ನಟಿ ಶಿಲ್ಪಾ ಶೆಟ್ಟಿ ದಕ್ಷಿಣ ಕನ್ನಡ ಮೂಲದವರು ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆಗ್ಗಿಂದಾಗೆ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಕರಾವಳಿ ಭಾಗದ ಭೂತಕೋಲ, ದೈವಕೋಲಗಳಲ್ಲಿ ಭಾಗಿಯಾಗಿ ಭಕ್ತಿ ಸಮರ್ಪಣೆ ಮಾಡ್ತಾರೆ. ಆದರೆ ಇದೀಗ ಮೈಸೂರಿನ ನಂಜನಗೂಡು ದೇವಸ್ಥಾನಕ್ಕೆ ಬಂದಿದ್ದಾರೆ.

ಬಾಲಿವುಡ್‌ನ ಖ್ಯಾತ ನಟಿ, ಕನ್ನಡತಿ ಶಿಲ್ಪಾ ಶೆಟ್ಟಿ ನಂಜನಗೂಡು ನಂಜುಂಡೇಶ್ವರನ ದರ್ಶನ ಪಡೆದಿದ್ದಾರೆ. ಕೆಲ ಕಾಲ ದೇವಸ್ಥಾನದ ಆವರಣದಲ್ಲಿ ಕುಳಿತು ಧ್ಯಾನಸ್ಥರಾಗಿ ಶ್ರೀ ನಂಜುಂಡೇಶ್ವರನ ಸನ್ನಿಧಿಯಲ್ಲಿ ಧ್ಯಾನ ಮಾಡಿದ್ದಾರೆ. ಬಿಲ್ವಪತ್ರೆ ಅರ್ಪಿಸಿ ಶಿವನ ಆರಾಧನೆ ಮಾಡಿದ್ದಾರೆ.

sefgbvn
ಜೋಗಿ ಪ್ರೇಮ್ ನಿರ್ದೇಶನದ ಕೇಡಿ ಚಿತ್ರದ ಕೊನೆ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಲು ಬಂದಿದ್ದ ನಟಿ ಶಿಲ್ಪಾ ಶೆಟ್ಟಿ, ತನ್ನ ತಂಡದ ಜೊತೆಯಲ್ಲಿ ನಂಜನಗೂಡಿಗೆ ಭೇಟಿ ಕೊಟ್ಟಿದ್ದಾರೆ. ನಂಜುಂಡೇಶ್ವರನ ದರ್ಶನ ಪಡದ ನಂತ್ರ ದೇವಾಲಯದ ಸಿಬ್ಬಂದಿ ಜೊತೆಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
