ಕೇಂದ್ರ AICC ಕಚೇರಿಯಲ್ಲಿ ಕಾಂಗ್ರೆಸ್(congress) ಪಕ್ಷದ ನಾಯಕರು ಇಂದು ಸುದ್ದಿಗೋಷ್ಠಿ ನಡೆಸಿ ಪ್ರಧಾನಿ ನರೇಂದ್ರ ಮೋದಿ (pm narendra modi)ಮತ್ತು ಗೃಹ ಸಚಿವ(Home minister) ಅಮಿತ್ ಶಾ ವಿರುದ್ಧ ಕಿಡಿಕಾರಿದ್ದಾರೆ. ದೇಶದಲ್ಲಿ ಪಾರದರ್ಶಕವಾದ ಚುನಾವಣೆ ನಡೆಸಲು ಸಾಧ್ಯವಿಲ್ಲದ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡಿದೆ ಎಂದು ಎನ್.ಡಿ.ಎ ಸರ್ಕಾರದ (NDA government) ವಿರುದ್ಧ ಹರಿಹಾಯ್ದರು. ಚುನಾವಣೆಗೆ ಒಂದು ತಿಂಗಳು ಇರುವಂತೆ ನಮ್ಮ ಖಾತೆಗಳನ್ನ ಕೇಂದ್ರ ಸರ್ಕಾರ ಸೀಜ್ ಮಾಡಿದ್ದು, ಇದೊಂದು ಕ್ರಿಮಿನಲ್ ನಡೆ (Criminal action)ಎಂದು ಹೇಳಿದ್ದಾರೆ.
ಅತಿದೊಡ್ಡ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ನ (Biggest openent party congress) ಚುನಾವಣೆಯಲ್ಲಿ ಹತ್ತಿಕ್ಕಲು ಬಿಜೆಪಿ (BJP) ಮುಂದಾಗಿದೆ. ಅದಕ್ಕಾಗಿ ನಮ್ಮ ಬ್ಯಾಂಕ್ ಖಾತೆಗಳನ್ನು (Bank accounts) ಬಂದ್ ಮಾಡಿದ್ದಾರೆ. ನಮಗೆ ಚುನಾವಣೆ ಖರ್ಚಿಗೆ ಒಂದೇ ಒಂದು ರೂಪಾಯಿ ಕರ್ಚು ಮಾಡಲು ಸಾಧ್ಯವಾಗದಂತೆ ಮಾಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ (Rahul gandhi) ಹೇಳಿದ್ದಾರೆ. ಚುನಾವಣೆಯ ಪ್ರಚಾರ, ಪ್ರವಾಸ ಕೈಗೊಳ್ಳದ ಹಾಗೆ ನಮ್ಮನ ತಡೆಯಲು ಬಿಜೆಪಿ ಈ ನೀಚ ಕೆಲಸ ಮಾಡಿದೆ. ದ್ರೋಹದಿಂದ ಮೋಸದಿಂದ ನಮ್ಮ ಕೈಗಳನ್ನು ಕಟ್ಟಿಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತವನ್ನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ( worlds biggest democracy) ಎಂದು ಕರೆಯಲಾಗುತ್ತೆ. ಆದ್ರೆ ನಿಜಕ್ಕೂ ಇಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ. 1990 ರ ಯಾವುದೋ ಒಂದು ಪ್ರಕರಣ ಮತ್ತು 7 ವರ್ಷದ ಹಿಂದಿನ ಯಾವುದೋ ಪ್ರಕರಣಗಳಿಗೆ ಈಗ ನೋಟೀಸ್ (Notice) ಜಾರಿ ಮಾಡಿ ನಮ್ಮ ಅಕೌಂಟ್ ಗಳನ್ನ ಸೀಜ್ ಮಾಡಿದ್ದಾರೆ. ನಮ್ಮ ಬಳಿ ರ್ಯಾಲಿ (rally) ಮಾಡು ಕೂಡ ದುಡ್ಡಿಲ್ಲ. ಪ್ರಜಾಪಭುತ್ವದಲ್ಲಿ ಇದು ಮಾರಕವಾದ ಬೆಳವಣಿಗೆ. ಇದು ಕೇವಲ ಕಾಂಗ್ರೆಸ್ ನ ಪರಿಸ್ಥಿತಿಯಲ್ಲ, ಇಡೀ ದೇಶದ ಪರಿಸ್ಥಿತಿ ಎಂದು ಹೇಳಿದ ಅವರು , ದೇಶದ ಜನ ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.