ಕ್ಯೂಟ್ ಕಪಲ್ ನಡುವೆ ಭಿನ್ನಾಭಿಪ್ರಾಯ.. ಡಿವೋರ್ಸ್ಗೆ ಅರ್ಜಿ.. ಕಾರಣ ಗೊತ್ತಾ..? ಸಿಂಗರ್ ಱಪರ್ ಚಂದನ್ ಶೆಟ್ಟಿ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಡಿವೋರ್ಸ್ ಮೊರೆ ಹೋಗಿದ್ದಾರೆ. ಕೆರಿಯರ್ ದೃಷ್ಟಿಯಿಂದ ಪರಸ್ಪರ ಸಮ್ಮತಿ ಮೂಲಕ ವಿವಾಹ ವಿಚ್ಛೇದನ ಪಡೆಯಲು ನಿರ್ಧಾರ ಮಾಡಿ Family Court ಗೆ
ಅರ್ಜಿ ಸಲ್ಲಿಕೆ ಮಾಡಿದ್ದಾರೆ ಅನ್ನೋ ಮಾಹಿತಿ ಪ್ರತಿಧ್ವನಿಗೆ ಗೊತ್ತಾಗಿದೆ. ಬೆಂಗಳೂರಿನ ಶಾಂತಿನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನೆ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದು, ಇಂದು ವಿಚಾರಣೆಗೆ ಇಬ್ಬರೂ ಹಾಜರಾಗಿದ್ದರು. ಬಿಗ್ಬಾಸ್ನಲ್ಲಿ ಪರಸ್ಪರ ಪ್ರೀತಿಸಿದ್ದ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ, ಆ ಬಳಿಕ ದಸರಾ ಯುವ ವೇದಿಕೆಯಲ್ಲಿ ಪ್ರೀತಿಯನ್ನು ಬಹಿರಂಗ ಮಾಡಿದ್ದರು. ಇಬ್ಬರ ಜೋಡಿಯನ್ನು ಕಂಡು ಇಡೀ ರಾಜ್ಯವೇ ಕ್ಯೂಟ್ ಕಪಲ್ ಎಂದಿತ್ತು. ಸಾಮಾಜಿಕ ಜಾಲತಾಣದಲ್ಲೂ ಈ ಜೋಡಿ ಕಿಚ್ಚು ಹೊತ್ತಿಸಿತ್ತು. ಚಂದನ್ ಶೆಟ್ಟಿ ಜೊತೆಗೆ ಮದ್ವೆಯಾದ ಬಳಿಕ ದೃಶ್ಯ ಮಾಧ್ಯಮಕ್ಕೆ ಕಾಲಿಟ್ಟ ನಿವೇದಿತಾ ಗೌಡ, ಕಲರ್ಸ್ ಕನ್ನಡದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಗಿಚ್ಚ ಗಿಲಿಗಿಲಿ ಸೇರಿದಂತೆ ಸಾಕಷ್ಟು ಕಾಮಿಡಿ ಕಾರ್ಯಕ್ರಮ, ಫ್ಯಾಮಿಲಿ ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತಿದ್ದರು. ಫೆಬ್ರವರಿ 26, 2020 ರಂದು ಪ್ರೀತಿಸಿ ಮದ್ವೆ ಆಗಿದ್ದ ಜೋಡಿ,
ಅಧಿಕೃತವಾಗಿ ವಿವಾಹ ವಿಚ್ಛೇದನಕ್ಕೆ ಮುಂದಾಗಿದೆ. ಇನ್ನು ಬಿಡುಗಡೆಯಾಗದ ಕ್ಯಾಂಡಿ ಕ್ರಶ್ ಚಿತ್ರದಲ್ಲಿ ಚಂದನ್ ಹಾಗು ನಿವೇದಿತಾ ಒಟ್ಟಿಗೆ ನಟಿಸಿದ್ದು, ಚಿತ್ರ ಬಿಡುಗಡೆ ಆಗುವ ಮೊದಲೇ ದಾಂಪತ್ಯ ಜೀವನದಲ್ಲಿ ದೂರ ಆಗುವುದಕ್ಕೆ ನಿರ್ಧಾರ ಮಾಡಿದ್ದಾರೆ. ಅಗ್ರಿಮೆಂಟ್ ಸಮೇತ ಮತ್ತೆ ಕೋರ್ಟ್ ಮುಂದೆ ಬಂದಿರುವ ನಿವೇದಿತಾ ಗೌಡ, ಚಂದನ್ ಶೆಟ್ಟಿ, ಮಿಡಿಯೇಷನ್ ಸೆಂಟರ್ ನಲ್ಲಿ ವಿಚ್ಚೇದನಕ್ಕೆ ಇಬ್ಬರೂ ಪರಸ್ಪರ ಒಪ್ಫಿಗೆ ಸೂಚಿಸಿದ್ದಾರೆ. ಯಾರೊಬ್ಬರ ಮೇಲೂ ಯಾವುದೇ ಆರೋಪ ಮಾಡದೇ ಒಪ್ಪಿಗೆ ಸೂಚಿಸಿದ್ದಾರೆ. ಕೋರ್ಟ್ ವಿಚಾರಣೆ ನಡೆಸಿ ಮುಂದೂಡಿಕೆ ಮಾಡಿದೆ. ಬಿಗ್ಬಾಸ್ನಲ್ಲಿ ಪ್ರೀತಿಸಿ ಸಪ್ತಪದಿ ತುಳಿದಿದ್ದ ಕ್ಯೂಟ್ ಕಪಲ್ ಮದುವೆ ಮುರಿದುಕೊಳ್ಳುತ್ತಿದ್ದಾರೆ. ಕಾರಣ ಏನು ಅನ್ನೋದನ್ನು ಇಬ್ಬರೂ ಸಹ ಬಿಟ್ಟುಕೊಟ್ಟಿಲ್ಲ. ಆದರೆ ಕಲರ್ಸ್ ಕನ್ನಡ ಕಾರ್ಯಕ್ರಮಕ್ಕೆ ಹೋದ ಬಳಿಕ ಇಬ್ಬರ ನಡುವೆ ಇರುಸು ಮುರುಸು ಸೃಷ್ಟಿಯಾಗಿತ್ತು ಎನ್ನಲಾಗಿದೆ. ಆದರೆ ಇಬ್ಬರೂ ಕೂಡ ಮೌನಕ್ಕೆ ಶರಣಾಗಿದ್ದು, ಮುಂದಿನ ದಿನಗಳಲ್ಲಿ ನಿಖರ ಕಾರಣ ತಿಳಿದು ಬರಬೇಕಿದೆ. ಕೃಷ್ಣಮಣಿ
ನೇಪಾಳಕ್ಕೆ ಚಿನ್ನಕಳ್ಳ ಸಾಗಾಟ ;ಈರ್ವರು ಭಾರತೀಯರ ಬಂಧನ
ಕಠ್ಮಂಡು:ನೇಪಾಳದಲ್ಲಿ ಚಿನ್ನ ಕಳ್ಳಸಾಗಣೆ ಆರೋಪದ ಮೇಲೆ ಇಬ್ಬರು ಭಾರತೀಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಉತ್ತರ ಪ್ರದೇಶದ ನಿವಾಸಿಗಳಾದ ದೀಪಕ್ ಗುಪ್ತಾ (44) ಮತ್ತು ಸುಮಿತ್...
Read moreDetails