• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಳ್ಳತನ ನಡೆದು ವರ್ಷದ ಬಳಿಕ ಕಣ್ಣೆದುರೇ ಕಾಣಿಸಿದ ಬೈಕ್ : ಕೊರಗಜ್ಜನಿಗೆ ಹರಕೆ ಹೇಳಿದ್ದ ಬೈಕ್ ಮಾಲಿಕನ

ಪ್ರತಿಧ್ವನಿ by ಪ್ರತಿಧ್ವನಿ
October 12, 2023
in Top Story, ಕರ್ನಾಟಕ
0
ಕಳ್ಳತನ ನಡೆದು ವರ್ಷದ ಬಳಿಕ ಕಣ್ಣೆದುರೇ ಕಾಣಿಸಿದ ಬೈಕ್ : ಕೊರಗಜ್ಜನಿಗೆ ಹರಕೆ ಹೇಳಿದ್ದ ಬೈಕ್ ಮಾಲಿಕನ
Share on WhatsAppShare on FacebookShare on Telegram

ಮಂಗಳೂರು: ಕೊರಗಜ್ಜ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನರ ಆರಾಧ್ಯ ದೈವ. ಯಾವುದೇ ಸಮಸ್ಯೆ ಎದುರಾದರೂ ಮೊದಲು ಜನರು ಮೊರೆ ಹೋಗುವುದು ದೈವಕ್ಕೆ, ಅದು ಯಾವುದೇ ವಸ್ತು ಕಳುವಾದರು ಸರಿ, ಆರೋಗ್ಯ ಸಮಸ್ಯೆ,ಹೀಗೆ ಕೊರಗಜ್ಜನನ್ನು ಭಕ್ತಿಯಿಂದ ನಂಬುವ ಮಂದಿಗೆ ಅದೆಷ್ಟೋ ಕಾರಣಿಕ ಪವಾಡಗಳು ನಡೆದಿವೆ. ಇದೀಗ, ಮಂಗಳೂರಲ್ಲಿ ವರ್ಷದ ಹಿಂದೆ ಕಳವಾದ ಬೈಕ್ ಪವಾಡವೆಂಬಂತೆ ಬೈಕ್ ಮಾಲೀಕನಿಗೆ ಸಿಕ್ಕಿದೆ

ADVERTISEMENT

ಕಾರಣಿಕ ಶಕ್ತಿಯನ್ನು ಮೆರೆಯುತ್ತಿರುವ ಕೊರಗಜ್ಜನ ಪವಾಡಕ್ಕೆ ಬೇಕಾದಷ್ಟು ನಿದರ್ಶನಗಳು ನಮಗೇ ಆಗಾಗ ಕಾಣಸಿಗುತ್ತವೆ. ಕರಾವಳಿಯಲ್ಲಿ ಮತ್ತೊಮ್ಮೆ ಕೊರಗಜ್ಜ ಪವಾಡ ನಡೆದಿದ್ದು, 2022ರ ಮಾರ್ಚ್‌ನಲ್ಲಿ ಮಂಗಳೂರಿನ ಬಲ್ಮಠದ ಹೋಟೆಲ್ ರೂಪ ಬಳಿ ಕಳುವಾದ ಬೈಕ್ ಒಂದೂವರೆ ವರ್ಷದ ಬಳಿಕ ಮಂಗಳೂರಲ್ಲಿ ಬೈಕ್ ಮಾಲೀಕ ನಾಗರಾಜ್ ಅವರಿಗೆ ಬೈಕ್ ಕಂಡಿದ್ದು, ಇದರ ಬೆನ್ನಲ್ಲೇ ಬೈಕ್ ಫಾಲೋ ಮಾಡಿ ತಮ್ಮ ಬೈಕ್ ಅನ್ನು ಹಿಂಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರು ನಗರದ ಹಸಿರು ದಳ ಸಂಯೋಜಕ, ಪರಿಸರವಾದಿ ನಾಗರಾಜ್ ಮಾಲೀಕರಾಗಿದ್ದು, 2022ರ ಮಾರ್ಚ್‌ನಲ್ಲಿ ಬಲ್ಮಠದ ಹೋಟೆಲ್ ರೂಪ ಬಳಿ ನಾಗರಾಜ್ ಅವರ ಅವೆಂಜರ್ ಬೈಕ್ ಕಳುವಾಗಿತ್ತು. ಈ ಬಗ್ಗೆ ಬಂದರು ಪೊಲೀಸರಿಗೆ ದೂರು ನೀಡಿದ್ದರು. ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮಾಸ್ಕ್ ಧರಿಸಿದ ವ್ಯಕ್ತಿ ಬೈಕ್ ಕಳವು ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಬೈಕ್ ಸಿಗುವುದು ಅವಮಾನವೆಂದು ತನಿಖೆಯನ್ನು ಕೈ ಬಿಟ್ಟಿದ್ದರು.

ನಾಗರಾಜ್, ಗಲ್ಫ್ ನಲ್ಲಿದ್ದ ಸಂದರ್ಭ 2017ರಲ್ಲಿ ತನ್ನ ಸಹೋದರನಿಗೆ ಬೈಕ್ ಖರೀದಿಸಿ ಕೊಟ್ಟಿದ್ದರಂತೆ. ಇದು ಅವರ ಮೊದಲ ವಾಹನವಾಗಿದ್ದರಿಂದ ಅವೆಂಜರ್ ಬೈಕ್ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದರಂತೆ. ಇದು ಕಳವಾದ ಬಳಿಕ ಬೇರೆ ವಾಹನ ಖರೀದಿ ಮಾಡಿರಲಿಲ್ಲ. ತನ್ನ ನೆಚ್ಚಿನ ಬೈಕ್ ಕಳ್ಳತನವಾದ ಹಿನ್ನೆಲೆ ಮಗನ ಬೇಸರ ಕಂಡು ನಾಗರಾಜ್ ಅವರ ತಾಯಿ ಕೊರಗಜ್ಜನ ಮೊರೆ ಹೋಗಿದ್ದಾರೆ. ಕುಟುಂಬದ ದೈವ-ದೇವರಿಗೆ ಹರಕೆ ಬೈಕ್ ಸಿಗುವಂತೆ ಪ್ರಾರ್ಥನೆ ಮಾಡಿದ್ದರು. ಈ ನಡುವೆ ಸೋಮವಾರ ಪವಾಡ ನಡೆದಿದೆ.

ಅಕ್ಟೋಬರ್ 9ರಂದು ನಾಗರಾಜ್ ತಮ್ಮ ಕಾಪಿಕಾಡ್ ಕಚೇರಿಯಲ್ಲಿ ಸಿಬ್ಬಂದಿಯಿಲ್ಲದ ಹಿನ್ನೆಲೆ ತಾನೇ ಕೊರಿಯರ್ ನೀಡಲು ಬಿಜೈ ಕೆಎಆರ್‌ಟಿಸಿಗೆ ತೆರಳಿದ್ದರಂತೆ. ಕೆಎಸ್ಸಾರ್ಟಿಸಿ ಬಳಿ ತಲುಪಿದ ಸಂದರ್ಭ ಕಳವಾದ ತನ್ನ ಬೈಕ್ ಅನ್ನು ಗಮನಿಸಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ನಾಗರಾಜ್ ನಂಬರ್ ಪ್ಲೇಟ್ ನೋಡಿ ಅವರ ಕಳವಾದ ಬೈಕ್ ಎಂಬುದನ್ನು ಖಾತ್ರಿ ಪಡಿಸಿಕೊಂಡು ಲಾಲ್‌ಬಾಗ್‌ನಿಂದ ಆ ಬೈಕ್‌ನ್ನು ಜೈಲು ರಸ್ತೆ ತಲುಪುವವರೆಗೂ ಹಿಂಬಾಲಿಸಿದ್ದಾರೆ. ಬಂಟ್ಸ್ ಹಾಸ್ಟೆಲ್ ಬಳಿ ನಾಗರಾಜ್ ಬೈಕನ್ನು ನಿಲ್ಲಿಸಲು ಸೂಚನೆ ನೀಡಿ, ಕಳವಾದ ಬೈಕ್‌ನ ಕೀ ಪಡೆದುಕೊಂಡಿದ್ದಾರೆ.

ಕಳವಾದ ಬೈಕ್ ಚಲಾಯಿಸುತ್ತಿದ್ದ ಹಿರಿಯ ನಾಗರಿಕರನ್ನು ವಿಚಾರಿಸಿದ ಸಂದರ್ಭ ಈ ಬೈಕನ್ನು ತನ್ನ ಸಂಸ್ಥೆಯ ಮಾಲೀಕರು ನೀಡಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಬೈಕ್ ಚಲಿಸುತ್ತಿದ್ದ ವ್ಯಕ್ತಿಯ ಮಾಲೀಕನ ಬಳಿ ವಿಚಾರಿಸಿದ ವೇಳೆ ‘ಬೈಕ್‌ನ್ನು ಹೋಟೆಲ್ ರೂಪ ಬಳಿಯ ಕಟ್ಟಡದ ನೆಲ ಮಾಳಿಗೆಯಲ್ಲಿ ಒಂದು ವರ್ಷದಿಂದ ನಿಲ್ಲಿಸಲಾಗಿದ್ದ ಹಿನ್ನೆಲೆ ಬಳಕೆಯಾಗದ ಕೀ ಮತ್ತು ಹೆಲೈಟ್ ಕಂಡು, ಬೈಕ್ ಸಂಪೂರ್ಣ ಧೂಳುಮಯವಾಗಿತ್ತು ಎಂದು ಹೇಳಿ ಮೊಬೈಲ್‌ನಲ್ಲಿದ್ದ ಬೈಕ್‌ನ ಹಳೇ ಫೊಟೋ ಕಳುಹಿಸಿದ್ದಾರೆ. ಬೈಕ್ ಮಾಲೀಕರಿಲ್ಲ ಎಂಬ ಕಾರಣಕ್ಕೆ ಕೆಲಸದವರಿಗೆ ಬೈಕ್ ಬಳಸಲು ಹೇಳಿದ್ದೆ’ ಎಂದು ವ್ಯಕ್ತಿ ಸಮರ್ಥನೆ ನೀಡಿದ್ದಾರೆ. ಒಟ್ಟಿನಲ್ಲಿ ದೈವ-ದೇವರ ಅನುಗ್ರಹದಿಂದ ಮತ್ತೆ ಬೈಕ್ ಸಿಕ್ಕಿದ್ದು, ಅಮ್ಮನ ಹರಕೆ ನಿಜಕ್ಕೂ ಫಲಿಸಿದೆ. ಅಮ್ಮನಿಗೂ ಬೈಕ್ ಸಿಕ್ಕಿದ್ದು ಖುಷಿ ನೀಡಿದೆ ಎಂದು ನಾಗರಾಜ್ ಸಂತಸ

ವ್ಯಕ್ತಪಡಿಸಿದ್ದಾರೆ.ನಾಗರಾಜ್ ಬೈಕ್ ಸವಾರನ ಜತೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಪೊಲೀಸರು ಮಾಲೀಕರಿಗೆ ಬೈಕ್ ಹಸ್ತಾಂತರಿಸಿದ್ದಾರೆ.

Tags: bikekoragajjamanglorePolice
Previous Post

ವಿಷಾನಿಲದ ನಡುವೆ ಕನಸು ಕಟ್ಟಿಕೊಳ್ಳುವ ಒಂದು ಜಗತ್ತು

Next Post

ಪರಶುರಾಮ ಥೀಮ್ ಪಾರ್ಕ್ ಹಗರಣ: ಯಾರಿಗೂ ತಿಳಿಯದಂತೆ ಅಸಲಿ ಮೂರ್ತಿ ಪ್ರತಿಷ್ಠಾಪಿಸಲು ಹುನ್ನಾರ!

Related Posts

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ
ಕರ್ನಾಟಕ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

by ಪ್ರತಿಧ್ವನಿ
April 14, 2026
0

ವಿಜಯಪುರ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆ, ಒಂದೇ ದಿನದಲ್ಲಿ ಎರಡು ಭೀಕರ ಘಟನೆಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ಹೊರವಲಯದ ಅಲಿಯಾಬಾದ್ ಬಳಿ ಗುಂಡಿನ ಸದ್ದು ಕೇಳಿಸಿಕೊಂಡಿದ್ದು,...

Read moreDetails
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
Next Post
ಪರಶುರಾಮ ಥೀಮ್ ಪಾರ್ಕ್ ಹಗರಣ: ಯಾರಿಗೂ ತಿಳಿಯದಂತೆ ಅಸಲಿ ಮೂರ್ತಿ ಪ್ರತಿಷ್ಠಾಪಿಸಲು ಹುನ್ನಾರ!

ಪರಶುರಾಮ ಥೀಮ್ ಪಾರ್ಕ್ ಹಗರಣ: ಯಾರಿಗೂ ತಿಳಿಯದಂತೆ ಅಸಲಿ ಮೂರ್ತಿ ಪ್ರತಿಷ್ಠಾಪಿಸಲು ಹುನ್ನಾರ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada