ಗಾಯಕ ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ವಿಚ್ಛೇದನ (Divorce) ಪಡೆದಿದ್ದು, ನಗು ನಗುತ್ತಲೇ, ಕೈ ಕೈ ಹಿಡಿದು ಕೋರ್ಟ್ ನಿಂದ ಹೊರ ಬಂದಿದ್ದಾರೆ.
ಇಬ್ಬರಿಗೂ 2ನೇ ಹೆಚ್ಚುವರಿ ನ್ಯಾಯಾಲಯವು ವಿಚ್ಛೇದನ ಮಂಜೂರು ಮಾಡಿದೆ. 4 ವರ್ಷಗಳ ದಾಂಪತ್ಯಕ್ಕೆ ಈ ಜೋಡಿ ಬ್ರೇಕ್ ಹಾಕಿದೆ. ಡಿವೋರ್ಸ್ ಸಿಗುತ್ತಿದ್ದಂತೆ ಕೋರ್ಟ್ ನ ಹಿಂದಿನ ಗೇಟ್ ನಿಂದ ಇಬ್ಬರೂ ಕೈ ಕೈ ಹಿಡಿದು ಹೊರ ಬಂದಿದ್ದಾರೆ.
ಡಿವೋರ್ಸ್ ಸಿಗುತ್ತಿದ್ದಂತೆ ಇಬ್ಬರೂ ಎಲ್ಲರಂತೆ ಜಗಳವಾಡಿಲ್ಲ. ಬದಲಾಗಿ ಫ್ರೆಂಡ್ಲಿ ಆಗಿಯೇ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಬೆಂಗಳೂರಿನ ಶಾಂತಿನಗರದ ಕೌಟುಂಬಿಕ ನ್ಯಾಯಾಲಕ್ಕೆ ಹಾಜರಾದ ಈ ಜೋಡಿ ಅಕ್ಕ ಪಕ್ಕ ಕುಳಿತು ವಿಚಾರಣೆ ಎದುರಿಸಿದ್ದಾರೆ. ಡಿವೋರ್ಸ್ ಮಂಜೂರಾದ ನಂತರ ಕೈ ಕೈ ಹಿಡಿದುಕೊಂಡು ತೆರಳಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಇಬ್ಬರೂ ಪರಿಚಿತರಾಗಿದ್ದರು. ಚಂದನ್ ಶೆಟ್ಟಿ 2019ರಲ್ಲಿ ಮೈಸೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ನಿವೇದಿತಾಗೆ ಪ್ರಪೋಸ್ ಮಾಡಿದ್ದರು. ನಂತರ 2020ರಲ್ಲಿ ಇಬ್ಬರೂ ವಿವಾಹ ಮಾಡಿಕೊಂಡಿದ್ದರು.