• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಡಾ. ಮಂಜುನಾಥ್‌ ಹರಕೆ ಕುರಿನಾ..? ಮಾಜಿ ಸಿಎಂ ಕೋಪಕ್ಕೆ ಕಾರಣ ಏನು..?

Krishna Mani by Krishna Mani
March 13, 2024
in ಅಂಕಣ, ಕರ್ನಾಟಕ, ರಾಜಕೀಯ, ವಿಶೇಷ
0
ಡಿ.ಕೆ.ಸುರೇಶ್ ಗೆ ಸರಿಯಾಗೆ ಖೆಡ್ಡಾ ತೋಡಿದ್ರಾ ಮೈತ್ರಿ ನಾಯಕರು ?! ಡಾ.ಮಂಜುನಾಥ್ ಸ್ಪರ್ಧೆ ಬಹುತೇಕ ಖಚಿತ ! 
Share on WhatsAppShare on FacebookShare on Telegram

ಬೆಂಗಳೂರು(Bangalore) ಗ್ರಾಮಾಂತರ(Rural) ಲೋಕಸಭಾ(LokaSaba) ಕ್ಷೇತ್ರದಲ್ಲಿ ಡಿ.ಕೆ ಸುರೇಶ್‌‌(DKSuresh) ಕಾಂಗ್ರೆಸ್‌ ಸಂಸದರಾಗಿದ್ದಾರೆ. ಈ ಬಾರಿಯೂ ಕಾಂಗ್ರೆಸ್‌ನಿಂದ ಡಿ.ಕೆ ಸುರೇಶ್‌ ಅಭ್ಯರ್ಥಿ ಆಗಿದ್ದಾರೆ. ಇನ್ನು ಬಿಜೆಪಿ – ಜೆಡಿಎಸ್‌(BJP-JDS) ಮೈತ್ರಿ ಅಭ್ಯರ್ಥಿ ಆಗಿ ಜಯದೇವ ಹೃದ್ರೋಗ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ ಮಂಜುನಾಥ್‌ ಅಭ್ಯರ್ಥಿ ಆಗುವುದು ಬಹುತೇಕ ಖಚಿತ ಆಗಿದೆ. ಆದರೆ ಡಿ.ಕೆ ಸುರೇಶ್‌ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್‌‌ ಕ್ಷೇತ್ರದಲ್ಲಿ ಪ್ರಭಾವ ಹೆಚ್ಚಾಗಿದ್ದು, ಡಾ ಮಂಜುನಾಥ್‌(Dr Manjunath) ಅವರನ್ನು ಹರಕೆಯ ಕುರಿ ಮಾಡಲಾಗ್ತಿದೆ. ಡಿ.ಕೆ ಸುರೇಶ್‌ ಅವರನ್ನು ಸೋಲಿಸುವ ಆಸೆಯಲ್ಲಿ ಡಾ ಮಂಜುನಾಥ್‌ ಅವರನ್ನು ರಾಜಕೀಯಕ್ಕೆ ಕರೆತಂದು ಸೋಲಿಸಲಾಗುತ್ತದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಆದರೆ ಗೆಲುವು ಶತಸಿದ್ಧ. ಸೋಮವಾರ ನಡೆದ ನಾಯಕರ ಸಭೆಯಲ್ಲಿ ಡಾ ಮಂಜುನಾಥ್‌ ಅಭ್ಯರ್ಥಿ ಅನ್ನೋದನ್ನು ಖಚಿತವಾಗಿ ತಿಳಿಸಿದ್ದಾರೆ. ಡಿ.ಕೆ ಸುರೇಶ್‌ರನ್ನು ಸೋಲಿಸಿಯೇ ತೀರುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ(Kumaraswamy) ಶಪಥ ಮಾಡಿದ್ದಾರೆ ಎನ್ನಲಾಗ್ತಿದೆ. 

ADVERTISEMENT

ಡಾ. ಮಂಜುನಾಥ್‌ ಗೆಲುವು ಸಾಧ್ಯನಾ..? ಇಲ್ವಾ..? 

ಡಾ ಮಂಜುನಾಥ್‌ ವೈದ್ಯಕೀಯ ಸೇವೆಯಲ್ಲಿ ಮಾಡಿರುವ ಕೆಲಸಗಳಿಂದಲೇ ಜನಜನಿತರು. ಬೆಂಗಳೂರು ಹಾಗು ಹಳೇ ಮೈಸೂರು ಭಾಗದಲ್ಲಿ ಡಾ ಮಂಜುನಾಥ್‌ ಹೆಸರು ಖ್ಯಾತಿ ಪಡೆದಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ರಾಜಕಾರಣದಲ್ಲಿ ಜನರನ್ನು ಯಾವ ಪ್ರಮಾಣದಲ್ಲಿ ಸೆಳೆಯುತ್ತಾರೆ ಎನ್ನುವುದರ ಮೇಲೆ ಸೋಲು ಗೆಲುವು ನಿರ್ಧಾರ ಆಗಲಿದೆ. ಇನ್ನು ಡಿ.ಕೆ ಸುರೇಶ್‌ ಹಾಗು ಡಿ.ಕೆ ಶಿವಕುಮಾರ್‌ ರಾಜಕೀಯ ಪ್ರಭಾವ ಹೆಚ್ಚಾಗಿದ್ದು, ಈ ಬಾರಿ ಸೋಲಿನ ಭೀತಿ ಕಾಡುತ್ತಿದೆ. ಇದೇ ಕಾರಣಕ್ಕೆ ಕ್ಷೇತ್ರದಲ್ಲಿ ಈಗಾಗಲೇ ಅಬ್ಬರದ ಪ್ರಚಾರ ಮಾಡುತ್ತಾ, ಮತ್ತೆ ಗೆಲ್ಲಿಸಬೇಕು ಎಂದು ಕರೆ ನೀಡುತ್ತಿದ್ದಾರೆ. ಜೊತೆಗೆ ಮತದಾರರ ಓಲೈಕೆ ಮಾಡಲು ವಿಧಾನಸಭಾವಾರು ಕುಕ್ಕರ್‌ ಸೇರಿದಂತೆ ಹಿಲವಾರು ಗಿಫ್ಟ್‌ಗಳನ್ನು ಹಂಚಲಾಗ್ತಿದೆ. ಇನ್ನು ಮೋದಿ ಅಲೆ ಜೊತೆಗೆ ಡಾ ಮಂಜುನಾಥ್‌ ಅಭ್ಯರ್ಥಿ ಆದರೆ ಡಿ.ಕೆ ಸುರೇಶ್‌ಗೆ ಸೋಲು ಖಚಿತ ಅನ್ನೋ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. 

ಡಿಕೆಸು, ಡಿಕೆಶಿ ವಿರುದ್ಧ ಕುಮಾರಸ್ವಾಮಿ ಕೆಂಡ ಯಾಕೆ..?

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಅಖಾಡಕ್ಕೆ ಇಳಿದಿದ್ದರು. ಕಾಂಗ್ರೆಸ್‌ ನಾಯಕರಾದ ಡಿ.ಕೆ ಶಿವಕುಮಾರ್‌ ಹಾಗು ಸಿದ್ದರಾಮಯ್ಯ ಪ್ರಚಾರ ಮಾಡಿದರು. ಆದರೆ ಪರೋಕ್ಷವಾಗಿ ಸುಮಲತಾ ಬೆಂಬಲಿಸಿ ನಿಖಿಲ್‌ ಸೋಲಿಗೆ ಕಾಂಗ್ರೆಸ್‌ ನಾಯಕರೇ ಕಾರಣ ಎನ್ನುವುದು ಕುಮಾರಸ್ವಾಮಿ ಆರೋಪ. ಇದಕ್ಕೆ ಪುಷ್ಟಿ ನೀಡುವಂತೆ ಸಿಎಂ ಸಿದ್ದರಾಮಯ್ಯ, ಮೊನ್ನೆ ಮೊನ್ನೆ ಸುಮಲತಾ ಕಳೆದ ಬಾರಿ ಕಾಂಗ್ರೆಸ್‌ ಸಪೋರ್ಟ್‌ನಿಂದಲೇ ಗೆಲುವು ಕಂಡರು ಎಂದಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಆಗಿತ್ತು. ಅಷ್ಟು ಮಾತ್ರವಲ್ಲದೆ ಕಳೆದ ಬಾರಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ನಿಖಿಲ್‌ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿದಾಗ ಇಕ್ಬಾಲ್‌ ಹುಸೇನ್‌ ಗೆಲ್ಲಿಸುವ ಮೂಲಕ ನಿಖಿಲ್‌ ಕುಮಾರಸ್ವಾಮಿಗೆ ಮತ್ತೆ ಸೋಲುಣಿಸಿದ್ದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ನಿಗಿನಿಗಿ ಕೆಂಡವಾಗಿದ್ದಾರೆ. 

ಡಾ. ಮಂಜುನಾಥ್‌ ಆಯ್ಕೆ ದೇಶಕ್ಕೆ ಹಿತ ಯಾಕೆ..?

ಸಂಸದ ಡಿ.ಕೆ ಸುರೇಶ್‌ ಹಾಗು ಡಾ ಮಜುನಾಥ್‌ ಅವರನ್ನು ರಾಜಕೀಯ ಶಕ್ತಿಯಿಂದ ನೋಡಿದಾಗ ಡಿ.ಕೆ ಸುರೇಶ್‌ ಮೇಲುಗೈ ಸಾಧಿಸುತ್ತಾರೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಡಿ.ಕೆ ಸುರೇಶ್‌ಗೆ ಹೋಲಿಸಿದಾಗ ಡಾ ಮಂಜುನಾಥ್‌ ಉತ್ತಮ ಅಭ್ಯರ್ಥಿ ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ರಾಷ್ಟ್ರಾಧ್ಯಂತ ಉತ್ತಮ ಕೆಲಸಗಳನ್ನು ಮಾಡಲಿದ್ದಾರೆ ಎನ್ನುವುದು ಸತ್ಯವೇ ಸರಿ. ರಾಜ್ಯದಲ್ಲಿ ಜಯದೇವ ಸಂಸ್ಥೆಯಲ್ಲಿ ಬಡವರಿಗೂ ಉತ್ತಮ ಚಿಕಿತ್ಸೆ ನೀಡುವಂತೆ ಮಾಡಿರುವುದು ಸಣ್ಣ ಸಾಧನೆಯೇನಲ್ಲ. ಆದರೆ ಮೋದಿ ಅಲೆ ಹಾಗು ಜೆಡಿಎಸ್‌ ಶಕ್ತಿ ಎರಡೂ ಸೇರಿದ್ರೆ ಗೆದ್ದು ಬೀಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಭಯ ಕಾಡ್ತಿರೋದು ಯೋಗೇಶ್ವರ್‌ ಡಬಲ್‌ ಗೇಮ್‌ ಆಡ್ತಾರಾ..? ಅನ್ನೋದು.

ಯೋಗೇಶ್ವರ್ ಮೇಲೆ ಭಯ ಇರೋದು ಯಾಕೆ..? 

ಸಿಪಿ ಯೋಗೇಶ್ವರ್‌ ಕೂಡ ಮಂಗಳವಾರ ನಡೆದ ಸಭೆಯಲ್ಲಿ ಡಾ ಮಂಜುನಾಥ್‌ ಅವರೇ ಅಭ್ಯರ್ಥಿ ಎಂದು ಬಹಿರಂಗವಾಗಿ ಹೇಳಿದ್ದಾರೆ. ಆದರೆ ಯೋಗೇಶ್ವರ್‌ ಪೂರ್ಣ ಮನಸ್ಸಿನಿಂದ ಬೆಂಬಲಿಸ್ತಾರಾ ಅನ್ನೋ ಅನುಮಾನ ಕಾಡುವುದಕ್ಕೆ ಪ್ರಮುಖ ಕಾರಣ ಅಂದ್ರೆ ಕಳೆದ ಕೆಲವು ದಿನಗಳ ಹಿಂದೆ ನಿಶಾ ಯೋಗೇಶ್ವರ್‌ ಡಿ.ಕೆ ಸುರೇಶ್‌ ಜೊತೆಗೆ ಕಾಣಿಸಿಕೊಂಡು ಚರ್ಚೆ ನಡೆಸಿದ್ದರು. ರಘುನಂದನ್‌ ರಾಮಣ್ಣ ನಿಗಮ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ನಡೆ ಬಗ್ಗೆ ಅನುಮಾನಗಳು ಹರಿದಾಡುತ್ತಿದ್ದು, ಹರಕೆ ಕುರಿ ಮಾಡಿದರೆ ಡಾ ಮಂಜುನಾಥ್‌ ರಾಜಕೀಯದ ಬಗ್ಗೆ ಬೇಸರಗೊಳ್ಳುವಂತೆ ಮಾಡುವುದು ಖಚಿತ ಎನ್ನಬಹುದು. 

#DrCNmanjunath #JayadevaHospital #Lokasaba2024 #BJPJDS #DKShivakumar #DKSuresh

Previous Post

ಹಾಲಿವುಡ್ ನಮ್ದೇ ಹವಾ ! ಆಸ್ಕರ್ ವೇದಿಕೆಯಲ್ಲಿ ಇಂಡಿಯನ್ ಸಿನಿಮಾ ಶೈನಿಂಗ್! 

Next Post

ಮುಕ್ತ ವ್ಯಾಪಾರ ಒಪ್ಪಂದ : ಮೋದಿ-ರಿಷಿ ಸುನಕ್ ಮಾತುಕತೆ

Related Posts

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ
ಅಂಕಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

by ಪ್ರತಿಧ್ವನಿ
May 21, 2026
0

(ದಿನಾಂಕ 15 ಮೇ 2026ರಂದು ಡಾ ಬಿ.ಆರ್.‌ ಅಂಬೇಡ್ಕರ್‌ ಜಯಂತಿಯ ಪ್ರಯುಕ್ತ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಉಪನ್ಯಾಸದ ಲೇಖನ ರೂಪ...

Read moreDetails
“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

May 21, 2026
ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

May 20, 2026
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
Next Post
ಮುಕ್ತ ವ್ಯಾಪಾರ ಒಪ್ಪಂದ : ಮೋದಿ-ರಿಷಿ ಸುನಕ್ ಮಾತುಕತೆ

ಮುಕ್ತ ವ್ಯಾಪಾರ ಒಪ್ಪಂದ : ಮೋದಿ-ರಿಷಿ ಸುನಕ್ ಮಾತುಕತೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada