• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕೇಂದ್ರ ಸರ್ಕಾರವನ್ನು ಟೀಕಿಸಿದ್ರೆ ಪರಿಹಾರ ಬರಲ್ವಾ..? ಸಿದ್ದರಾಮಯ್ಯ ತಪ್ಪು ಮಾಡಿದ್ರಾ..?

Any Mind by Any Mind
November 4, 2023
in ಕರ್ನಾಟಕ, ದೇಶ
0
ಕೇಂದ್ರ ಸರ್ಕಾರವನ್ನು ಟೀಕಿಸಿದ್ರೆ ಪರಿಹಾರ ಬರಲ್ವಾ..? ಸಿದ್ದರಾಮಯ್ಯ ತಪ್ಪು ಮಾಡಿದ್ರಾ..?
Share on WhatsAppShare on FacebookShare on Telegram

ADVERTISEMENT

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವರು ಹಾಗು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಲು ಹೋದಾಗ ನಮ್ಮ ರಾಜ್ಯದ ಸಚಿವರನ್ನು ಕೇಂದ್ರದ ಬಿಜೆಪಿ ನಾಯಕರು ಭೇಟಿ ಆಗಿಲ್ಲ ಎನ್ನುವುದು ಚರ್ಚೆಗೆ ನಾಂದಿ ಹಾಡಿದೆ. ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಪ್ರತಿನಿತ್ಯ ನರೇಂದ್ರ ಮೋದಿಯವರನ್ನು ಸಿಎಂ ಸಿದ್ದರಾಮಯ್ಯ, ಬೈಯ್ಯುತ್ತಲೇ ಇದ್ದರೆ ಪ್ರಧಾನಿ ಏಕೆ ಸಿಎಂ ಭೇಟಿಯಾಗ್ತಾರೆ..? ಎಂದು ಹೇಳಿದ್ರು. ಇದಕ್ಕೆ ಉತ್ತರ ಕೊಟ್ಟಿರುವ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ವಿರುದ್ದ ಕಿಡಿಕಾರಿದ್ದಾರೆ.

ಕರುನಾಡಿನ ಆರೂವರೆ ಕೋಟಿ ಜನರಿಗೆ ಅಪನಾಮ

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನೀಡಿರುವ ಹೇಳಿಕೆ ರಾಜ್ಯದ ಆರೂವರೆ ಕೋಟಿ ಕನ್ನಡಿಗರಿಗೆ ಮಾಡಿದ ಅಪಮಾನ. ರಾಜಕೀಯ ಅಸ್ತಿತ್ವಕ್ಕಾಗಿ ಗುಲಾಮಿ‌ ಮನೋಭಾವ ತೋರಿಸಿದ್ದಕ್ಕೆ ವಿಷಾಧನೀಯ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ದ ನನಗೆ ವೈಯುಕ್ತಿಕವಾಗಿ ಪ್ರೀತಿ ಅಥವಾ ದ್ವೇಷ ಇಲ್ಲ. ವೈಯುಕ್ತಿಕವಾಗಿ ಅವರೇನು ನನಗೆ ಹಾನಿ ಮಾಡಿಲ್ಲ. ಆದರೆ ಕನ್ನಡಿಗರಿಗೆ ಮಾಡುವ ಅನ್ಯಾಯ ಕಂಡು ಕಣ್ಮುಚ್ಚಿ ಕೂರಲು ಆಗಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿಯ ಗುಲಾಮರಲ್ಲ ಎಂದಿದ್ದಾರೆ.

ಈ ಹಿಂದೆ ಬಿಜೆಪಿ ಬಿಟ್ಟಿದ್ದಾಗ ಮೋದಿಗೆ ಬೈದಿಲ್ವಾ..?

ಬಿಜೆಪಿ ತೊರೆದಿದ್ದ ಬಿ.ಎಸ್‌ ಯಡಿಯೂರಪ್ಪ ಪ್ರಧಾನಿ ಮೋದಿ ಹಾಗುಅಡ್ವಾಣಿಯಂತ ಹಿರಿಯರನ್ನ ಹೇಗೆ ಬೈದಾಡಿದ್ದಾರೆ ಅನ್ನೋದು ರಾಜ್ಯದ ಜನರು ನೋಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯನ್ನ ಮೂರೊತ್ತು ಹಾಡಿ ಹೊಗಳಿದ್ರೂ ಬಿ.ಎಸ್‌ ಯಡಿಯೂರಪ್ಪಗೆ ಒಂದು ಅಪಾಯಿಂಟ್‌ಮೆಂಟ್ ಕೊಡುತ್ತಿಲ್ಲ. ರಾಜ್ಯದಲ್ಲಿ ರಾಜಾಹುಲಿ ಎನಿಸಿಕೊಳ್ಳುವ ಬಿ.ಎಸ್‌ ಯಡಿಯೂರಪ್ಪ ಮೋದಿ ಮುಂದೆ ಇಲಿಯಂತೆ ವರ್ತಿಸೋದು ಅವರ ವ್ಯಕ್ತಿತ್ವಕ್ಕೆ ಭೂಷಣವಲ್ಲ ಎಂದು ಕಿಚಾಯಿಸಿದ್ದಾರೆ.

ಮೋದಿ ಕುಮಾರಸ್ವಾಮಿಯನ್ನು ಅಪ್ಪಿ, ಬೆನ್ನು ತಟ್ಟಿದ್ಯಾಕೆ..?

ಈ ಹಿಂದೆ ಆರ್‌ಎಸ್‌ಎಸ್ ಹಾಗು ನರೇಂದ್ರ ಮೋದಿ ಬಗ್ಗೆ ಬೈದಾಡಿದ್ದ ಹೆಚ್‌.ಡಿ ಕುಮಾರಸ್ವಾಮಿ ಕರೆಯಿಸಿ ಬೆನ್ನು ತಟ್ಟುತ್ತಾರೆ. ಈ ಹಿಂದೆ ಕುಮಾರಸ್ವಾಮಿ ಬೈದಾಡಿದ್ದು ಮೋದಿಗೆ ತಿಳಿದಿರಲಿಲ್ಲವೇ.. ಅಡ್ವಾಣಿ, ಬಿ.ಎಸ್‌ ಯಡಿಯೂರಪ್ಪರಂತ ಹಿರಿಯರನ್ನ ಮೋದಿ ನಡೆಸಿಕೊಳ್ಳುವ ರೀತಿ ಬಗ್ಗೆ ನನಗೆ ತೀವ್ರ ಅಸಮಧಾನ ಇದೆ ಎಂದಿರುವ ಸಿಎಂ ಸಿದ್ದರಾಮಯ್ಯ, ನಿಮಗೆ ತೃಪ್ತಿ ಆಗುವಷ್ಟು ನಿಮ್ಮ ನಾಯಕರನ್ನ ಓಲೈಸಿ, ಬೇಕಿದ್ರೆ ಕಾಲುಹಿಡೀರಿ, ಅದರಿಂದಾದರೂ ರಾಜ್ಯದ ಜನತೆಗೆ ನ್ಯಾಯ ಸಿಗಲಿ ಎಂದು ದಾಳಿ ಮಾಡಿದ್ದಾರೆ.

ಬರ ಪರಿಹಾರವಾಗಿ 17,900 ಕೋಟಿ ಪರಿಹಾರಕ್ಕೆ ಮನವಿ..

ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದು, ಕೇಂದ್ರ ಸರ್ಕಾರದಿಂದ ₹17,900 ಕೋಟಿ ಪರಿಹಾರ ಕೇಳಲಾಗಿದೆ. ರಾಜ್ಯದಲ್ಲಿ ಸುಮಾರು ₹33 ಸಾವಿರ ಕೋಟಿಗೂ ಹೆಚ್ಚು ಬೆಳೆ ನಷ್ಟವಾಗಿದೆ. ದೇಶದ ಐದಾರು ರಾಜ್ಯಗಳಲ್ಲಿ ಮಳೆ ಬಂದಿಲ್ಲ. ನಾವು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರದ ತಂಡವೂ ರಾಜ್ಯಕ್ಕೆ ಬಂದು ಪರಿಶೀಲನೆ ಮಾಡಿ ಹೋಗಿದೆ. ಆದರೆ ಪ್ರಧಾನ ಮಂತ್ರಿಗಳು ಭೇಟಿಯಾಗೋಕೆ ಸಿಗ್ತಿಲ್ಲ. ಕೇಂದ್ರದಲ್ಲಿರೋ ಕೃಷಿ, ಗೃಹ ಮಂತ್ರಿಗಳೂ‌ ನಮ್ಮ ಕೈಗೆ ಸಿಗ್ತಿಲ್ಲ. ಸಚಿವ ಕೃಷ್ಣ ಭೈರೇಗೌಡ, ಚೆಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ ಹೋದರೂ ಭೇಟಿ ಆಗಿಲ್ಲ. ಕೇವಲ ಅಧಿಕಾರಿಗಳನ್ನ ಮಾತ್ರ ಭೇಟಿ ಮಾಡಿ ಬಂದಿದ್ದಾರೆ ಎಂದು ಕಿಡಿಕಾರಿದ್ದಾರೆ. ಇನ್ನು ರಾಜ್ಯದಲ್ಲಿ ಬಿಜೆಪಿ ಅವರು ಬರ ಅಧ್ಯಯನ ಮಾಡೋಕೆ ಹೊರಟಿದಾರೆ. ಇಲ್ಲಿ ಅಧ್ಯಯನ ಮಾಡೋ ಬದಲು ಡೆಲ್ಲಿಗೆ ಹೋಗಿ ಕುಳಿತು ದುಡ್ಡು ಕೊಡಿಸಲಿ. ಸೆಂಟ್ರಲ್‌ನಿಂದ ಬಂದಿದ್ದ ತಂಡಕ್ಕೆ ನಾವು ಈಗಾಗಲೇ ಬರದ ಬಗ್ಗೆ ತೋರಿಸಿದ್ದೇವೆ. ಬೆಳೆ ನಷ್ಟದ ಬಗ್ಗೆ ಮಾಹಿತಿ ನೀಡಿದ್ದೇವೆ. ಇಲ್ಲಿ ಅಧ್ಯಯನ ಮಾಡಿ ಏನು ಮಾಡುತ್ತಾರೆ..? 26 ಜನ ಸಂಸದರಿದ್ದಾರೆ. ಒಬ್ಬರೂ ಪ್ರಯತ್ನ ಮಾಡಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಸಹಾಯ ಕೊಡಿಸೋಕೆ ಪ್ರಯತ್ನ ಮಾಡಲಿ ಅಂತಾ ಆಗ್ರಹ ಕೂಡ ಮಾಡಿದ್ದಾರೆ.

Tags: BJPCongress Partyನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

‘5 ವರ್ಷ ನಾನೇ ಸಿಎಂ’ ಡಿಕೆ ಶಿವಕುಮಾರ್‌ಗೆ 2ನೆ ಬಾರಿ ಹಿನ್ನಡೆ

Next Post

ಛತ್ತೀಸ್‌ಗಢ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವಿವಾಹಿತ ಮಹಿಳೆಯರಿಗೆ ವಾರ್ಷಿಕ 12,000 ರೂ ನೀಡುವುದಾಗಿ ಬರವಸೆ

Related Posts

ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ
ಕರ್ನಾಟಕ

ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

by ಪ್ರತಿಧ್ವನಿ
May 15, 2026
0

ಬೆಂಗಳೂರು: ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಾಬ್, ಜನಿವಾರ, ಶಿವಧಾರ ಸೇರಿದಂತೆ ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳಿಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ತೀವ್ರ...

Read moreDetails
ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

May 14, 2026
ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

May 14, 2026
ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶ: ಕ್ರೆಡಲ್ ಎಂ.ಡಿ. ಕೆ.ಪಿ. ರುದ್ರಪ್ಪಯ್ಯ

ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶ: ಕ್ರೆಡಲ್ ಎಂ.ಡಿ. ಕೆ.ಪಿ. ರುದ್ರಪ್ಪಯ್ಯ

May 14, 2026
ಮೋದಿ ಮಾತಿಗೆ ಬುಲೆಟ್‌ ಏರಿದ ಫಡ್ನವೀಸ್‌ : ಮಹಾರಾಷ್ಟ್ರದಲ್ಲಿ‌ ಇನ್ಮುಂದೆ ಇಂಧನ ಮಿತವ್ಯಯಕ್ಕೆ ಯಾವೆಲ್ಲ ರೂಲ್ಸ್..?

ಮೋದಿ ಮಾತಿಗೆ ಬುಲೆಟ್‌ ಏರಿದ ಫಡ್ನವೀಸ್‌ : ಮಹಾರಾಷ್ಟ್ರದಲ್ಲಿ‌ ಇನ್ಮುಂದೆ ಇಂಧನ ಮಿತವ್ಯಯಕ್ಕೆ ಯಾವೆಲ್ಲ ರೂಲ್ಸ್..?

May 14, 2026
Next Post
ಛತ್ತೀಸ್‌ಗಢ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವಿವಾಹಿತ ಮಹಿಳೆಯರಿಗೆ ವಾರ್ಷಿಕ 12,000 ರೂ ನೀಡುವುದಾಗಿ ಬರವಸೆ

ಛತ್ತೀಸ್‌ಗಢ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವಿವಾಹಿತ ಮಹಿಳೆಯರಿಗೆ ವಾರ್ಷಿಕ 12,000 ರೂ ನೀಡುವುದಾಗಿ ಬರವಸೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada