ಕುಮಾರಸ್ವಾಮಿ (HD Kumaraswamy) ಕಿಕ್ ಬ್ಯಾಕ್ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ (Dcm DK Shivakumar) ತಿರುಗೇಟು ಕೊಟ್ಟಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿಯವು ಫ್ರೆಸ್ಟೇಶನಲ್ಲಿದ್ದಾರೆ ಎಂದು ವ್ಯಂಗ್ಯ ಮಾಡಿದ್ರು. ಅಲ್ಲದೆ, ಕಿಂಗ್ ಆಫ್ ಕರಪ್ಪನ್ ಅಂತ ನಮ್ಮ ಫ್ಯಾಮಿಲಿಗೆ ಹೆಸರು ಬಂದಿಲ್ಲ. ಯಾವಾದ್ರೂ ಟಿವಿಗೆ ಡಿಬೆಟ್‌ಗೆ ಕರೆಯೋಕೆ ಹೇಳಿ ಬರ್ತೀನಿ ಎಂದು ಹೆಚ್‌ಡಿಕೆಗೆ ಬಹಿರಂಗ ಸವಾಲು ಹಾಕಿದ್ರು.
ನಿನ್ನೆ ಮಂಡ್ಯದ (Mandya) ಸಮಾವೇಶದಲ್ಲಿ ಮಾತನಾಡುವ ಸಂದರ್ಭದಲ್ಲಿ, ಬೆಂಗಳೂರಿನ ಕಸ ವಿವೇವಾರಿಯ ಟೆಂಡರ್‌ನ ಬ್ಲಾಕ್ ಲಿಸ್ಟ್ ಮಾಡಲಾಗಿರುವ ಗುತ್ತಿಗೆದಾರರಿಗೆ ನಿಯಮ ಬಾಹೀರವಾಗಿ 30 ವರ್ಷಕ್ಕೆ ಟೆಂಡರ್ ನೀಡಿದ್ದಾರೆ ಎಂದು ಡಿಕೆ ಮೇಲೆ ಕುಮಾರಸ್ವಾಮಿ ಆರೋಪ ಮಾಡಿದ್ರು.
ಬರೋಬ್ಬರಿ 40 ಸಾವಿರ ಕೋಟಿಗೆ ಟೆಂಡರ್ ನೀಡಿ, 15 ಸಾವಿರ ಕೋಟಿ ಕಿಕ್ ಬ್ಯಾಕ್ (Kick back) | ಪಡೆದಿದ್ದಾರೆ ಎಮದು ಕುಮಾರಸ್ವಾಮಿ ಸ್ಪೋಟಕ ಆರೋಪ ಮಾಡಿದ್ದರು. ಈ ಬಗ್ಗೆ ಇಂದು ಡಿಕೆಶಿ ಪ್ರತಿಕ್ರಿಯಿಸಿದ್ದು, ಯಾವುದೇ ಚರ್ಚೆಗೆ ಸಿದ್ದ ಎಂದು ಸವಾಲು ಹಾಕಿದ್ದಾರೆ.