ಅಬಕಾರಿ ನೀತಿ (Excise policy) ಅಕ್ರಮ ಪ್ರಕರಣದಲ್ಲಿ ನಿನ್ನೆ ರಾತ್ರಿ ದೆಹಲಿ ಸಿಎಂ (Delhi Cm ) ಅರವಿಂದ್ ಕೇಜ್ರಿವಾಲ್ (Aravind Kejriwal) ರನ್ನ ಬಂಧಿಸಿದ್ದ ಇಡಿ ಅಧಿಕಾರಿಗಳು (ED officers) ಇಂದು ಕೋರ್ಟ್ ಮುಂದೆ ಹಾಜರು ಪಡಿಸಿದ್ದರು. ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ನಲ್ಲಿ ವಿಚಾರಣೆ ನಡೆಸುವ ಸಂಧರ್ಬದಲ್ಲಿ ಕೇಜ್ರಿವಾಲ್ (Kejriwal) ಆರೋಗ್ಯದಲ್ಲಿ ಏರುಪೇರಾಗಿದೆ. ಇದ್ದಕ್ಕಿದ್ದ ಹಾಗೆ ಅವರ ಬಿಪಿ ಲೋ (Low BP) ಆಗಿದ್ದು ತಕ್ಷಣ ಇಡಿ ಅಧಿಕಾರಿಗಳು ಅವರನ್ನ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.

ಈ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕಿಂಗ್ ಪಿನ್ (King pin) ಎಂದು ಪ್ರತಿಪಾದಿಸಿರುವ ಇಡಿ, 10 ದಿನಗಳ ಕಸ್ಟಡಿಗೆ (10 days custody) ನೀಡಬೇಕು ಎಂದು ಕೋರ್ಟ್ ಬಳಿ ಕೇಳಿದ್ದೆ. ಕೋರ್ಟ್ ಇನ್ನಷ್ಟೇ ಈ ಬಗ್ಗೆ ಆದೇಶ ನೀಡಬೇಕಿದ್ದು ಕೇಜ್ರಿವಾಲ್ 10 ದಿನ ಕಸ್ಟಡಿಗೆ ಒಳಪಡ್ತಾರ ಎಂಬ ಕುತೂಹಲ ಮನೆಮಾಡಿದೆ. ಅದಕ್ಕೂ ಮುನ್ನ ಅವರ ಆರೋಗ್ಯ ದೃಢವಾಗಿರುವ ಬಗ್ಗೆ ವೈದ್ಯರು ಸ್ಪಷ್ಟಪಡಿಸಬೇಕಿದೆ.

ನಿನ್ನೆ ರಾತ್ರಿ 9:15ರ ಸುಮಾರಿಗೆ ದೆಹಲಿಯ ಕೇಜ್ರಿವಾಲ್ ನಿವಾಸಕ್ಕೆ ತೆರಳಿದ್ದ ಇಡಿ ಅಧಿಕಾರಿಗಳು ಅವರನ್ನ ವಶಕ್ಕೆ ಪಡೆದು , ನಂತರ ಮೆಡಿಕಲ್ ಟೆಸ್ಟ್ (Medical test) ಕೂಡ ಮಾಡಿಸಲಾಗಿತ್ತು ಮತ್ತು ಆರೋಗ್ಯ (Health) ಸಹಜ ಸ್ಥಿತ್ಜಿಯಲ್ಲಿದೆ ಎಂಬ ವರದಿ ಸಿಕ್ಕಿತ್ತು. ಆದ್ರೆ ವಿಚಾರಣೆಯ ಸಂದರ್ಭ ಕೇಜ್ರಿವಾಲ್ (Kejriwal) ಆರೋಗ್ಯದಲ್ಲಿ ಧಿಡೀರ್ ಏರುಪೇರಾಗಿದೆ.