IPL ಸೀಸನ್ 17ರಲ್ಲಿ RCB ತಂಡದ ಸೋಲಿನ ಸರಣಿ ಮುಂದುವರಿದಿದೆ. ಭಾನುವಾರ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಬೆಂಗಳೂರು ತಂಡ 1 ರನ್ ಗಳ ವಿರೋಚಿತ ಸೋಲು ಅನುಭವಿಸಿದೆ.RCB ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ.ಕೋಲ್ಕತ್ತಾ ಈಡನ್ ಗಾರ್ಡೆನ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಕೆಆರ್ ನೀಡಿದ ಬೃಹತ್ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ ಪರ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡುಪ್ಲೆಸಿಸ್ ಜೋಡಿ ಶುಭಾರಂಭ ಮಾಡಿದ್ರು. ಕೊಹ್ಲಿ ಕೇವಲ 7 ಬಾಲ್ನಲ್ಲಿ 2 ಸಿಕ್ಸರ್, 1 ಫೋರ್ ಸಮೇತ 18 ರನ್ ಚಚ್ಚಿ ಔಟಾದ್ರು.ಇನ್ನು, ಕೊಹ್ಲಿ ಔಟಾದ ದೊಡ್ಡ ಹೈಡ್ರಾಮ ನಡೆದು ಹೋಯ್ತು. ಹರ್ಷಿತ್ ರಾಣಾ ಎಸೆತ ಬಾಲ್ನಲ್ಲಿ ಕೊಹ್ಲಿ ಕ್ಯಾಚ್ ಕೊಟ್ಟರು. ಕೊಹ್ಲಿ ಹರ್ಷಿತ್ ರಾಣಾ ಎಸೆದದ್ದು ನೋ ಬಾಲ್ ಎಂದರು ಅಂಪೈರ್ ಕೇಳಲಿಲ್ಲ. ಬದಲಿಗೆ ಔಟ್ ನೀಡಿದ್ರು. ಬಳಿಕ ಕೊಹ್ಲಿ ಅಂಪೈರ್ ಬಳಿಗೆ ಹೋಗಿ ಜಗಳ ಮಾಡಿದ್ರು. ಥರ್ಡ್ ಅಂಪೈರ್ ಕೊಟ್ಟ ವಿವಾದಾತ್ಮಕ ತೀರ್ಪಿಗೆ ಕೊಹ್ಲಿ ಬಲಿಯಾದ್ರು.
ಕೊಹ್ಲಿ ಔಟಾದ ಬಳಿಕ ಕ್ರೀಸ್ಗೆ ಬಂದ ವಿಲ್ ಜಾಕ್ಸ್ ಕೇವಲ 26 ಬಾಲ್ನಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ್ರು. ಇನ್ನಿಂಗ್ಸ್ ಉದ್ಧಕ್ಕೂ ಕೆಕೆಆರ್ ಬೌಲರ್ಗಳ ಬೆಂಡೆತ್ತಿದ್ರು. ಬರೋಬ್ಬರಿ 5 ಸಿಕ್ಸರ್, 4 ಫೋರ್ ಸಮೇತ 53 ರನ್ ಸಿಡಿಸಿದ್ರು.
ರಜತ್ ಪಾಟಿದಾರ್ ಕೂಡ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಕೇವಲ 21 ಬಾಲ್ನಲ್ಲಿ ಅಬ್ಬರದ ಅರ್ಧಶತಕ ಸಿಡಿಸಿದ್ರು. ಬರೋಬ್ಬರಿ 5 ಸಿಕ್ಸರ್, 3 ಫೋರ್ ಸಮೇತ 52 ರನ್ ಬಾರಿಸಿದ್ರು. ಸುಯಶ್ ಪ್ರಭುದೇಸಾಯ್ 24, ದಿನೇಶ್ ಕಾರ್ತಿಕ್ 25, ಕರ್ಣ್ ಶರ್ಮಾ 20 ರನ್ ಸಿಡಿಸಿದ್ರೂ 1 ರನ್ನಿಂದ ಆರ್ಸಿಬಿ ಸೋಲು ಕಂಡಿತು.