• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕೇಂದ್ರ ಸರ್ಕಾರದ ಅನ್ಯಾಯ ಹೇಗಿದೆ ಗೊತ್ತಾ..? ಪಕ್ಕಾ ‘ಲೆಕ್ಕ’ರಾಮಯ್ಯ

ಪ್ರತಿಧ್ವನಿ by ಪ್ರತಿಧ್ವನಿ
May 5, 2024
in ಕರ್ನಾಟಕ, ರಾಜಕೀಯ
0
ಅಪಾಯದಲ್ಲಿರುವ ಸಂವಿಧಾನವನ್ನು ರಕ್ಷಿಸಬೇಕು: ಪ್ರಜಾಪ್ರಭುತ್ವ ಉಳಿಸಬೇಕು
Share on WhatsAppShare on FacebookShare on Telegram

ADVERTISEMENT

ಕೇಂದ್ರದಲ್ಲಿ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿಯವರು ಎಲ್ಲಿಯೂ ಸಾಧನೆ ಬಗ್ಗೆ ಮಾತನಾಡಲ್ಲ. ಕೊಟ್ಟಿರುವ ಭರವಸೆಯಲ್ಲಿ ಇದನ್ನು ಈಡೇರಿಸಿದ್ದೇನೆ ಎಂದು ಹೇಳಲ್ಲ. ಕೇವಲ ದ್ವೇಷ ಭಾಷಣ, ದೇಶ ವಿಭಜನೆಯ ಮಾತು. ಧರ್ಮದ ಆಧಾರದ ಮೇಲೆ ಮತಗಳ ಕ್ರೋಢೀಕರಣಕ್ಕೆ ಮುಂದಾಗಿದ್ದಾರೆ. ರಾಹುಲ್ ಗಾಂಧಿ ಮನಸ್ಸುಗಳನ್ನು ಒಗ್ಗೂಡಿಸಲು ನ್ಯಾಯ ಯಾತ್ರೆಯನ್ನು ಮಾಡಿದ್ರು. ಯಾರು ಕೂಡ ಇಷ್ಟೊಂದು ನ್ಯಾಯ ಯಾತ್ರೆ ಮಾಡಿರಲಿಲ್ಲ ಎಂದಿದ್ದಾರೆ.

ದೇಶದ ಸಮಸ್ಯೆಗಳು ಏನು, ಪರಿಹಾರ ಮಾಡುವ ಬಗ್ಗೆ ಚಿಂತನೆ ರಾಹುಲ್​ ಚಿಂತನೆ ಮಾಡಿದ್ದಾರೆ. 25 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ‌ಮಾಡಿದ್ದಾರೆ. ಗ್ಯಾರಂಟಿಗಳಿಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಹ ಸಹಿ ಮಾಡಿದ್ದಾರೆ‌. ಕರ್ನಾಟಕಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ದೊಡ್ಡ ಅನ್ಯಾಯ ಮಾಡಿದೆ. ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಆಗಿದೆ. ಕನ್ನಡಿಗರ ಶ್ರಮದ ಫಲದಿಂದ ತೆರಿಗೆ ಪಾವತಿಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಆದರೆ ರಾಜ್ಯದಿಂದ ಒಂದು ರೂಪಾಯಿ ಕೊಟ್ಟರೆ ನಮಗೆ ಕೇವಲ 13 ಪೈಸೆ ವಾಪಸ್ ಕೊಡ್ತಾರೆ ಎಂದು ಕಿಡಿಕಾರಿದ್ದಾರೆ.

ತೆರಿಗೆ ಮೋಸದ ಬಗ್ಗೆ ದೆಹಲಿಯಲ್ಲಿಯೂ ಸಹ ನಾವು ಪ್ರತಿಭಟನೆ ಮಾಡಿದ್ದೇವೆ. ವಿಶೇಷ ಅನುದಾನ 5,495 ಕೋಟಿ ವಿಶೇಷ ಅನುದಾನ ಕೊಡಬೇಕಿತ್ತು. ರಿಂಗ್ ರಸ್ತೆಗಾಗಿ, ಕೆರೆ ಅಭಿವೃದ್ಧಿಗೆ ತಲಾ ಮೂರು ಸಾವಿರ ಕೋಟಿ ಕೊಡಬೇಕಿತ್ತು. ಅದರೇ ಅದನ್ನೂ ಕೊಡಲಿಲ್ಲ. ಭದ್ರಾ ಯೋಜನೆಗೆ ಕೊಡಬೇಕಿದ್ದ ಹಣವನ್ನೂ ಕೊಡಲಿಲ್ಲ. 2019ರಲ್ಲಿ 25 ಜನ ಸಂಸದರು ಆಯ್ಕೆ ಆಗಿದ್ದರು. ಒಬ್ಬರೂ ಕೂಡ ಕನ್ನಡಿಗರಿಗೆ ಆಗ್ತಿರುವ ಅನ್ಯಾಯದ ಬಗ್ಗೆ ಮಾತನಾಡಲಿಲ್ಲ. ಮಾತನಾಡುವ ಧೈರ್ಯ ತೋರಿಸಲಿಲ್ಲ. ಮೋದಿ ಎದುರು ಮಾತನಾಡಲು ಪುಕ್ಕಲತನ ತೋರಿಸಿದ್ರು ಎಂದು ಟೀಕಿಸಿದ್ದಾರೆ.

ರಾಜ್ಯದ 223 ತಾಲೂಕಿನಲ್ಲಿ ಬರ ಪರಿಸ್ಥಿತಿ ನಿರ್ಮಾಣ ಆಗಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿಯೇ ನಾವು ಕೇಂದ್ರ ಸರ್ಕಾರಕ್ಕೆ ಮನವಿ ಕೊಟ್ಟಿದ್ದೇವೆ. ಅಕ್ಟೋಬರ್​ನಲ್ಲಿ ಕೇಂದ್ರ ತಂಡವೇ ಆಗಮಿಸಿ ಪರಿಸ್ಥಿತಿ ಅವಲೋಕಿಸಿ ಕೇಂದ್ರ ಸರ್ಕಾರಕ್ಕೆ ವರದಿ ಕೊಟ್ಟಿದೆ. NDRF ನಿಯಮದ ಪ್ರಕಾರ ಪರಿಹಾರ ಕೇಳಿದ್ದೆವು. 35 ಸಾವಿರ ಕೋಟಿ ಬೆಳೆ ನಷ್ಟ ಆಗಿದೆ, ಪರಿಹಾರ ಕೊಡಿ ಎಂದರೂ ಕೊಡಲಿಲ್ಲ. ಆದರೆ ನಿರ್ಮಲಾ ಸಿತಾರಾಮನ್, ಅಮಿತ್ ಶಾ ಈ ಬಗ್ಗೆ ಸುಳ್ಳು ಹೇಳಿದ್ರು. ನಾವು ಅನಿವಾರ್ಯವಾಗಿ ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಯಿತು. ಸುಪ್ರೀಂಕೋರ್ಟ್ ‌ಚಾಟಿ‌ ಬಿಸೋವರೆಗೆ ಒಂದು ರೂಪಾಯಿ ಕೊಡಲಿಲ್ಲ. ಈಗ 3,200 ಕೋಟಿ ರೂಪಾಯಿ ಬರ ಪರಿಹಾರ ಕೊಟ್ಟಿದ್ದಾರೆ.

ಹೀಗೆ ಒಂದೊಂದು ಅಂಶವನ್ನು ಹಿಡಿದು ಸಿಎಂ ಸಿದ್ದರಾಮಯ್ಯ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ರಾಜ್ಯದ ಮತದಾರರಿಗೆ ನಾನು ಮನವಿ ಮಾಡ್ತಿನಿ. ಮೋದಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿದ್ದು ಬರೀ ಚೊಂಬು. ಜಾತಿ, ಧರ್ಮದ ನಡುವೆ ಒಡಕು ಉಂಟು ಮಾಡುತ್ತಿದ್ದಾರೆ. ಈ ಸಲ ಕರ್ನಾಟಕದ ಜನ ಕಾಂಗ್ರೆಸ್ ಮೇಲೆ ವಿಶ್ವಾಸವಿಟ್ಟು. ರಾಜ್ಯದಲ್ಲಿ ಹೆಚ್ಚು ಸ್ಥಾನ ಕೊಡುತ್ತಾರೆ ಎಂಬ ನಂಬಿಕೆ ಇದೆ. ಬೆಳಗಾವಿ, ಚಿಕ್ಕೋಡಿ ಎರಡೂ ಸ್ಥಾನ ಗೆಲ್ಲುತ್ತೇವೆ ಎಂದಿದ್ದಾರೆ.

Tags: BJPcongressElectionlokasabha electionModisiddaramaiah
Previous Post

ಪ್ರಜ್ವಲ್ ರೇವಣ್ಣಗಾಗಿ ಚಕ್ರವ್ಯೂಹ ರಚಿಸಿದ S.I.T ! ದೇಶಕ್ಕೆ ಎಂಟ್ರಿ ಕೊಟ್ಟ ತಕ್ಷಣ ಲಾಕ್ ! 

Next Post

ಬಂಗಾರದ ಬೆಲೆಯಲ್ಲಿ ನೋ ಚೇಂಜ್.. ಗೋಲ್ಡ್ & ಸಿಲ್ವರ್ ರೇಟ್ ಬಗ್ಗೆ ಒಂದು ನೋಟ

Related Posts

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?
ರಾಜಕೀಯ

ಸಿಎಂ ಬದಲಾವಣೆ ಸದ್ಯಕ್ಕಿಲ್ಲ: ಸುರ್ಜೇವಾಲಾ ಸ್ಪಷ್ಟನೆ!

by ಪ್ರತಿಧ್ವನಿ
May 27, 2026
0

ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಹಾಗೂ ನಾಯಕತ್ವ ಬದಲಾವಣೆ ಕುರಿತು ಭಾರೀ ಚರ್ಚೆಗಳು ನಡೆಯುತ್ತಿದ್ದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಊಹಾಪೋಹಗಳಿಗೆ ತೆರೆ ಎಳೆಯಲು ಮುಂದಾಗಿದೆ....

Read moreDetails
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

May 27, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್ ಮೇಲೆ ರಾಜ್ಯದ ಕಣ್ಣು;  ಉಪಹಾರ ಕೂಟದಲ್ಲೇ ಅಧಿಕಾರ ಹಸ್ತಾಂತರ ಫೈನಲ್?

May 27, 2026
ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

May 27, 2026
Next Post
ಐಟಿ ದಾಳಿಯಲ್ಲಿ 22 ಕೆಜಿ ಚಿನ್ನ, 6.5 ಕೋಟಿ ನಗದು ವಶಕ್ಕೆ!!

ಬಂಗಾರದ ಬೆಲೆಯಲ್ಲಿ ನೋ ಚೇಂಜ್.. ಗೋಲ್ಡ್ & ಸಿಲ್ವರ್ ರೇಟ್ ಬಗ್ಗೆ ಒಂದು ನೋಟ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada