದಲಿಸಿ ಹೊಸ ಕೈದಿ ನಂಬರ್ ಹಾಕಿಸಿಕೊಳ್ಳಬೇಕಾಗಬಹುದು.