ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ (Petrol diesel price hike) ಬಿಸಿ ಬೆನ್ನಲ್ಲೇ ರಾಜ್ಯದ ಜನರಿಗೆ ಇದೀಗ ಮತ್ತೊಂದು ಶಾಕ್ ನೀಡಿದೆ. ಹಾಲಿನ ದರ 2 ರೂಪಾಯಿ ಹೆಚ್ಚಳ ಮಾಡಿ ಕೆಎಂಎಫ್ (KMF) ಆದೇಶ ಹೊರಡಿಸಿದೆ.

1 ಲೀಟರ್ ಹಾಲಿನ ದರ 42 ರೂಪಾಯಿಯಿಂದ 44 ರೂಪಾಯಿಗೆ ಏರಿಕೆಯಾಗಿದೆ. ಅರ್ಧ ಲೀಟರ್ 22 ರಿಂದ 24 ರೂಪಾಯಿಗೆ ಏರಿಕೆಯಾಗಿದೆ. ಇನ್ನೇಲೆ 1 ಲೀಟರ್ ಮತ್ತು ಅರ್ಧ ಲೀಟರ್ ಪ್ಯಾಕೇಟ್‌ನಲ್ಲಿ 50 ಎಂಎಲ್ ಹಾಲು ಜಾಸ್ತಿ ಇರಲಿದೆ.

ಹಾಲಿನ ದರ ಹೆಚ್ಚಳ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Cm siddaramaiah) ಪ್ರತಿಕ್ರಿಯಿಸಿದ್ದಾರೆ. ಹಾಲಿನ ದರ ಹೆಚ್ಚಿಸೋದು ಕೆಎಂಎಫ್. ಇದನ್ನ ಸರ್ಕಾರ ಮಾಡೋದಿಲ್ಲ. ಬೇರೆ ರಾಜ್ಯಗಳ ಪರಿಸ್ಥಿತಿ ನೋಡಿಕೊಂಡು ಬೆಲೆ ಏರಿಕೆ ಮಾಡ್ತಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮ ರಾಜ್ಯದಲ್ಲೇ ಕಡಿಮೆಯಿದೆ. ಈಗಲೇ ಕೆಎಮ್‌ಎಫ್ ಜೊತೆ ಮಾತನಾಡುತ್ತೇನೆ ಅಂತ ಸಿಎಂ ಹೇಳಿದ್ರು.





