ವಿಜಯಪುರ: ಸ್ಟ್ರಾಂಗ್ ರೂಮ್ ಕೀಯನ್ನು ಅಧಿಕಾರಿಯು ಮನೆಯಲ್ಲಿಯೇ ಮರೆತು ಬಂದ ಹಿನ್ನೆಲೆಯಲ್ಲಿ ಮತ ಎಣಿಕೆ ಕಾರ್ಯ ವಿಳಂಬವಾಗಿರುವ ಘಟನೆ ನಡೆದಿದೆ.
ಲೋಕಸಭಾ ಚುನಾವಣೆ 2024ರ ಫಲಿತಾಂಶಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಇವೆ. ಎಲ್ಲ ಕಡೆ ಬಹುತೇಕ ಸ್ಟ್ರಾಂಗ್ ರೂಮ್ ಗಳು ಓಪನ್ ಆಗಿದ್ದು, ಅಂಚೆ ಮತ ಎಣಿಕೆ ಕೂಡ ಆರಂಭವಾಗಿದೆ. ವಿಜಯಪುರದಲ್ಲಿ ಅಧಿಕಾರಿ ಸ್ಟ್ರಾಂಗ್ ರೂಮ್ ನ ಬೀಗದ ಕೈ ಮನೆಯಲ್ಲಿಯೇ ಮರೆತು ಬಂದಿರುವ ಘಟನೆ ನಡೆದಿದೆ. ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಶರೀಫ್ ಅವರು ಸ್ಟ್ರಾಂಗ್ ರೂಮ್ ಬೀಗದ ಕೈಯನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದಾರೆ.
ಲಾಕ್ ಓಪನ್ ಮಾಡಲು ಹೋದಾಗ ತಮ್ಮ ಬಳಿ ಕೀ ಇಲ್ಲದಿರುವುದು ತಿಳಿದುಬಂದಿದೆ. ತಕ್ಷಣವೇ ಶರೀಫ್ ತಮ್ಮ ಮನೆಗೆ ಹಿಂದಿರುಗಿದ್ದು ಕೀ ತಂದು ಈಗ ಸ್ಟ್ರಾಂಗ್ ರೂಮ್ ಓಪನ್ ಮಾಡಿದ್ದಾರೆ. ಅಧಿಕಾರಿಯ ಎಡವಟ್ಟಿನಿಂದಾಗಿ ತಡವಾಗುವಂತಾಗಿತ್ತು.