ಮಂಗಳೂರು ಗಡಿಭಾಗ ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆ ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಅವರು ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಗಡಿಭಾಗವಾದ ಕಾರಣ ಕೇರಳದಿಂದ ಹಲವರು ಮಂಗಳೂರಿಗೆ ಬರ್ತಾರೆ ಹೀಗಾಗಿ ನಮಗೆ ಸರ್ಕಾರದಿಂದ ಕೆಲ ಮಾರ್ಗಸೂಚಿ ಬಂದಿದೆ ಅದರಂತೆ ದ.ಕ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ ಯಾರೂ ಕೂಡ ಆತಂಕ ಮತ್ತು ಅನಗತ್ಯ ಗೊಂದಲ ಬೇಡ ಗಡಿ ಜಿಲ್ಲೆ ಕೇರಳದ ಕಾಸರಗೋಡಿನಲ್ಲಿ ನಿತ್ಯ ಒಂದೆರಡು ಪ್ರಕರಣ ಪತ್ತೆಯಾಗ್ತಿದೆ ಆದರೆ ನಮ್ಮ ಜಿಲ್ಲೆಯಲ್ಲಿ ಯಾವುದೇ ಸಕ್ರಿಯ ಪ್ರಕರಣಗಳು ಇಲ್ಲ
ಇನ್ನು ಸದ್ಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಸೂಚನೆ ಕೊಡಲಾಗಿದೆ ಆಕ್ಸಿಜನ್ ಬೆಡ್ ಗಳು, ಐಸಿಯು, ವೆಂಟಿಲೇಟರ್ ಸಿದ್ದವಾಗಿಡಲು ಸೂಚಿಸಲಾಗಿದೆ ಇದರ ಜೊತೆಗೆ ಗಡಿಭಾಗದ ಸ್ವರ್ಗ, ಸಾರಡ್ಕ, ಜಲ್ಸೂರು, ತಲಪಾಡಿ, ಈಶ್ವರಮಂಗಲದಲ್ಲಿ ಅಲರ್ಟ್ ಗೆ ಸೂಚಿಸಲಾಗಿದೆ.ಕೇರಳದ ಗಡಿಭಾಗವಾಗ ಈ ಐದು ಕಡೆ ಯಾವುದೇ ನಿರ್ಬಂಧ ಇರಲ್ಲ ಆದರೆ ಅಲ್ಲಿಂದ ಬರೋರಿಗೆ ನಮ್ಮ ಸಿಬ್ಬಂದಿ ಮೈಕ್ ಮೂಲಕ ಮಾಹಿತಿ ಕೊಡ್ತಾರೆ ನಾವು ಯಾವುದೇ ಕಡ್ಡಾಯ ತಪಾಸಣೆ ಮಾಡಲು ಸೂಚನೆ ಬಂದಿಲ್ಲ ಆದರೆ ಮಾಹಿತಿ ಕೊಡ್ತೇವೆ, ಅಗತ್ಯ ಬಿದ್ದರೆ ತಪಾಸಣೆ ಮಾಡ್ತೇವೆ ಸಾರಿ ಪ್ರಕರಣಗಳ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸ್ತೇವೆ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ತಾ ಇದೀವಿ.
ಮಂಗಳೂರಿನ ತಲಪಾಡಿ, ಸುಳ್ಯದ ಜಾಲ್ಸೂರು, ಪುತ್ತೂರಿನ ಸ್ವರ್ಗ, ಬಂಟ್ವಾಳದ ಸಾರಡ್ಕ ಗಡಿಯಲ್ಲಿ ಅಲರ್ಟ್ ಮಾಡಿದ್ದೇವೆ. ಆದರೆ ಕಡ್ಡಾಯ ತಪಾಸಣೆ ಇರಲ್ಲ, ಕೇವಲ ಮಾಹಿತಿ ಕೊಡ್ತೇವೆ 10,986 ಬೆಡ್ ಇದೆ, 1376 ಆಕ್ಸಿಜನ್ ಸಪೋರ್ಟ್ ಐಸಿಯು 728, ವೆಂಟಿಲೇಟರ್ 336 ಸದ್ಯ ನಮ್ಮಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿ ಇದೆ ಶಬರಿಮಲೆಗೆ ಹೋಗಿ ಬಂದವರಿಗೆ ರೋಗ ಲಕ್ಷಣ ಇದ್ರೆ ಪರೀಕ್ಷೆಗೆ ಒಳಪಡಿಸ್ತೇವೆ ಸದ್ಯ ನಮಗೆ ನಿತ್ಯ 321 ಜನರನ್ನು ಪರೀಕ್ಷೆ ಮಾಡೋ ಗುರಿ ಇದೆ ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಹೇಳಿದ್ದಾರೆ.






