![](https://pratidhvani.com/wp-content/uploads/2024/07/1002256328.jpg)
ಮಂಗಳವಾರ ಅಮೆರಿಕದ ಇಂಡಿಯಾನಾ ರಾಜ್ಯದಲ್ಲಿ ಶಂಕಿತ ರಸ್ತೆ ಆಕ್ರೋಶ ಘಟನೆಯಲ್ಲಿ 29 ವರ್ಷದ ಭಾರತೀಯ ಮೂಲದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನವವಿವಾಹಿತ ಗವಿನ್ ದಸೌರ್ ತನ್ನ ಮೆಕ್ಸಿಕನ್ ಪತ್ನಿಯೊಂದಿಗೆ ಮನೆಗೆ ಹೋಗುತ್ತಿದ್ದಾಗ ಇಂಡಿ ನಗರದ ಆಗ್ನೇಯ ಭಾಗದ ರಸ್ತೆ ವಿವಾದ ಘಟನೆಯ ನಂತರ ಆರೋಪಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ದಸೌರ್ ಅವರು ಆಗ್ರಾದವರಾಗಿದ್ದು ಅವರ ಸಾವಿಗೆ ಕೇವಲ ಎರಡು ವಾರಗಳ ಮೊದಲು ವಿವಿಯಾನಾ ಝಮೋರಾ ಅವರನ್ನು ಜೂನ್ 29 ರಂದು ಮದುವೆಯಾಗಿದ್ದರು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ದಸೌರ್ ತನ್ನ ಕಾರಿನಿಂದ ಕೆಳಗೆ ಇಳಿದು ಪಿಕಪ್ ಟ್ರಕ್ನ ಚಾಲಕನೊಂದಿಗೆ ಕಿರುಚುತ್ತಿದ್ದರು. ನಂತರ ದೌಸರ್ ತನ್ನ ಕೈಯಲ್ಲಿದ್ದ ರಿವಾಲ್ವರ್ ನಿಂದ ಟ್ರಕ್ನ ಬಾಗಿಲಿಗೆ ಗುದ್ದುತ್ತಾನೆ.
ಪಿಕಪ್ ಟ್ರಕ್ನ ಚಾಲಕ ದಸೌರ್ ಗೆ ಗುಂಡು ಹಾರಿಸುವ ಮೂಲಕ ಪ್ರತಿಕ್ರಿಯಿಸುತ್ತಾನೆ. ಕೂಡಲೇ ದಸೌರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. “ಅವರು ರಕ್ತಸ್ರಾವವಾಗುತ್ತಿದ್ದಂತೆ ನಾನು ಅವನನ್ನು ಹಿಡಿದುಕೊಂಡೆ ಮತ್ತು ನಾನು ಆಂಬ್ಯುಲೆನ್ಸ್ಗಾಗಿ ಕಾಯುತ್ತಿದ್ದೆ” ಎಂದು ಸಂತ್ರಸ್ತನ ವಿಧವೆ ವಿವಿಯಾನಾ ಝಮೋರಾ ಪೊಲೀಸರಿಗೆ ತಿಳಿಸಿದರು.
ಬಂಧಿತ ಆರೋಪಿ ಆತ್ಮರಕ್ಷಣೆಗಾಗಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. “ಹೆಚ್ಚಿನ ತನಿಖೆಯ ನಂತರ ಮತ್ತು ಮರಿಯನ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿಯೊಂದಿಗೆ ಸಮಾಲೋಚಿಸಿದ ನಂತರ, ಆ ವ್ಯಕ್ತಿಯನ್ನು ಬಿಡುಗಡೆ ಮಾಡಲಾಗಿದೆ” ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.