ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 40% ಕಮಿಷನ್ ಆರೋಪ ಮಾಡಿದ್ದ ಪ್ರಕರಣದಲ್ಲಿ ಬೆಂಗಳೂರಿನ 42 ACMM ಕೋರ್ಟ್ ಜಮೀನು ಕೊಟ್ಟಿದೆ. ರಾಹುಲ್ ಗಾಂಧಿಗೆ ಮಾಜಿ ಸಂಸದ ಡಿಕೆ ಸುರೇಶ್ ಶ್ಯುರಿಟಿ ಹಾಕಿದ್ದಾರೆ. ವಿಚಾರಣೆಯನ್ನ ಕೋರ್ಟ್ ಜೂನ್ 30ಕ್ಕೆ ಮುಂದೂಡಿದೆ. ಅಪಪ್ರಚಾರ ಮಾಡಿದ ಆರೋಪದಲ್ಲಿ ರಾಹುಲ್ ಗಾಂಧಿ A1 ಆರೋಪಿಯಾಗಿದ್ದಾರೆ. ಜಾಮೀನು ಬಾಂಡ್ ಗೆ ಸಹಿಹಾಕಿ , ಕೋರ್ಟ್ ಪ್ರಕ್ರಿಯೆ ಮುಗಿಸಿ ರಾಹುಲ್ ಗಾಂಧಿ ವಾಪಸ್ ಆಗಿದ್ದಾರೆ. ರಾಹುಲ್ ಆಗಮನ ಹಿನ್ನೆಲೆ ಕೋರ್ಟ್ ಸುತ್ತಮುತ್ತ ಟೈಟ್ ಸೆಕ್ಯೂರಿಟಿ ನಿಯೋಜನೆ ಮಾಡಲಾಗಿತ್ತು. ಇದೇ ಪ್ರಕರಣದಲ್ಲಿ ಕೆಲ ದಿನಗಳ ಹಿಂದೆ ಸಿಎಂ ಅಂಡ್ ಡಿಸಿಎಂ ಜಾಮೀನು ಪಡೆದುಕೊಂಡಿದ್ರು.
ನಿಖಿಲ್ ಸೋಲ್ತಾರೆ ಅಂತ ಕುಮಾರಸ್ವಾಮಿಗೆ ಮೊದಲೇ ಗೊತ್ತಿತ್ತು ! ಜಿ.ಟಿ.ದೇವೇಗೌಡ ಅಚ್ಚರಿಯ ಹೇಳಿಕೆ !
ಚನ್ನಪಟ್ಟಣ ಉಪ ಚುನಾವಣೆ (Channapattana bypoll) ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ನನ್ನ ಮಾತನ್ನು ಕೇಳಲಿಲ್ಲ ಎಂದು ನಿಖಿಲ್ (Nikhil) ಸೋಲಿನ...
Read moreDetails