ಕೊನೆಗೂ ಕನ್ನಡಿಗರ (Kannadigas) ಆಕ್ರೋಶಕ್ಕೆ ಫೋನ್ ಪೇ (Phone pe) ಸಿ ಇ ಓ ಸಮೀರ್ ನಿಗಮ್ (Sameer nigam) ಮಣಿದಿದ್ದಾರೆ .ಬೆಂಗಳೂರಿನಲ್ಲಿ (Bangalore) ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ಸಂಬಂಧಪಟ್ಟಂತೆ ತಾವು ನೀಡಿದ್ದ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಆ ಮೂಲಕ ಕನ್ನಡಿಗರ ಕ್ಷಮೆ ಕೋರಿದ್ದಾರೆ.

ಕರ್ನಾಟಕದಲ್ಲಿ (Karnataka) ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇಕಡ 70ರಷ್ಟು ಉದ್ಯೋಗ ಮೀಸಲಾತಿ ನಿರ್ಧಾರವನ್ನು ಸರ್ಕಾರ ಪ್ರಕಟ ಮಾಡುತ್ತಿದ್ದಂತೆ ಹಲವು ಉದ್ಯಮಿಗಳು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು.ಆ ಪೈಕಿ ಸಿಇಒ ಸಮೀರ್ ನಿಗಮ್ (CEO Sameer nigam) ಕೂಡ ಇದೇ ರೀತಿ ವಿರೋಧದ ಮಾತುಗಳನ್ನಾಡಿದ್ದರು.

ತಾವು ಕರ್ನಾಟಕ ಮತ್ತು ಬೆಂಗಳೂರು ಹಾಗೂ ಕನ್ನಡಿಗರನ್ನು ಅಪಾರವಾಗಿ ಗೌರವಿಸುತ್ತೇವೆ. ನಮ್ಮ ಹೇಳಿಕೆಯ ಅರ್ಥ ಬೇರೆಯೇ ಆಗಿತ್ತು. ಆದರೆ ಒಂದು ವೇಳೆ ನನ್ನ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿದ್ದರೆ ಆ ಹೇಳಿಕೆಯನ್ನು ಹಿಂಪಡೆಯುತ್ತೇನೆ ಎಂದು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಫೋನ್ ಪೇ ಆಪ್ ಅನ್ ಇನ್ಸ್ಟಾಲ್ (Uninstall) ಮಾಡುವ ಅಭಿಯಾನ ಕರ್ನಾಟಕದಲ್ಲಿ ಆರಂಭವಾಗಿತ್ತು ಈ ಮೂಲಕ ಫೋನ್ ಪೇ ಸಿ ಇ ಓ ಹೇಳಿಕೆಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದ್ದರು ಇದರಿಂದ ಎಚ್ಚೆತ್ತುಕೊಂಡ ಕಂಪನಿ ಇದೀಗ ಕನ್ನಡಿಗರ ಕ್ಷಮೆ ಯಾಚಿಸಿದೆ.