ನವೆಂಬರ್ 19ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಬ್ಯಾಟಿಂಗ್ ಆಡುವ ಸಮಯದಲ್ಲಿ ಭದ್ರತ ವೈಫಲ್ಯ ಕಂಡಿದೆ.
ಹೌದು, ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಡುವ ಸಮಯದಲ್ಲಿ ಮೈದಾನಕ್ಕೆ ನುಗ್ಗಿದ ಪ್ಯಾಲೆಸ್ಟೈನ್ ಬೆಂಬಲಿಗ ಕೊಹ್ಲಿಯನ್ನು ತಬ್ಬಿಕೊಂಡಿರುವ ಘಟನೆ ನಡೆದಿದೆ.
ಭಾರತ ತಂಡದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಕ್ರೀಸ್ನಲ್ಲಿರುವಾಗ ಒಳ ನುಗ್ಗಿದ ಯುವಕನನ್ನು ಕಂಡು ಉಭಯ ತಂಡಗಳ ಆಟಗಾರರು ಮತ್ತು ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿತು.
ಒಳನುಗ್ಗಿದ ವ್ಯಕ್ತಿಯು ಬಿಳಿ ಟಿ-ಶರ್ಟ್ ಧರಿಸಿದ್ದು, ಟಿ-ಶರ್ಟ್ ಮುಂಭಾಗದಲ್ಲಿ ‘ಸ್ಟಾಪ್ ಬಾಂಬಿಂಗ್ ಪ್ಯಾಲೆಸ್ಟೈನ್’ ಮತ್ತು ಹಿಂಭಾಗದಲ್ಲಿ ‘ಫ್ರೀ ಪ್ಯಾಲೆಸ್ಟೈನ್’ ಎಂಬ ಪದಗಳನ್ನು ಬರೆಯಲಾಗಿತ್ತು.