ನವದೆಹಲಿ/ಬಲ್ಗೇರಿಯ (Newdelhi/Bulgaria): ಭಾರತೀಯ ನೌಕಾಪಡೆಯ (Indian Navy) ಶೌರ್ಯವನ್ನು ಮೆಚ್ಚಿ ಬಲ್ಗೇರಿಯನ್ (Bulgarian) ಅಧ್ಯಕ್ಷ ರುಮೆನ್ ರಾದೇವ್ (Rumen Radev) ಕೃತಜ್ಞತೆ ಸಲ್ಲಿಸಿದ್ದಾರೆ.
ಬಲ್ಲೇರಿಯನ್ ಹಡಗು ‘ರುಯೆನ್’ ಮತ್ತು ಅದರ ಸಿಬ್ಬಂದಿಯನ್ನು ಸೊಮಾಲಿಯಾದ 35 ಕಡಲ್ಗಳ್ಳರು ಅಪಹರಿಸಿದ್ದರು. ಸುದೀರ್ಘ 40 ಗಂಟೆಗಳ ಕಾರ್ಯಾಚರಣೆ ನಡೆಸಿದ್ದ ಭಾರತೀಯ ನೌಕಾಪಡೆ ಕಡಲ್ಗಳ್ಳರನ್ನು ವಶಕ್ಕೆ ಪಡೆದು 17 ಒತ್ತೆಯಾಳುಗಳನ್ನು ರಕ್ಷಿಸಿದ್ದರು.
ಭಾರತೀಯ ನೌಕಾಪಡೆಯ ಶೌರ್ಯವನ್ನು ಮೆಚ್ಚಿರುವ ಬಲ್ಗೇರಿಯಾದ ಅಧ್ಯಕ್ಷ ರುಮೆನ್ ರಾದೇವ್ ಸಾಮಾಜಿಕ ಮಾಧ್ಯಮದ ಮೂಲಕ ಅಪಹರಣಕ್ಕೊಳಗಾದ ಹಡಗಿನಿಂದ ತನ್ನ 7 ಬಲ್ಗೇರಿಯನ್ ಪ್ರಜೆಗಳು ಸೇರಿದಂತೆ ಅದರ ಸಿಬ್ಬಂದಿಯನ್ನು ರಕ್ಷಿಸುವಲ್ಲಿ ನೌಕಾಪಡೆಯ ಕೆಚ್ಚೆದೆಯ ಕ್ರಮಕ್ಕಾಗಿ ನಾನು ಪ್ರಧಾನಿ ಮೋದಿ (PM Modi) ಮತ್ತು ಭಾರತೀಯ ನೌಕಾಪಡೆಗೆ ಧನ್ಯವಾದ ತಿಳಿಸಿದ್ದಾರೆ.

ಕಳೆದ ಡಿಸೆಂಬರ್ 14ರಂದು ಎಂವಿ ರೂಯೆನ್ ಅನ್ನು ಸೊಮಾಲಿ ಕಡಲ್ಗಳ್ಳರು ಅಪಹರಿಸಿದ್ದರು. ಭಾರತೀಯ ನೌಕಾಪಡೆಯು ಸತತ 40-ಗಂಟೆಗಳ ಕಾಲ ಕಾರ್ಯಾಚರಣೆಯಲ್ಲಿ ಹಡಗು ರುಯೆನ್ ಅನ್ನು ರಕ್ಷಿಸುವ ಮೂಲಕ ವಾಣಿಜ್ಯ ಹಡಗುಗಳನ್ನು ಹೈಜಾಕ್ ಮಾಡುವ ಸೊಮಾಲಿ ಕಡಲ್ಗಳ್ಳರ ಯೋಜನೆಗಳನ್ನು ವಿಫಲಗೊಳಿಸಿತು. ಐಎನ್ಎಸ್ ಕೋಲ್ಕತ್ತ, ಕಳೆದ 40 ಗಂಟೆಗಳಲ್ಲಿ, ಸಂಘಟಿತ ಕ್ರಮಗಳ ಮೂಲಕ ಯಶಸ್ವಿಯಾಗಿ ಎಲ್ಲಾ 17 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಭಾರತೀಯ ನೌಕಾಪಡೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಬಲ್ಗೇರಿಯಾದ ವಿದೇಶಾಂಗ ಸಚಿವೆ ಮರಿಯಾ ಗೇಬ್ರಿಯಲ್, ತನ್ನ ದೇಶದ ಏಳು ನಾಗರಿಕರು ಸೇರಿದಂತೆ ಅಪಹರಣಕ್ಕೊಳಗಾದ ಹಡಗು ಮತ್ತು ಸಿಬ್ಬಂದಿಯನ್ನು ರಕ್ಷಿಸಲು ಯಶಸ್ವಿ ಕಾರ್ಯಾಚರಣೆಗಾಗಿ ಭಾರತೀಯ ನೌಕಾಪಡೆಗೆ ಕೃತಜ್ಞತೆ ಸಲ್ಲಿಸಿದರು. ಗೇಬ್ರಿಯಲ್ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ‘ಎಕ್ಸ್’ ನಲ್ಲಿ, ಅದಕ್ಕಾಗಿ ನಾವು ಸ್ನೇಹಿತರು ಎಂದು ಬರೆದಿದ್ದಾರೆ.
ಭಾರತೀಯ ಸೇನೆಯ ಕಾರ್ಯಾಚರಣೆ ವೇಳೆ ಬಂಧಿತರಾಗಿದ್ದ ಸೊಮಾಲಿಯಾದ 35 ಕಡಲ್ಗಳ್ಳರನ್ನು ಭಾರತೀಯ ಸೇನೆ ಸೋಮವಾರ ಭಾರತಕ್ಕೆ ಕರೆತಂದಿದೆ.
#Bulgarianshiphijack #bulgaria #narendramodi #rumenradev #indiannavy