
ಬ್ಯಾರಿ ಸಮುದಾಯದ ಸೌಹಾರ್ಧ ಭವನವನ್ನು ಖುಷಿಯಾಗಿ ಉದ್ಘಾಟಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಖುಷಿ ಹಂಚಿಕೊಂಡಿದ್ದಾರೆ. ನಾನೇ ಈ ಭವನಕ್ಕೆ ಅಡಿಗಲ್ಲು ಹಾಕಿದ್ದು, ಮೊಯಿದ್ದೀನ್ ಬದುಕಿದ್ರು. ಅವರೇ ನನ್ನನ್ನು ಅಹ್ವಾನಿಸಿದ್ದು. ಅವರು ಹಿರಿಯರಾದ್ರೂ ಆತ್ಮೀಯ ಸ್ನೇಹಿತರಾಗಿದ್ರು. ಅವರಲ್ಲಿ ಮನುಷ್ಯತ್ವ ಇತ್ತು. ಯಾವತ್ತೂ ಕೂಡ ಜಾತಿ ಮಾಡಿದವರಲ್ಲ. ಧರ್ಮಾತೀತ, ಜಾತ್ಯಾತೀತವಾಗಿದ್ರು ಈ ದೇಶದಲ್ಲಿ ಹುಟ್ಟಿದ ಮೇಲೆ ಜಾತ್ಯಾತೀತವಾಗಿ ಬದುಕಬೇಕಾದ್ದು ಅನಿವಾರ್ಯ ಸಂವಿಧಾನಕ್ಕೆ ಬದ್ಧವಾದ ಏಕೈಕ ಪಕ್ಷ ಕಾಂಗ್ರೆಸ್ , ಜೆಡಿಎಸ್ ಸೆಕ್ಯೂಲರ್ ಪಕ್ಷ ಅಂತಾರೆ ಅದು ಸೆಕ್ಯುಲರ್ ಪಕ್ಷ ಅಲ್ಲ ಜನತಾದಳ ಯು ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ್ರು ಜನತಾದಳ (ಎಸ್) ನಾನು ಅಧ್ಯಕ್ಷ ಆಗಿದ್ದೆ. ಬಿಜೆಪಿ ಜೊತೆ ಸೇರಿದ್ರೆ ನನ್ನ ಹೆಣದ ಮೇಲೆ ಹೋಗ್ಬೇಕು ಅಂದಿದ್ರು ಈಗ ಬಿಜೆಪಿ ಜೊತೆ ಏಕೆ ಸೇರ್ಕೊಂಡ್ರು ಯಾರ ಉಳಿವಿಗಾಗಿ ಇದು ಹೊಂದಾಣಿಕೆ ನಾನು ರಾಜಕೀಯ ಮಾತಾಡಲ್ಲ ಕಾಂಗ್ರೆಸ್ ಯಾವತ್ತಿಗೂ ಕೋಮು ಪಕ್ಷದ ಜೊತೆ ಹೋಗಲ್ಲ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೋಗಲ್ಲ ಯಾಕೆ ಅವರು ಮುಸ್ಲಿಂ ಕ್ರಿಶ್ಚಿಯನ್ನರನ್ನ ಧ್ವೇಷಿಸ್ತಾರೆ ಸಂವಿಧಾನದ ಬಗ್ಗೆ ಅವರಿಗೆ ಗೌರವ ಇಲ್ಲ ನಾನು ಡಿಕೆಶಿ ಇಬ್ಬರೂ ಹೇಳಿ ಕಳಿಸಿದ್ವಿ ಫಾರೂಕ್ ನ ಕರ್ಕೊಂಡು ಬಾಪ್ಪ ರಾಜ್ಯಸಭೆ ಸದಸ್ಯರಾಗಿ ಮಾಡೋಣ ಅಂತ ಆದ್ರೆ ಈ ಗಿರಾಕಿ ಹೋಗ್ಲಿ ಬಿಡಿ ಫಾರೂಕ್ ಏನು ರಾಜಕೀಯ ಗೊತ್ತಿಲ್ಲದವರಲ್ಲ ಎಂದು ಹೇಳಿದರು.






