• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಎಲೆಕ್ಟ್ರಾನಿಕ್‌ ವಾಹನಗಳು ಮತ್ತು ಭಾರತ ಸರ್ಕಾರ.. ಬರೀ ಎಡವಟ್ಟುಗಳ ಸರಮಾಲೆ..

ಕೃಷ್ಣ ಮಣಿ by ಕೃಷ್ಣ ಮಣಿ
October 4, 2023
in Top Story, ದೇಶ
0
ಎಲೆಕ್ಟ್ರಾನಿಕ್‌ ವಾಹನಗಳು ಮತ್ತು ಭಾರತ ಸರ್ಕಾರ.. ಬರೀ ಎಡವಟ್ಟುಗಳ ಸರಮಾಲೆ..
Share on WhatsAppShare on FacebookShare on Telegram

ಭಾರತದಲ್ಲಿ ಮುಂದಿನ ಐದತ್ತು ವರ್ಷದಲ್ಲಿ ಪೆಟ್ರೋಲ್‌, ಡೀಸೆಲ್‌ ವಾಹನಗಳ ಬಳಕೆ ಕಡಿಮೆ ಮಾಡಬೇಕು ಅನ್ನೋ ಉದ್ದೇಶ ಹೊಂದಿದ್ದೇವೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದರು. ಅದೇ ಕಾರಣಕ್ಕೆ ಸರ್ಕಾರ ಎಲೆಕ್ಟ್ರಾನಿಕ್‌ ವಾಹನಗಳ ಕಡೆಗೆ ಪ್ರೋತ್ಸಾಹ ಕೊಡುತ್ತೇವೆ ಎಂದಿತ್ತು. ಈಗಾಗಲೇ ಜನರೂ ಕೂಡ ಎಲೆಕ್ಟ್ರಾನಿಕ್‌ ವಾಹನಗಳ ಖರೀದಿ ಕಡೆಗೆ ಮನಸ್ಸು ಮಾಡಿದ್ದಾರೆ. ಇನ್ನು ಬೆಂಗಳೂರಿನಂತಹ ನಗರಗಲ್ಲೂ ಎಲೆಕ್ಟ್ರಾನಿಕ್‌ ಬಿಎಂಟಿಸಿ ಬಸ್‌‌ಗಳ ಸಂಚಾರ ನಡೆಯುತ್ತಿದೆ. ಎಲೆಕ್ಟ್ರಾನಿಕ್‌ ವಾಹನಗಳ ಸಂಚಾರದಿಂದ ವಾತಾವರಣದಲ್ಲಿ ವಾಯುಮಾಲಿನ್ಯ ಕಡಿಮೆ ಆಗುತ್ತದೆ. ಜೊತೆಗೆ ಮುಗಿದು ಹೋಗುವ ಇಂಧನಗಳಾದ ಪೆಟ್ರೋಲ್‌, ಡೀಸೆಲ್‌ ಬಳಕೆ ಮಾಡುವುದು ವಿಶ್ವದ ಕನಸಾಗಿದೆ. ಆದರೆ ಇತ್ತೀಚಿಗೆ ನಡೆಯುತ್ತಿರುವ ಕೆಲವು ಘಟನೆಗಳು ಜನರನ್ನು ಆತಂಕಕ್ಕೆ ತಳ್ಳಿದೆ.

ADVERTISEMENT

ಕಂಡ ಕಂಡಲ್ಲಿ ಎಲೆಕ್ಟ್ರಾನಿಕ್‌ ವಾಹನಗಳಿಗೆ ಬೆಂಕಿ ಬೀಳ್ತಿರೋದ್ಯಾಕೆ..?

ಎಲೆಕ್ಟ್ರಾನಿಕ್‌ ವಾಹನಗಳು ರಸ್ತೆಗಳಲ್ಲಿ ಸಂಚಾರ ಮಾಡುತ್ತಿರುವಾಗಲೇ ಬೆಂಕಿ ಬೀಳುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಎಲೆಕ್ಟ್ರಾನಿಕ್‌ ವಾಹನಗಳನ್ನು ಕೊಂಡುಕೊಳ್ಳುವ ಮನಸ್ಥಿತಿಯಲ್ಲಿ ಇರುವ ಜನರಿಗೆ ಬೆಂಕಿ ಬೀಳುತ್ತಿರುವ ಪ್ರಕರಣಗಳು ಆತಂಕ ಸೃಷ್ಟಿಸಿದೆ. ಈ ಮೊದಲು ಮೊಪೆಡ್‌‌ಗಳಲ್ಲೂ ಬೆಂಕಿ ಬೀಳುವ ಪ್ರಕರಣಗಳು ಹೆಚ್ಚಾಗಿದ್ದವು. ಇತ್ತೀಚಿಗೆ ಸ್ಕೂಟರ್‌ಗಳಿಗೆ ಬೆಂಕಿ ಬೀಳುವ ಪ್ರಮಾಣ ಕಡಿಮೆ ಆಗಿದೆ. ಆದರೆ ಕಾರುಗಳಲ್ಲಿ ಬೆಂಕಿ ಬೀಳುವ ಪ್ರಮಾಣ ಇನ್ನೂ ಕಡಿಮೆ ಆಗಿಲ್ಲ. ಇದರ ನಡುವೆ ಭಾರತ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಎಲೆಕ್ಟ್ರಾನಿಕ್‌ ವಾಹನಗಳ ಮಾರಾಟಕ್ಕೆ ಪೆಟ್ಟು ಕೊಟ್ಟಿದೆ. ಜಾಗತಿಕ ಮಟ್ಟದಲ್ಲಿ ಎಲೆಕ್ಟ್ರಾನಿಕ್‌ ವಾಹನಗಳ ಬಳಕೆ ಮಾಡುವ ಮೂಲಕ ವಾಯುಮಾಲಿನ್ಯ ನಿಯಂತ್ರಣ ಮಾಡುವ ನಿಲುವಿಗೆ ತದ್ವಿರುದ್ಧ ಆಗಿದೆ.

ಗ್ರಾಹಕರಿಗೆ ಸಬ್ಸಿಡಿ ಕೊಡುವುದನ್ನು ನಿಲ್ಲಿಸಿದ ಭಾರತ ಸರ್ಕಾರ..!

ಮೊದಲಿಗೆ ಎಲೆಕ್ಟ್ರಾನಿಕ್‌ ವಾಹನಗಳ ಮmಾರಾಟಕ್ಕೆ ಪ್ರೋತ್ಸಾಹ ಕೊಟ್ಟಿದ್ದ ನರೇಂದ್ರ ಮೋದಿ ಸರ್ಕಾರ, ಕೆಲವೇ ತಿಂಗಳುಗಳಲ್ಲಿ ಸಬ್ಸಿಡಿ ತಡೆಯುವ ಕೆಲಸ ಮಾಡಿದೆ. ಇದೀಗ ಎಲೆಕ್ಟ್ರಾನಿಕ್‌ ವಾಹನಗಳಿಗೆ ಕಂಡ ಕಂಡಲ್ಲಿ ಬೆಂಕಿ ಬೀಳುತ್ತಿರುವುದು ಹಾಗು ಕೇಂದ್ರ ಸರ್ಕಾರ ಸಬ್ಸಿಡಿ ನೀಡದೆ ಎಲೆಕ್ಟ್ರಾನಿಕ್‌ ವಾಹನಗಳ ದರ ಏಕಾಏಕಿಯಾಗಿ ಏರಿಕೆ ಆಗಿರುವುದು ಸರ್ಕಾರದ ಸದುದ್ದೇಶ ಈಡೇರುವುದು ಕಷ್ಟ ಸಾಧ್ಯ. ಮುಂದಿನ ಹತ್ತು ವರ್ಷಗಳಲ್ಲಿ ಪೆಟ್ರೋಲ್‌ ಹಾಗು ಡೀಸೆಲ್‌ ರಹಿತ ವಾಹನಗಳ ಕನಸು ಕಾಣುತ್ತಿರುವ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿಕೆಗೆ ಹಿನ್ನಡೆ ಆಗುವ ಸಾಧ್ಯತೆಯಿದೆ. ಎಲೆಕ್ಟ್ರಾನಿಕ್‌ ವಾಹನಗಳಿಗೆ ಸಬ್ಸಿಡಿ ನೀಡುವ ಮೂಲಕ ಖರೀದಿಗೆ ಪ್ರೋತ್ಸಾಹ ನೀಡುವ ಸಂಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಲ್ಲಬೇಕಿತ್ತು. ಆದರೆ ಸರ್ಕಾರ ಕೂಡ ಸಬ್ಸಿಡಿ ನೀಡದೆ ಎಡವಟ್ಟು ಮಾಡುತ್ತಿರುವುದು ಎಲೆಕ್ಟ್ರಾನಿಕ್‌ ವಾಹನಗಳ ಉದ್ದೇಶ ಈಡೇರುವ ಸಾಧ್ಯತೆ ಕಡಿಮೆ.

ಶೇಕಡ 41ರಷ್ಟು ಎಲೆಕ್ಟ್ರಾನಿಕ್‌ ವಾಹನಗಳ ಮಾರಾಟ ಹೆಚ್ಚಳ..!

ದ್ವಿಚಕ್ರ ವಾಹನ ಮಾರಾಟದಲ್ಲಿ ಶೇಕಡ 23.42 ರಷ್ಟು ಹಾಗು ತ್ರಿಚಕ್ರ ವಾಹನ ಮಾರಾಟದಲ್ಲಿ ಶೇಕಡ 73.40 ರಷ್ಟು ಕಾರುಗಳ ಮಾರಾಟದಲ್ಲಿ ಶೇಕಡ 185.46 ರಷ್ಟು ಬಸ್‌ಗಳ ಮಾರಾಟದಲ್ಲಿ ಶೇಕಡ – 52.12 ರಷ್ಟು ಹಾಗು ಲಘು ಸರಕು ಸಾಗಣೆ ವಾಹನ ಶೇಕಡ 142.85 ರಷ್ಟು ವಾಹನ ಮಾರಾಟ ನಡೆದಿದೆ. ಅಂದರೆ ದೇಶದಲ್ಲಿ ಶೇಕಡ 41 ರಷ್ಟು ಮಾರಾಟ ಆಗಿದೆ. ಸಬ್ಸಿಡಿ ಸಿಗುತ್ತಿದ್ದ ಕಾರಣಕ್ಕೆ ಪ್ರಯಾಣಿಕರು ಎಲೆಕ್ಟ್ರಾನಿಕ್‌ ವಾಹನಗಳ ಕಡೆಗೆ ಮುಖ ಮಾಡುತ್ತಿದ್ದರು. ಇತ್ತೀಚಿಗೆ ಸಬ್ಸಿಡಿ ಸ್ಥಗಿತ ಆಗಿರುವ ಕಾರಣಕ್ಕೆ ಮಾರಾಟ ವ್ಯವಸ್ಥೆಯಲ್ಲಿ ಕುಸಿತ ಕಾಣುವ ಸಂಭವ ಹೆಚ್ಚಾಗಿದೆ. ಸ್ಕೂಟರ್‌ಗಳನ್ನು ಸುಧಾರಣೆ ಮಾಡಿ, ಮಾರಾಟಕ್ಕೆ ಅವಕಾಶ ಕೊಟ್ಟಿರುವಂತೆ ಕಾರುಗಳಲ್ಲೂ ಸುಧಾರಣೆ ಮಾಡಿ ಮಾರಾಟ ಮಾಡುವ ಅವಕಾಶವನ್ನು ಸರ್ಕಾರ ಮಾಡಿಕೊಡಬೇಕಿತ್ತು. ಆದರೆ ಸರ್ಕಾರ ಜಾಗತಿಕ ಮಟ್ಟದಲ್ಲಿ ಎಲೆಕ್ಟ್ರಾನಿಕ್‌ ವಾಹನಗಳ ಮಾರಾಟಕ್ಕೆ ಪ್ರೋತ್ಸಾಹಿಸುವ ಮಾತನಾಡುವ ಸರ್ಕಾರ, ಸಬ್ಸಿಡಿ ರದ್ದು ಮಾಡುವ ಮೂಲಕ ವಿರೋಧಾಭಾಸ ಮಾಡಿದೆ ಎನ್ನಬಹುದು.

-ಕೃಷ್ಣಮಣಿ

Tags: bikeElectronic vehiclesIndiaNarendra Modi
Previous Post

ಬೆಂಗಳೂರಿನಲ್ಲಿ ಹಿರಿಯ ನಾಗರಿಕರ ಆರೈಕೆ ಕೇಂದ್ರದ ಅಗತ್ಯವಿದೆ: ಕೆಜೆ ಜಾರ್ಜ್

Next Post

ಆಪರೇಷನ್ ಹಸ್ತ:ಕಾಂಗ್ರೆಸ್ ಕೊಟ್ಟ ಆಹ್ವಾನ ಬಹಿರಂಗಪಡಿಸಿದ ಜೆಡಿಎಸ್ ಶಾಸಕ

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
Next Post
ಆಪರೇಷನ್ ಹಸ್ತ:ಕಾಂಗ್ರೆಸ್ ಕೊಟ್ಟ ಆಹ್ವಾನ ಬಹಿರಂಗಪಡಿಸಿದ ಜೆಡಿಎಸ್ ಶಾಸಕ

ಆಪರೇಷನ್ ಹಸ್ತ:ಕಾಂಗ್ರೆಸ್ ಕೊಟ್ಟ ಆಹ್ವಾನ ಬಹಿರಂಗಪಡಿಸಿದ ಜೆಡಿಎಸ್ ಶಾಸಕ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada