ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಪುರುಷರ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ದಾಖಲೆಯ 6ನೇ ಬಾರಿ ವಿಶ್ವಕಪ್ನ್ನು ಎತ್ತಿಹಿಡಿದಿದೆ.
ಭಾರತ ನೀಡಿದ 240 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲಿ ಡೇವಿಡ್ ವಾರ್ನರ್ 7 ರಸ್, ಸ್ಟೀವ್ ಸ್ಮಿತ್ 4 ರಸ್, ಮಿಚೆಲ್ ಮಾರ್ಚ್ 15 ರಸ್ ಗಳಿಸಿ ಔಟಾದರು. ನಂತರ ಲ್ಯಾಬುಶೇನ್ ಅವರು ಥ್ರಾವಿಸ್ ಹೆಡ್ಗೆ ಉತ್ತಮ ಸಾತ್ ನೀಡಿ ಜೊತೆಯಾಟ ಆಡಿ ಪಂದ್ಯವನ್ನು ಗೆಲ್ಲಿಸಿದ್ದಾರೆ. ಹೆಡ್ ಈ ಮೂಲಕ ಸತಕ 137 ರನ್ ಸಿಡಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಭಾರತ ತಂಡ ಇಂದು ಐಸಿಸಿ ಏಕದಿನ ವಿಶ್ವಕಪ್ 2023ರ ಫೈನಲ್ ಪಂದ್ಯದಲ್ಲಿ ಟಾಸ್ನ ಸೋತು ಬ್ಯಾಟಿಂಗ್ ಆರಂಭಿಸಿತು. ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ & ಕೆ.ಎಲ್.ರಾಹುಲ್ ಬೆನ್ನೆಲುಬಾದರು. ಕೊಹ್ಲಿ ಐಸಿಸಿ ಏಕದಿನ ವಿಶ್ವಕಪ್ 2023ರ ಫೈನಲ್ ಪಂದ್ಯದಲ್ಲೂ 54 ರನ್ನ ಗಳಿಸುವ ಮೂಲಕ ಈ ಟೂರ್ನಿಯಲ್ಲಿ ಒಟ್ಟಾರೆ 765 ರನ್ ಗಳಿಸಿ ಚರಿತ್ರೆ ಬರೆದಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯ ಒಂದೇ ಸೀಸನ್ನಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಕೊಹ್ಲಿ ಆಗಿದ್ದಾರೆ. ಇಷ್ಟಾದರೂ ಭಾರತ ತಂಡಕ್ಕೆ ಫೈನಲ್ ಪಂದ್ಯದಲ್ಲಿ ಗೆಲುವು ತಂದುಕೊಡಲು ಆಗಲೇ ಇಲ್ಲ.
ಆಸ್ಟ್ರೇಲಿಯಾ ತಂಡ ಈವರೆಗೆ ಒಟ್ಟು ಐದು (1987, 1999, 2003, 2007, 2015) ಏಕದಿನ ವಿಶ್ವಕಪ್ ಟ್ರೋಫಿಗಳನ್ನು ಗೆದ್ದಿದೆ. ಇದೇ ವೇಳೆ ಭಾರತ ತಂಡವು 1983 ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಪ್ರಶಸ್ತಿ ಎತ್ತಿಹಿಡಿದಿದೆ. ಈ ಮೂಲಕ 2023ರ ವಿಶ್ವಕಪ್ ಅನ್ನು ಆಸ್ಟ್ರೇಲಿಯಾ ಮುಡಿಗೇರಿಸಿಕೊಂಡಿದೆ.
ಭಾರತದ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದೆ. ಭಾರತದ ಅಭಿಮಾನಿಗಳಿಗೂ ಬೇಸರದ ಸಂಗತಿಯೊಂದು ಈ ಮೂಲಕ ಸಿಕ್ಕಿದ್ದು, ಕ್ರೀಡಾಂಗಣ ಪೂರ್ತಿ ಮೌನ ಆವರಿಸಿದೆ.