ನಿನ್ನೆ ಸಂಜೆ ೬ ಗಂಟೆಯಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು ಕೂಡ ಇನ್ನೂ ೨ ವರ್ಷದ ಮಗು ಸಾತ್ವಿಕ್ ನನ್ನ ಕೊಳವೇ ಬಾವಿಯಿಂದ ಹೊರತರಲಾಗಿಲ್ಲ. ೧೮ ಅಡಿ ಕೊರೆದ ನಂತರ ಅಡ್ಡ ಬಂದ ಬಂಡೆಯಿಂದಾಗಿ ಕಾರ್ಯಾಚರಣೆಗೆ ದೊಡ್ಡ ಹಿನ್ನಡೆಯಾಗಿತ್ತು. ಈ ಸುದೀರ್ಘ ಸಮಯದಲ್ಲಿ ಮಗುವಿನ ಸ್ಥಿತಿ ಏನಾಗಿದ್ಯೋ ಏನೋ ಎಂಬ ಕಳವಳ ಪೋಷಕರಲ್ಲಿ ಮನೆಮಾಡಿತ್ತು.

ಆದ್ರೆ ಮಗು ಜೀವಂತವಾಗಿದ್ದು, ಮಗುವಿನ ಅಳುವಿನ ಸದ್ದು ಕೇಳಿಬರ್ತಿದೆ ಎಂದು ಕಾರ್ಯಾಚರಣೆಯಲ್ಲಿ ನಿರತರಾಗಿರುವ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಪೋಷಕರು ಕುಟುಂಬಸ್ಥರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಮಗು ಇನ್ನು ಜೀವಂತವಾಗಿರುವುದು ಎಲ್ಲರಿಗೂ ಸಮಾಧಾನ ತಂದಿದೆ. ಇನ್ನಷ್ಟು ವೇಗವಾಗಿ ಕಾರ್ಯಾಚರಣೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಬುಧವಾರ ಸಂಜೆ ೫ ಗಂಟೆ ಸುಮಾರಿಗೆ ಮಗು ಕೊಳವೆ ಬಾವಿಯಲ್ಲಿ ಬಿದ್ದಿದ್ದು , ಈಗಾಗಲೇ ಬಹಿತೇಕ ೨೦ ಗಂಟೆಗಳ ಕಾರ್ಯಾಚರಣೆ ನಡೆದಿದೆ. ಮಗು ತಲೆಕೆಳಗಾಗಿ ಬಿದ್ದಿರುವುದರಿಂದ ಮಗುವಿನ ಸ್ಥಿತಿ ಏನಾಗಿದ್ಯೋ ಏನೋ ಎಂಬ ಆತಂಕ ಪ್ರತಿಯೊಬ್ಬರಲ್ಲೂ ಇತ್ತು. ಸದ್ಯ ಮಗು ಅಳುವಿನ ಸದ್ದಿನಿಂದ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.