ಇರುಮುಡಿ ಹೊತ್ತು ಮಡೆನೂರಿನಿಂದ ಶಬರಿಮಲೆಗೆ ಹೊರಟ ಮಡೆನೂರ್ ಮನು .

ಕೆ ರಾಮ್ ನಾರಾಯಣ್ ನಿರ್ದೇಶನದ, ಯೋಗರಾಜ್ ಭಟ್ ಕಥೆ ಹೊಂದಿರುವ, ಸಂತೋಷ್ ಕುಮಾರ್ ಮತ್ತು ವಿದ್ಯಾ ನಿರ್ಮಾಣದ, ಮಡೆನೂರು ಮನು ಹಾಗೂ ಮೌನ ಗುಡ್ಡೆಮನೆ ನಾಯಕ, ನಾಯಕಿಯಾಗಿ ನಟಿಸುತ್ತಿರುವ “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ.

ಈ ಚಿತ್ರದ ಚಿತ್ರೀಕರಣ ಯಾವುದೇ ಅಡೆತಡೆಗಳಲ್ಲದೆ ಮುಕ್ತಾಯವಾದರೆ, ಚಿತ್ರ ಬಿಡುಗಡೆಗೂ ಮುನ್ನ ಶಬರಿಮಲೆಗೆ ಬರುವುದಾಗಿ ನಾಯಕ ಮಡೆನೂರ್ ಮನು ಹರಕೆ ಹೊತ್ತಿದರಂತೆ.

ಅದರಂತೆ ಸಂಕ್ರಾಂತಿ ಹಬ್ಬದಂದು ತಮ್ಮ ಊರು ಮಡೆನೂರಿನಿಂದ ಊರಿನ ಗ್ರಾಮ ದೇವತೆ ಸತ್ತಿಗನಹಳ್ಳಿ ಅಮ್ಮನ ಆಶೀರ್ವಾದ ಪಡೆದು, ತಮ್ಮ ಸ್ನೇಹಿತರೊಂದಿಗೆ ಮಡೆನೂರ್ ಮನು ಶಬರಿಮಲೆ ಯಾತ್ರೆಗೆ ಗುರು ಸ್ವಾಮಿ ಅಂಕುಶ್ ಅವರ ಮಾರ್ಗದರ್ಶನದಲ್ಲಿ ಹೊರಟಿದ್ದಾರೆ. ಬಂಧು – ಬಳಗದವರು, ಊರಿನವರು ಹಾಗೂ ಗೆಳೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.