• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

5 ಜನರಿಗೆ ಭಾರತ ರತ್ನ.. ದೊಡ್ಡ ದೊಡ್ಡ ರಾಜ್ಯಗಳು ಮೋದಿ ಟಾರ್ಗೆಟ್..!?

Krishna Mani by Krishna Mani
February 10, 2024
in ದೇಶ
0
5 ಜನರಿಗೆ ಭಾರತ ರತ್ನ.. ದೊಡ್ಡ ದೊಡ್ಡ ರಾಜ್ಯಗಳು ಮೋದಿ ಟಾರ್ಗೆಟ್..!?
Share on WhatsAppShare on FacebookShare on Telegram

ಭಾರತ ಸರ್ಕಾರ ಕೊಡಮಾಡುವ ಅತ್ಯುನ್ನತ ಗೌರವವಾದ ಭಾರತ ರತ್ನ ಈ ಬಾರಿ ಐವರು ಗಣ್ಯರಿಗೆ ಘೋಷಣೆ ಆಗಿದೆ. ಈ ಮೊದಲು ಮಾಜಿ ಉಪ ಪ್ರಧಾನಿ, ಬಿಜೆಪಿ ಭೀಷ್ಮ ಲಾಲ್​ ಕೃಷ್ಣ ಅಡ್ವಾಣಿ (Advani) ಹಾಗು ಮರಣೋತ್ತರವಾಗಿ ಬಿಹಾರ ಮಾಜಿ ಸಿಎಂ ದಿವಂಗತ ಕರ್ಪೂರಿ ಠಾಕೂರ್​ಗೆ (Takur) ಭಾರತ ರತ್ನ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಮಾಡಿದ್ದು, ಮತ್ತೆ ಮೂವರು ಗಣ್ಯರಿಗೆ ಮರಣೋತ್ತರ ಭಾರತ ರತ್ನ ಗೌರವ ನೀಡುವುದಾಗಿ ಘೋಷಿಸಿದೆ. ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್, (Pvnarasimharao) ಸಿ. ಚರಣ್ ಸಿಂಗ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ ಅವ್ರಿಗೆ ಭಾರತ ರತ್ನ ನೀಡೋದಾಗಿ ಪ್ರಧಾನಿ ಮೋದಿ (modi) ಘೋಷಿಸಿದ್ದಾರೆ.

ADVERTISEMENT

ಬಿಹಾರ ಮಾಜಿ ಸಿಎಂ ದಿವಂಗತ ಕರ್ಪೂರಿ ಠಾಕೂರ್​ಗೆ ಮರಣೋತ್ತರ ಭಾರತ ರತ್ನ ಘೋಷಿಸಿದ ಬಳಿಕ ಬಿಹಾರ ಸಿಎಂ ನಿತೀಶ್‌ ಕುಮಾರ್‌ ನರೇಂದ್ರ ಮೋದಿಯನ್ನು ಹಾಡಿ ಹೊಗಳಿದ್ರು. ಕೆಲವೇ ದಿನಗಳಲ್ಲಿ ಘಟ್‌ಬಂಧನ್‌ನಿಂದ ಹೊರ ಬಂದು ಬಿಜೆಪಿ ಜೊತೆಗೆ ಸೇರಿಕೊಂಡು ಮುಖ್ಯಮಂತ್ರಿ ಆಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವುದು ನಿಶ್ಚಯ ಆಗಿದೆ. 40 ಕ್ಷೇತ್ರಗಳನ್ನು ಹೊಂದಿರುವ ಬಿಹಾರದಲ್ಲಿ ಕಳೆದ ಬಾರಿ ಬಿಜೆಪಿ 17, ಜೆಡಿಯು 16 ಸ್ಥಾನಗಳನ್ನು ಗೆದ್ದಿದ್ದವು. ಈ ಬಾರಿಯೂ ಹೆಚ್ಚು ಕಡಿಮೆ ಕಳೆದ ಬಾರಿ ಗೆದ್ದಿರುವ 33 ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಮೋದಿ ಸಕ್ಸಸ್‌ ಆಗಲಿದ್ದಾರೆ ಎನ್ನಬಹುದು. ಇದೀಗ ಮತ್ತೆ ಮೂರು ರಾಜ್ಯಗಳನ್ನು ಭಾವನಾತ್ಮಕ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ನರೇಂದ್ರ ಮೋದಿ.

ಆಂಧ್ರ ಗೆಲ್ಲುವುದು, ಗೆಲ್ಲಿಸಿವುದು ಮೋದಿ ಟಾರ್ಗೆಟ್..!

ಆಂಧ್ರ ಪ್ರದೇಶ ಮೂಲದ ಪಿ.ವಿನರಸಿಂಹರಾವ್ ಅವರು ದೇಶದ 9ನೇ ಪ್ರಧಾನಿಗಳಾಗಿ ಕಾರ್ಯ ನಿರ್ವಹಿಸಿದ್ದರು. 1991ರಿಂದ 1996ರವರೆಗೂ ನರಸಿಂಹರಾವ್ ದೇಶದ ಪ್ರಧಾನಮಂತ್ರಿ ಆಗಿ ಕೆಲಸ ಮಾಡಿದ್ದಾರೆ. ಅದಕ್ಕೂ ಮುಂಚೆ 1971ರಿಂದ 73ವರೆಗೂ ಆಂಧ್ರಪ್ರದೇಶದ ಸಿಎಂ ಕೂಡ ಆಗಿದ್ದರು. ಕಾನೂನು ಮತ್ತು ವಾರ್ತಾ ಸಚಿವರಾಗಿ, ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿ ಜನಮನ್ನಣೆ ಗಳಿಸಿದ್ದಾರೆ. 25 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಆಂಧ್ರದಲ್ಲಿ ಕಳೆದ ಬಾರಿ YSR ಕಾಂಗ್ರೆಸ್‌ 22 ಸ್ಥಾನಗಳನ್ನು ಗೆದ್ದಿದ್ದು, ಟಿಡಿಪಿ 3 ಸ್ಥಾನಗಳನ್ನು ಗೆದ್ದಿತ್ತು. ಆಂಧ್ರದಲ್ಲಿ ಬಿಜೆಪಿ ಗೆಲ್ಲದಿದ್ದರೂ ಬಿಜೆಪಿಗೆ ಯಾವುದೇ ನಷ್ಟವಿಲ್ಲ, ಆದರೆ ಕಾಂಗ್ರೆಸ್‌ ಮಾತ್ರ ಗೆಲ್ಲಬಾರದು ಎನ್ನುವುದು ಮೋದಿ ಲೆಕ್ಕಾಚಾರ. ಇನ್ನು YSR ಕಾಂಗ್ರೆಸ್‌ ಗೆದ್ದರೂ ಮೋದಿಗೆ ಬೆಂಬಲ ನೀಡುವ ಕಾರಣಕ್ಕೆ ಯಾವುದೇ ಸಮಸ್ಯೆ ಇಲ್ಲ. ಆಂಧ್ರ ಜನರನ್ನು ಸೆಳೆಯಲು ಭಾರತ ರತ್ನ ಸಹಕಾರಿ ಆಗುವ ಸಾಧ್ಯತೆಯಿದೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಸದೆ ಬಡಿಯುವ ಯತ್ನ!

ಸಿ ಚರಣ್​ ಸಿಂಗ್ ದೇಶದ 5ನೇ ಪ್ರಧಾನಮಂತ್ರಿ ಆಗಿ 1979ರಿಂದ 1980ವರೆಗೂ ಕೆಲಸ ಮಾಡಿದ್ದಾರೆ. ಅದಕ್ಕೂ ಮೊದಲ ಉತ್ತರ ಪ್ರದೇಶದಲ್ಲಿ 2 ಬಾರಿ ಸಿಎಂ ಆಗಿ ಕೆಲಸ ಮಾಡಿದ್ದರು. ಉತ್ತರ ಪ್ರದೇಶ ಇಡೀ ದೇಶದಲ್ಲೇ ಅತೀ ದೊಡ್ಡ ರಾಜ್ಯವಾಗಿದ್ದು, 80 ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಕಳೆದ ಬಾರಿ ಬಿಜೆಪಿ 62, ಬಿಎಸ್‌ಪಿ 10, ಎಸ್‌ಪಿ 5, ಕಾಂಗ್ರೆಸ್‌ 01, ಅಪ್ನಾ ದಳ 2 ಸ್ಥಾನಗಳನ್ನು ಗೆದ್ದಿದೆ. ಈ ಬಾರಿಯೂ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಕಮಾಲ್‌ ಮಾಡುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಬಹುದೊಡ್ಡ ರಾಜ್ಯ ಆಗಿರುವ ಕಾರಣಕ್ಕೆ ಜನರನ್ನು ಸೆಳೆಯುವ ಉದ್ದೇಶ ಚರಣ್‌ ಸಿಂಗ್‌ ಹೆಸರಲ್ಲಿ ಕಂಡು ಬರ್ತಿದೆ.

ದ್ರಾವಿಡ ಭೂಮಿಯಲ್ಲಿ ಗೆಲುವಿನ ಭೂಮಿಪೂಜೆ!

ಇನ್ನು ತಮಿಳುನಾಡಿನ ತಂಜಾವೂರು ಮೂಲದ ಕೃಷಿ ತಜ್ಞ ಎಂ.ಎಸ್.ಸ್ವಾಮಿನಾಥನ್ ಅವರಿಗೂ ಭಾರತ ರತ್ನ ಘೋಷಣೆ ಆಗಿದೆ. ದೇಶದ ಹಸಿರು ಕ್ರಾಂತಿಯ ಹರಿಕಾರ ಎಂದೇ ಪ್ರಸಿದ್ಧರಾದ ಸ್ವಾಮಿನಾಥನ್‌, ಭತ್ತದ ತಳಿ ಅಭಿವೃದ್ಧಿಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಸಸ್ಯ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದಾರೆ. 38 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ತಮಿಳುನಾಡಿನಲ್ಲಿ ಬಿಜೆಪಿ ಪ್ರಾಬಲ್ಯವಿಲ್ಲ. ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ 23, ಕಾಂಗ್ರೆಸ್‌ 8, ವಿದುತಲೈ (VCK) 1, CPM 2, CPI 2, ಮುಸ್ಲಿಂ ಲೀಗ್‌ (IUML) 1, ಮತ್ತು ADMK 1 ಸ್ಥಾನಗಳನ್ನು ಗೆದ್ದಿದ್ದವು. ಈ ಬಾರಿ ಡಿಎಂಕೆ ಅಧಿಕಾರದಲ್ಲಿದ್ದು, ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತಿವೆ. ಹೀಗಾಗಿ ತಮಿಳುನಾಡಿನಲ್ಲಿ ಬಿಜೆಪಿ ಬಾವುಟ ಹಾರಿಸಬೇಕು ಎನ್ನುವ ಹಂಬಲಕ್ಕೆ ಅಣ್ಣಾಮಲೈ ಟೊಂಕ ಕಟ್ಟಿ ರಾಜ್ಯ ಸುತ್ತುತ್ತಿದ್ದಾರೆ. ಅಣ್ಣಾಮಲೈ ಪ್ರಯತ್ನಕ್ಕೆ ಬಲ ತುಂಬಲು ಭಾರತ ರತ್ನ ವರ ಆಗಲಿದೆ ಎನ್ನಬಹುದು.

ರಾಜಕೀಯ ಹಸ್ತಕ್ಷೇಪ ಇಲ್ಲ, ಗಣ್ಯರಿಗೆ ಗೌರವ!

ಬಿಜೆಪಿ ನಾಯಕರು ಯಾವುದೇ ಕಾರಣಕ್ಕೂ ರಾಜಕೀಯ ಉದ್ದೇಶದಿಂದ ಭಾರತ ನೀಡಿಲ್ಲ. ಕಾಂಗ್ರೆಸ್‌ ಮರೆತಿದ್ದ ಗಣ್ಯರನ್ನು ಗೌರವಿಸಿ ಭಾರತ ರತ್ನ ನೀಡಲಾಗಿದೆ ಎಂದು ಹೇಳಿಕೊಳ್ಳಬಹುದು. ಆದರೆ 1999ರಲ್ಲಿ ನಾಲ್ವರಿಗೆ ಭಾರತ ರತ್ನ ನೀಡಲಾಗಿತ್ತು. ಆ ಬಳಿಕ ಈ ವರ್ಷ ಮೊದಲ ಬಾರಿಗೆ ಐವರಿಗೆ ಭಾರತ ರತ್ನ ಗೌರವ ಘೋಷಣೆ ಆಗಿದೆ. ಲೋಕಸಭಾ ಚುನಾವಣೆಗೂ ಮುನ್ನವೇ ಈ ನಿರ್ಧಾರ ಬಿದ್ದಿರುವುದು ಸಹಜವಾಗಿಯೇ ಚುನಾವಣೆ ಉದ್ದೇಶವನ್ನು ಸಾರಿ ಹೇಳುತ್ತಿದೆ. ಚುನಾವಣೆ ಉದ್ದೇಶ ಇಲ್ಲದಿದ್ರೆ ಕಳೆದ 9 ವರ್ಷ ಇದೇ ಮೋದಿ ಸರ್ಕಾರ ಸಾಧನೆಯನ್ನು ಮರೆತಿದ್ದು ಯಾಕೆ..? ಈ ಪ್ರಶ್ನೆಗೆ ಉತ್ತರ ಸಿಗುವ ಸಾಧ್ಯತೆ ಕಡಿಮೆ. ಅದೇನೇ ಇರಲಿ ಹಿರಿಯರನ್ನು ಗೌರವಿಸಿದ್ದಾರೆ ಸ್ವಾಗತಿಸೋಣ.

#Modi #Bharathratna #Pvnarasimharoa #charansigh #Swaminathan

Previous Post

ರಾಜ್ಯ ಅಕ್ಕಿ ಕೇಳಿದ್ರೂ ಕೊಡದ ಮೋದಿ ಸರ್ಕಾರ.. ಅಕ್ಕಿ ಹಂಚಿಕೆ ಹುನ್ನಾರ ಏನು..?

Next Post

ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು: ಈಶ್ವರ ಖಂಡ್ರೆ

Related Posts

BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ
Top Story

BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

by ಪ್ರತಿಧ್ವನಿ
May 13, 2026
0

ಬೆಂಗಳೂರು : ರಾಜ್ಯದ ಶಾಲಾ - ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿಗೆ ತರುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ, ರಾಜ್ಯಾದ್ಯಂತ ಎಲ್ಲ...

Read moreDetails
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

May 13, 2026
ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

May 13, 2026
ಬೆಂಗಳೂರಿಗರಿಗೆ ಡಿಕೆ ಶಿವಕುಮಾರ್‌‌ ಕೊಟ್ಟ ಗುಡ್‌ ನ್ಯೂಸ್ ಏನು..?

ಬೆಂಗಳೂರಿಗರಿಗೆ ಡಿಕೆ ಶಿವಕುಮಾರ್‌‌ ಕೊಟ್ಟ ಗುಡ್‌ ನ್ಯೂಸ್ ಏನು..?

May 13, 2026
ಮಿತ್ರ ಪಕ್ಷಗಳ ಟೀಕೆಗೆ ಮಣಿದ ಸಿಎಂ ವಿಜಯ್ : ವಿಶೇಷಾಧಿಕಾರಿ ನೇಮಕ ವಾಪಸ್‌

ಮಿತ್ರ ಪಕ್ಷಗಳ ಟೀಕೆಗೆ ಮಣಿದ ಸಿಎಂ ವಿಜಯ್ : ವಿಶೇಷಾಧಿಕಾರಿ ನೇಮಕ ವಾಪಸ್‌

May 13, 2026
Next Post
ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು: ಈಶ್ವರ ಖಂಡ್ರೆ

ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು: ಈಶ್ವರ ಖಂಡ್ರೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada