ಬೆಂಗಳೂರು (Bengaluru): 2024 ರ ಲೋಕಸಭಾ ಚುನಾವಣೆಗೆ ರಾಜ್ಯದ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ, ಇಂದು ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್‌ದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ನೇತೃತ್ವದಲ್ಲಿ ಮಹತ್ವದ ಸ್ಕ್ರೀನಿಂಗ್ ಕಮಿಟಿ (Screening Committee) ಸಭೆ ನಡೆಯಿತು.
ಸಭೆಯಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿದ್ದು, ಸಭೆಯು ಸಿಎಂ, ಡಿಸಿಎಂ ಮಧ್ಯೆ ಕೋಲ್ಡ್ ವಾರ್ ಶುರುವಾಗುವಂತೆ ಮಾಡಿದೆ.
ಇನ್ನು ಕೋಲ್ಡ್ ವಾರ್‌ಗೆ ಕಾರಣವಾದ್ರೂ ಏನು ಎಂಬುದನ್ನು ನೋಡುವುದಾದ್ರೆ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (d.k.shivakumar), ಕೆಲ ಹಿರಿಯ ಸಚಿವರುಗಳನ್ನು ಈ ಬಾರಿಯ ಚುನಾವಣೆಯಲ್ಲಿ ನಾವು ಕಣಕ್ಕಿಳಿಸಬೇಕೆಂದು ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ಸಿಎಂ ಸಿದ್ಧರಾಮಯ್ಯ (siddaramaiah)ಅವರು ಸಾಧ್ಯವಿಲ್ಲ. ಸರ್ಕಾರ ಒಳ್ಳೆಯ ಆಡಳಿತ ನೀಡುತ್ತಿರುವ ಈ ಸಂದರ್ಭದಲ್ಲಿ, ಸರ್ಕಾರದ ಅಂಗವಾಗಿರುವ ಸಚಿವರನ್ನು ಕಣಕ್ಕಿಳಿಸಿದ್ರೆ, ಅದು ಸರ್ಕಾರದ ವರ್ಚಸ್ಸಿಗೆ ಡ್ಯಾಮೇಜ್ (Damage) ಉಂಟು ಮಾಡುತ್ತದೆ ಎಂದಿದ್ದಾರೆ.
ಇದನ್ನು ಕೇಳಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ನಮಗೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸೀಟು ಗೆಲ್ಲುವುದು ಮುಖ್ಯ. ನಮ್ಮ ಬಳಿ 136 ಶಾಸಕರ ಸಂಖ್ಯಾ ಬಲಾಬಲವಿದೆ. ಅದರಲ್ಲಿ ಆರೇಳು ಮಂದಿ ಸಚಿವರನ್ನು ಕಣಕ್ಕಿಳಿಸಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಸಿಎಂ ಸಿದ್ದರಾಮಯ್ಯ ಅವರು ಕೆರಳಿದ್ದು, ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾದ್ರೂ ಪರವಾಗಿಲ್ಲ ಎಂಬ ನಿಮ್ಮ ಧೋರಣೆಯ ಮಾತು ಸರಿಯಲ್ಲ. ಇದಕ್ಕೆ ಬೇರೆ ಪರಿಹಾರ ಹುಡುಕಬೇಕು. ಸದ್ಯ ಸರ್ಕಾರದ ಅಂಗವಾಗಿರುವ ಸಚಿವರನ್ನು ಲೋಕಸಭಾ ಚುನಾವಣೆಯ ಅಖಾಡಕ್ಕೆ ದಬ್ಬಲು ನಾನು ಒಪ್ಪುವುದಿಲ್ಲ.
ಈ ವಿಚಾರ ಸದ್ಯ ಸಿಎಂ, ಡಿಸಿಎಂ ನಡುವೆ ಕೋಲ್ಡ್ ವಾರ್ (Cold War) ಶುರು ಮಾಡಿಸಿದ್ದು, ಇದಕ್ಕೆ ಕಾಂಗ್ರೆಸ್‌ನ ಹೈಕಮಾಂಡ್ (High Command) ನಾಯಕರು ಯಾವ ರೀತಿ ಮದ್ದು ಅರೆಯುತ್ತಾರೋ ಎಂಬ ಕುತೂಹಲ ಕೆರಳಿಸಿದೆ.
#cmdcmwar #bengaluru






