ಬೆಂಗಳೂರು: ನಗರದ ಹೊರ ವಲಯದಲ್ಲಿ ನಡೆದಿರುವ ರೇವ್ ಪಾರ್ಟಿ (Rave Party) ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಈ ಮಧ್ಯೆ ಹೆಬ್ಬಗೋಡೆ ಪೊಲೀಸ್ ಠಾಣೆಯ (Police Station) ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಇಬ್ಬರು ಕಾನ್ಸ್ ಟೇಬಲ್ ಹಾಗೂ ಓರ್ವ ಎಎಸ್ ಐ ಸೇರಿದಂತೆ ಮೂವರನ್ನು ಅಮಾನತು ಮಾಡಲಾಗಿದೆ. ರೇವ್ ಪಾರ್ಟಿ ಬಗ್ಗೆ ಮಾಹಿತಿ ಕಲೆ ಹಾಕಲು ವಿಫಲವಾಗಿರುವ ಆರೋಪದ ಹಿನ್ನೆಲೆಯಲ್ಲಿ ಎಎಸ್‍ಐ ನಾರಾಯಣಸ್ವಾಮಿ, ಬೀಟ್ ಪೊಲೀಸ್ ದೇವರಾಜ್(Devaraj) ಹಾಗೂ ಎಸ್‍ಐ ಗಿರೀಶ್(Girish) ಎಂಬುವವರನ್ನು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ನಗರದ ಹೊರವಲಯದಲ್ಲಿ ಬರ್ತ್‍ಡೇ ಪಾರ್ಟಿ ಹೆಸರಲ್ಲಿ ರೇವ್ ಪಾರ್ಟಿ ನಡೆದಿತ್ತು. ಆದರೆ, ಈ ಪಾರ್ಟಿ ಮೂರು ದಿನಗಳ ಕಾಲ ನಡೆದಿತ್ತು ಎನ್ನಲಾಗಿದೆ. ಶುಕ್ರವಾರದಿಂದ ಸೋಮವಾರದವರೆಗೆ ಈ ಪಾರ್ಟಿ ನಡೆದಿದೆ ಎನ್ನಲಾಗಿದೆ. ಆದರೆ, ಎರಡು ದಿನ ಪಾರ್ಟಿ ಮಾಡಿದವರು ಭಾನುವಾರ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆನಂತರ ಇದು ಬೆಳಕಿಗೆ ಬಂದಿದೆ.
ರೇವ್ ಪಾರ್ಟಿಯಲ್ಲಿ ಸೆಲೆಬ್ರಿಟಿಗಳು(Celebrities), ಟೆಕ್ಕಿಗಳು(Techis), ಶ್ರೀಮಂತರು ಭಾಗವಹಿಸಿದ್ದರು ಎನ್ನಲಾಗಿದೆ. ಈಗಾಗಲೇ ಪಾರ್ಟಿಯಲ್ಲಿದ್ದವರ ವಿರುದ್ಧ ಎಫ್ ಐಆರ್(FIR) ದಾಖಲಾಗಿದೆ. ಹಲವರನ್ನು ಅರೆಸ್ಟ್(Arrest) ಮಾಡಿ ಜೈಲಿಗೆ ಅಟ್ಟಲಾಗಿದೆ. ಕೆಲವರನ್ನು ಸಿಸಿಬಿ ಅಧಿಕಾರಿಗಳು(Officers) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.