Chitradurgaದ ಸಾಣೇಹಳ್ಳಿಯಲ್ಲಿ Kanakapeetaದ ಈಶ್ವರಾನಂದಪುರಿ ಶ್ರೀ ಈ ರೀತಿಯ ಬೇಸರವನ್ನು ಹೊರ ಹಾಕಿದ್ದಾರೆ. ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಗ್ರಾಮದಲ್ಲಿ ಅಂತರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಈಶ್ವರಾನಂದಪುರಿ ಶ್ರೀಗಳು, ‘ಪರಿವರ್ತನೆಯ ಹಾದಿಯಲ್ಲಿ ಮಠಗಳು’ ಗೋಷ್ಠಿಯಲ್ಲಿ ಮಾತನಾಡಿದ್ದು, ಜಾತಿ ಕಾರಣಕ್ಕೆ ನಮಗೂ ಗರ್ಭಗುಡಿ ಪ್ರವೇಶಕ್ಕೆ ಬಿಡಲಿಲ್ಲ. ಬಾಗೂರು ಗ್ರಾಮದ ಚನ್ನಕೇಶವ ದೇಗುಲದಲ್ಲಿ ಗರ್ಭಗುಡಿಗೆ ಬಿಟ್ಟಿಲ್ಲ. ನಾವು ದೇಗುಲಕ್ಕೆ ಹೋಗಿದ್ದೆವೆಂಬ ಕಾರಣಕ್ಕೆ ಬಳಿಕ ಸ್ವಚ್ಛಗೊಳಿಸಿದ್ದಾರೆ. ಕುರುಬರ ಸ್ವಾಮೀಜಿ ಒಳಗೆ ಬಂದರೆಂಬ ಕಾರಣಕ್ಕೂ ಸ್ವಚ್ಛತೆ ಮಾಡಿದ್ದಾರೆ. ನಾವು ಹೋಗಿದ್ದಕ್ಕಾಗಿ ದೇಗುಲ ಸ್ವಚ್ಛವಾಯಿತೆಂದು ಬೇಸರದಲ್ಲೇ ಸಮಾಜವನ್ನು ವ್ಯಂಗ್ಯ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ನಾನು ಚನ್ನಕೇಶವ ದೇಗುಲಕ್ಕೆ ನಾವು ಹೋಗಲ್ಲ ಎಂದಿರುವ ಶ್ರೀಗಳು. ಮುಜರಾಯಿ ಇಲಾಖೆಗೆ ಸೇರಿದ ದೇಗುಲ ಎಂದು ಗೊತ್ತಿದ್ದರೆ ಪ್ರತಿಭಟನೆ ಮಾಡುತ್ತಿದ್ದೆವು. ಆಗ ನಮಗೆ ಮುಜರಾಯಿ ಇಲಾಖೆಗೆ ಸೇರಿದ ದೇಗುಲ ಎಂಬುದು ತಿಳಿದಿರಲಿಲ್ಲ. ಕಳೆದ ಬಾರಿ ವೈಕುಂಠ ಏಕಾದಶಿಗೆ ಹೋದಾಗ ನರಕ ತೋರಿಸಿಬಿಟ್ಟರು. ಪೂಜಾರಿ ಹೆಣ್ಣು ಮಕ್ಕಳನ್ನೆಲ್ಲಾ ಗರ್ಭಗುಡಿಗೆ ಬಿಟ್ಟರು. ಮಠಾಧೀಶರಾದ ನಮಗೇ ಗರ್ಭಗುಡಿಯ ಒಳಗೆ ಬಿಡಲಿಲ್ಲ ಎಂದರು. ಒಂದು ವೇಳೆ ಮುಜರಾಯಿ ಇಲಾಖೆ ದೇಗುಲ ಎಂದು ಗೊತ್ತಾಗಿದ್ದರೆ ಉಡುಪಿಯಲ್ಲಿ ಕನಕದಾಸರು ಪ್ರತಿಭಟಿಸಿದಂತೆ ಪ್ರತಿಭಟಿಸುತ್ತಿದ್ದೆವು ಅಂತಾನೂ ಹೇಳಿದ್ದಾರೆ.
ಇದೇ ಗೋಷ್ಠಿಯಲ್ಲಿ ಸಾಣೇಹಳ್ಳಿ ತರಳಬಾಳು ಮಠದ ಡಾ.ಪಂಡಿತಾರಾಧ್ಯ ಶ್ರೀಗಳು, ಶಿವಶರಣ ಮಾದಾರ ಚನ್ನಯ್ಯ ಮಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಕುಂಚಿಟಿಗ ಮಠದ ಶಾಂತವೀರ ಶ್ರೀ, ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಶ್ರೀಗಳು ಉಪಸ್ಥಿತರಿದ್ದರು. ಸ್ವಾಮೀಜಿ ಅನ್ನೋ ಕಾರಣಕ್ಕೆ ಬಿಡಲಿಲ್ಲ ಅನ್ನೋದನ್ನು ಬಿಟ್ಟು ನೋಡುವುದಾದರೆ ಓರ್ವ ಸಾಮಾನ್ಯ ಮನುಷ್ಯನಾದರೂ ದೇವರ ಪೂಜೆಗೆ ಬಂದಾಗ ತಡೆಯುವುದು ಯಾವ ನ್ಯಾಯ ಅಲ್ಲವೇ..? ಪೂಜೆ ಮಾಡುವುದು ದೇವರಿಗೆ ಭಕ್ತಿ ಸಮರ್ಪಣೆ ಮಾಡುವುದು ಭಕ್ತರಿಗೆ ಬಿಟ್ಟ ವಿಚಾರ. ಮೇಲ್ಜಾತಿಯಲ್ಲೇ ಹುಟ್ಟಿದರೂ ಭಕ್ತಿ ಇಲ್ಲದೆ ಇದ್ದರೆ ಗರ್ಭಗುಡಿಗೆ ಬಿಟ್ಟರೂ ಏನು ಪ್ರಯೋಜನೆ ಅಲ್ಲವೇ..?
#ChannakeshavaTemple #Caste #KanakaGuruPeeta #EshwaranandaPuriSwamiji #Chitradurga