• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೋಲಾರ ಕ್ಷೇತ್ರವನ್ನು ಜೆಡಿಎಸ್​​-ಬಿಜೆಪಿ ಮೈತ್ರಿಗೆ ಬಿಟ್ಟು ಕೊಡುತ್ತಾ ಕಾಂಗ್ರೆಸ್..?

ಪ್ರತಿಧ್ವನಿ by ಪ್ರತಿಧ್ವನಿ
March 22, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಕೋಲಾರ ಕ್ಷೇತ್ರವನ್ನು ಜೆಡಿಎಸ್​​-ಬಿಜೆಪಿ ಮೈತ್ರಿಗೆ ಬಿಟ್ಟು ಕೊಡುತ್ತಾ ಕಾಂಗ್ರೆಸ್..?
Share on WhatsAppShare on FacebookShare on Telegram

ಕೋಲಾರದಲ್ಲಿ ಕಾಂಗ್ರೆಸ್​ ಪ್ರಬಲ ಪಕ್ಷ ಎಂದರೆ ಸುಳ್ಳಲ್ಲ. ಆದರೆ ಲೋಕಸಭಾ ಅಭ್ಯರ್ಥಿ ಆಯ್ಕೆ ವಿಚಾರ ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ಕಾಂಗ್ರೆಸ್​ ನಾಯಕರು ತೆಗೆದುಕೊಳ್ಳುತ್ತಿರುವ ನಿರ್ಧಾರ, ಹಾಗು ಕೋಲಾರದಲ್ಲಿ ಮನೆ ಮಾಡಿರುವ ಗೊಂದಲ ಹಾಗು ಬಣ ರಾಜಕೀಯವನ್ನು ಬಗೆಹರಿಸದೆ ರಾಜ್ಯ ನಾಯಕತ್ವ ಸೋತಿರುವ ಪರಿಣಾಮ ಈ ಬಾರಿ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಆಯ್ಕೆಗೆ ರೆಡ್​ ಕಾರ್ಪೆಟ್​ ಹಾಕುತ್ತಿರುವ ಅನುಮಾನ ಮೂಡುತ್ತಿದೆ. ಮೈತ್ರಿ ಪಕ್ಷದ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ತಿಳಿದಿಲ್ಲ, ಆದರೂ ಕಾಂಗ್ರೆಸ್​ ಪಕ್ಷದ ನಡೆಯುತ್ತಿರುವ ಬೆಳವಣಿಗೆ ಸೋಲಿನ ಸುಳಿವು ನೀಡುತ್ತಿದೆ ಎನ್ನಬಹುದಾಗಿದೆ. 

ADVERTISEMENT

ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ಕ್ಷೇತ್ರದಲ್ಲಿ ಈಗಾಗಲೇ ಸುತ್ತಾಡಿದ್ದು, ರಾಜಕೀಯ ಮಾಡಲು ಉತ್ಸುಕರಾಗಿದ್ದಾರೆ. ಕೆ.ಆರ್​ ಪುರದಲ್ಲಿ ರಿಜಿಸ್ಟ್ರಾರ್​ ಆಗಿರುವ ಚಿಕ್ಕಪೆದ್ದಣ್ಣ, ಆರ್ಥಿಕವಾಗಿಯೂ ಸದೃಢವಾಗಿದ್ದಾರೆ. ಆದರೆ ರಮೇಶ್​ ಕುಮಾರ್​ ಬಣದ ಒತ್ತಡಕ್ಕೆ ಮಣಿದು ಎಲ್​ ಹನುಮಂತಯ್ಯ ಅವರಿಗೆ ಟಿಕೆಟ್​​ ನೀಡಲಾಗುತ್ತದೆ ಎನ್ನುವ ಮಾಹಿತಿ ಹೊರಬಿದ್ದಿದ್ದು, ಜೆಡಿಎಸ್​-ಬಿಜೆಪಿ ಮೈತ್ರಿ ಅಭ್ಯರ್ಥಿ ಸುಲಭವಾಗಿ ಗೆಲ್ಲುವಂತೆ ಕಾಂಗ್ರೆಸ್​​ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್​ ನಾಯಕರ ನಿರ್ಧಾರ, ಕಾಂಗ್ರೆಸ್​ ಕಾರ್ಯಕರ್ತರನ್ನೇ ಗೊಂದಲಕ್ಕೆ ಈಡು ಮಾಡುತ್ತಿದೆ. 

ಮೈತ್ರಿ ಅಭ್ಯರ್ಥಿಗೆ ಸವಾಲಾಗ್ತಾರಾ ಎಲ್​ ಹನುಮಂತಯ್ಯ​..? 

ಎಲ್​ ಹನುಮಂತಯ್ಯ ದಲಿತ ಸಮುದಾಯಕ್ಕೆ ಸೇರಿದ ಹಿರಿಯ ಸಾಹಿತಿ. ಈಗಿನ ಚುನಾವಣಾ ರಾಜಕಾರಣದಲ್ಲಿ ಆರ್ಥಿಕ ಶಕ್ತಿಯೂ ಲೆಕ್ಕಕ್ಕೆ ಬರಲಿದ್ದು, ಜೆಡಿಎಸ್​-ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸುವ ಸಾಧ್ಯತೆಯಿದೆ ಎನ್ನುವುದು ಕಾಂಗ್ರೆಸ್​ ಕಾರ್ಯಕರ್ತರ ಅಸಮಧಾನಕ್ಕೆ ಕಾರಣವಾಗಿದೆ. ಆದರೆ ಚಿಕ್ಕಪೆದ್ದಣ್ಣ ಹಾಗು ಹನುಮಂತಯ್ಯ ಇಬ್ಬರೂ ವಿದ್ಯಾವಂತರಾಗಿದ್ದು, ಕಾಂಗ್ರೆಸ್​ ಟಿಕೆಟ್​ ಆಯ್ಕೆ ಮೇಲೆ ಕೋಲಾರ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಅಥವಾ ಸೋಲನ್ನು ಒಪ್ಪಿಕೊಳ್ಳುವ ನಿರ್ಧಾರ ಹೊರಬೀಳಲಿದೆ. ಹಣವೊಂದೇ ಮಾನದಂಡ ಆಗುತ್ತಾ ಎಂದರೆ ಇಲ್ಲ ಎನ್ನಬಹುದು. ಆದರೆ ಮುನಿಯಪ್ಪ ಬಣದ ನಿರ್ಧಾರ ಏನಾಗಲಿದೆ ಎನ್ನುವುದು ಗಮನಿಸಬೇಕಾದ ಸಂಗತಿ.

ಸಚಿವ ಕೆ.ಹೆಚ್​ ಮುನಿಯಪ್ಪ ಕೋಲಾರ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಶಾಲಿ ನಾಯಕರಾಗಿದ್ದು, ಇದೀಗ ದೇವನಹಳ್ಳಿಯಿಂದ ಸ್ಪರ್ಧೆ ಮಾಡಿ ಗೆದ್ದು ಸಚಿವರಾಗಿದ್ದಾರೆ. ಈಗಿರುವಾಗ ಮುನಿಯಪ್ಪ ಜೊತೆಗೆ ಸಿಎಂ ಸಿದ್ದರಾಮಯ್ಯ ಅರ್ಧ ಗಂಟೆಗೂ ಹೆಚ್ಚುಕಾಲ ಚರ್ಚೆ ಮಾಡಿದ್ದಾರೆ. ಆದರೆ ನಿಮಗೆ ಇಷ್ಟ ಬಂದವರಿಗೆ ಟಿಕೆಟ್​ ಕೊಡುವುದಾರೆ ನಾನು ಕೋಲಾರ ಕ್ಷೇತ್ರಕ್ಕೆ ಹೋಗಲ್ಲ. ದೇವನಹಳ್ಳಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸೇರಲಿದ್ದು, ನಾನು ಇಲ್ಲೇ ಇರುತ್ತೇನೆ ಫಲಿತಾಂಶದ ಬಗ್ಗೆ ನನ್ನ ಬಳಿ ಏನನ್ನೂ ಕೇಳುವಂತಿಲ್ಲ ಎಂದಿದ್ದಾರೆ ಎನ್ನಲಾಗ್ತಿದೆ. ಅಲ್ಲಿಗೆ ಕಾಂಗ್ರೆಸ್​ ಏನಾದರೂ ರಮೇಶ್​ ಕುಮಾರ್​ ಬಣವನ್ನು ಒಪ್ಪಿಸಿ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್​ ಕೊಡದಿದ್ದರೆ ಮೈತ್ರಿ ಅಭ್ಯರ್ಥಿಯನ್ನು ಲೋಕಸಭೆಗೆ ಕಳುಹಿಸುವುದು ನಿಶ್ಚಿತ ಎನ್ನುವಂತಾಗಿದೆ. 

Tags: BJPCongress PartyKolarmuniyappaRamesh Kumarಬಿಜೆಪಿಸಿದ್ದರಾಮಯ್ಯ
Previous Post

ಕೇಜ್ರಿವಾಲ್ ಈ ಪ್ರಕರಣದ ಕಿಂಗ್ ಪಿನ್ ಎಂದ ED ! ಧಿಡೀರ್ ಅರವಿಂದ್ ಕೇಜರಿವಾಲ್ ಗೆ ಲೋ ಬಿಪಿ !

Next Post

ಅರವಿಂದ್ ಕೇಜ್ರಿವಾಲ್ 7 ದಿನ ಇಡಿ ಕಸ್ಟಡಿಗೆ ! ದೆಹಲಿ ರಾಜಕಾರಣದಲ್ಲಿ ರೋಚಕ ಬೆಳವಣಿಗೆ !

Related Posts

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!
Top Story

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

by ಪ್ರತಿಧ್ವನಿ
April 11, 2026
0

ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ದೋಸೆ ಹಿಟ್ಟು ಸೇವನೆಯ ಬಳಿಕ ಇಬ್ಬರು ಮಕ್ಕಳು ಮೃತಪಟ್ಟಿರುವ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದೆ. ಪ್ರಾರಂಭದಲ್ಲಿ ಆಹಾರ ವಿಷಬಾಧೆ ಎಂದು ಭಾವಿಸಲಾಗಿದ್ದ...

Read moreDetails
ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

April 11, 2026
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
Next Post
ಅರವಿಂದ್ ಕೇಜ್ರಿವಾಲ್ 7 ದಿನ ಇಡಿ ಕಸ್ಟಡಿಗೆ ! ದೆಹಲಿ ರಾಜಕಾರಣದಲ್ಲಿ ರೋಚಕ ಬೆಳವಣಿಗೆ !

ಅರವಿಂದ್ ಕೇಜ್ರಿವಾಲ್ 7 ದಿನ ಇಡಿ ಕಸ್ಟಡಿಗೆ ! ದೆಹಲಿ ರಾಜಕಾರಣದಲ್ಲಿ ರೋಚಕ ಬೆಳವಣಿಗೆ !

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada