
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧಾರ್ನಲ್ಲಿ ಎರಡು ನವಜಾತ ಶಿಶುಗಳು ಬುಧವಾರ ಕತ್ತು ಸೀಳಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಂಕೋಟೆ ಗ್ರಾಮದ ಚಜ್ಜಲ ಖಾನಿ ಪ್ರದೇಶದ ಅವರ ಮನೆಯಿಂದ ಎರಡು ಶಿಶುಗಳ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತ್ಯೆ ಮಾಡಿದ ಆರೋಪದ ಮೇಲೆ ಮಗುವಿನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮಾನ್ಕೋಟೆಯ ಚಜ್ಜಲಾ ಖಾನಿ ಪ್ರದೇಶದಲ್ಲಿ 26 ವರ್ಷದ ಮಹಿಳೆ ತನ್ನ ಮನೆಯಲ್ಲಿ ಸಾಮಾನ್ಯ ಹೆರಿಗೆ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ ಮತ್ತು ನಂತರ ಇಬ್ಬರೂ ಮನೆಯ ಸ್ನಾನಗೃಹದಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಎಸ್ಡಿಪಿಒ ಮೆಂಧರ್ ಹಾಗೂ ಪ್ರಭಾರಿ ಪೊಲೀಸ್ ಪೋಸ್ಟ್ ಮಂಕೋಟೆ ಅವರನ್ನೊಳಗೊಂಡ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. “ಈ ಪ್ರಕರಣದ ಆರೋಪಿಯಾಗಿರುವ 26 ವರ್ಷದ ಮಹಿಳೆಯ ಪತಿ ಮೊಹಮ್ಮದ್ ಖುರ್ಷಿದ್ ಎಂಬಾತನನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತಿದ್ದಾರೆ. ಮತ್ತು ಅವಳಿಗಳ ಮೃತ ದೇಹಗಳನ್ನು ಕಾನೂನು ಉದ್ದೇಶಗಳಿಗಾಗಿ ಉಪ ಜಿಲ್ಲಾ ಆಸ್ಪತ್ರೆ ಮೆಂಧರ್ಗೆ ರವಾನಿಸಲಾಗಿದೆ. ಘಟನೆಯ ಕುರಿತು ಹೆಚ್ಚಿನ ವಿವರಗಳು ನಿರೀಕ್ಷಿಸಲಾಗಿದೆ,” ವಕ್ತಾರರು ಹೇಳಿದರು.