• Home
  • About Us
  • ಕರ್ನಾಟಕ
Wednesday, November 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಜೆಡಿಎಸ್-ಬಿಜೆಪಿ ಮೈತ್ರಿ: ತೂಗುಗತ್ತಿಯಲ್ಲಿ ಹಲವು ರಾಜಕಾರಣಿಗಳ ರಾಜಕೀಯ ಭವಿಷ್ಯ!

ಪ್ರತಿಧ್ವನಿ by ಪ್ರತಿಧ್ವನಿ
September 18, 2023
in Top Story, ಕರ್ನಾಟಕ, ರಾಜಕೀಯ
0
ಜೆಡಿಎಸ್-ಬಿಜೆಪಿ ಮೈತ್ರಿ: ತೂಗುಗತ್ತಿಯಲ್ಲಿ ಹಲವು ರಾಜಕಾರಣಿಗಳ ರಾಜಕೀಯ ಭವಿಷ್ಯ!
Share on WhatsAppShare on FacebookShare on Telegram

ಕರ್ನಾಟಕದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ಬಗ್ಗೆ ಊಹಾಪೋಹಗಳಿಗೆಲ್ಲಾ ತೆರೆ ಬಿದ್ದಿದೆ. ಉಭಯ ಪಕ್ಷದ ನಾಯಕರು ಮೈತ್ರಿಯ ಬಗ್ಗೆ ಬಹುತೇಕ ಖಾತ್ರಿ ಪಡಿಸಿದ್ದಾರೆ. ಹಲವು ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರಿಗೆ ವೈಯಕ್ತಿಕವಾಗಿ ಈ ಮೈತ್ರಿಯ ಬಗ್ಗೆ ಒಪ್ಪಿಗೆ ಇಲ್ಲದಿದ್ದರೂ, ತಮ್ಮ ತಮ್ಮ ಪಕ್ಷಗಳ ಉಳಿವಿಗೆ ಮೈತ್ರಿ ಅನಿವಾರ್ಯವಾಗಿದೆ.

ADVERTISEMENT

ಜಾತ್ಯಾತೀತ ಜನತಾದಳದ ಸೆಕ್ಯುಲರ್‌ ತತ್ವಗಳಿಗೆ ಈ ನಡೆ ಬಹುತೇಕ ಪೂರ್ಣ ವಿರಾಮ ಹಾಕಲಿದ್ದು, ಅತ್ತ ಕಡೆ ಕುಟುಂಬ ರಾಜಕಾರಣದ ಬಗ್ಗೆ ಟೀಕಿಸಲು ಆಗದಂತಹ ಇಕ್ಕಟ್ಟಿಗೆ ಬಿಜೆಪಿ ನಾಯಕರು ಸಿಲುಕಲಿದ್ದಾರೆ. ಅದಾಗ್ಯೂ, ಮೈತ್ರಿ ಅನಿವಾರ್ಯವಾಗಿದ್ದು, ಕಾಂಗ್ರೆಸ್ ಅನ್ನು ಕಟ್ಟಿ ಹಾಕಲು ಜಾತಿವಾದ ಮತ್ತು ಕೋಮುವಾದ ಎರಡೂ ಕೈ ಜೋಡಿಸಲು ಸಜ್ಜಾಗಿದೆ.

ಈ ನಡೆಯಿಂದ ಎರಡೂ ಪಕ್ಷಗಳ ಕೆಲವು ನಾಯಕರ ಮೇಲೆ ನೇರ ಪರಿಣಾಮ ಬೀರಲಿದೆ. ಅದರಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಮಂಡ್ಯ ಸಂಸದೆ ಸುಮಲತಾ, ಕಡೂರು ಮಾಜಿ ಶಾಸಕ ವೈಎಸ್‌ವಿ ದತ್ತಾ ಮೊದಲಾದವರು.

ಈಗಾಗಲೇ ಜೆಡಿಎಸ್‌ 2 ಕಾಂಗ್ರೆಸ್‌, ಕಾಂಗ್ರೆಸ್‌ 2 ಜೆಡಿಎಸ್‌ ಎಂದು ಜಂಪ್‌ ಮಾಡಿ ಪಕ್ಷದೊಳಗೆ ಇದ್ದ ಅಲ್ಪಸ್ವಲ್ಪ ವರ್ಚಸ್ಸನ್ನೂ ಕಳೆದುಕೊಂಡಿರುವ ವೈಎಸ್‌ವಿ ದತ್ತಾ ಇದೀಗ ಬಿಜೆಪಿಯೊಂದಿಗಿನ ಮೈತ್ರಿಯನ್ನು ಸಮರ್ಥಿಸಲು ಆರಂಭಿಸಿದ್ದಾರೆ. ಅದು ಪಕ್ಷದೊಳಗಿನ ಅವರ ಅಸ್ತಿತ್ವದ ಪ್ರಶ್ನೆಯಾದರೂ ಸಹ, ಸರಳ ಸಜ್ಜನ ರಾಜಕಾರಣಿ ಎಂದು ಎಲ್ಲಾ ವರ್ಗದವರಿಂದಲೂ ಮನ್ನಣೆ ಪಡೆದುಕೊಂಡಿರುವ ಅವರ ವ್ಯಕ್ತಿತ್ವದ ಮೇಲೆ ಕಲೆ ಮೆತ್ತಲು ಆರಂಭವಾಗಿದೆ.

ಇನ್ನು ಸಿಎಂ ಇಬ್ರಾಹಿಂ ಅವರದ್ದು ಬೇರೆಯದ್ದೇ ಕತೆ. ಕರ್ನಾಟಕದಲ್ಲಿ ಮುಸ್ಲಿಂ ನಾಯಕನಾಗಲು ಹಗಲು ಕನಸು ಕಾಣುತ್ತಿದ್ದ ಸಿಎಂ ಇಬ್ರಾಹಿಂ ಅವರು ವಚನ, ಶರಣ, ಬಸವಣ್ಣನವರನ್ನು ಉದಾಹರಿಸಿ ಮಾತನಾಡುತ್ತಾ ತಮ್ಮ ಮಾತಿನ ಶೈಲಿಯಿಂದಲೇ ಗಮನ ಸೆಳೆಯುತ್ತಿದ್ದವರು. ಜೆಡಿಎಸ್‌ ಅವರಿಗೆ ನಾಮಕಾವಸ್ಥೆಯ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದೆಯಾದರೂ ಬಿಜೆಪಿ ಜೊತೆಗಿನ ಮೈತ್ರಿಯಿಂದ ಅವರು ಮುಸ್ಲಿಮರ ಕಣ್ಣಲ್ಲಿ ಸಂಪೂರ್ಣವಾಗಿ ದುಷ್ಮನ್‌ ಆಗುವ ಸಾಧ್ಯತೆ ಇದೆ.

ಮಾತ್ರವಲ್ಲದೆ, ನಿಖಿಲ್‌ ಕುಮಾರಸ್ವಾಮಿ ಎದುರಲ್ಲಿ ಇಕ್ಬಾಲ್‌ ಹುಸೇನ್‌ ರನ್ನು ಗೆದ್ದ ಬಳಿಕ ಕೆಲವು ಜೆಡಿಎಸ್‌ ಕಾರ್ಯಕರ್ತರು ಬಹಿರಂಗವಾಗಿಯೇ ಮುಸ್ಲಿಮರ ವಿರುದ್ಧ ದ್ವೇಷ, ಅಸಹನೆಗಳನ್ನು ಹರಡುತ್ತಿರುವುದು ಈಗಾಗಲೇ ಜೆಡಿಎಸ್‌ ಮೇಲೆ ಮುಸ್ಲಿಮರ ನಂಬಿಕೆ ಕಳೆದುಕೊಳ್ಳಲು ಕಾರಣವಾಗಿತ್ತು. ನಜ್ಮಾ ನಝೀರ್‌, ಯುಟಿ ಫರ್ಝಾನ ಮೊದಲಾದ ಚಾರ್ಮಿಂಗ್‌ ಯುವ ಮುಸ್ಲಿಂ ಮಹಿಳೆಯರನ್ನು ಪಕ್ಷಕ್ಕೆ ಸೇರಿಸಿ, ಮುಸ್ಲಿಮರ ಮನ ಸೆಳೆಯಲು ಮಾಡಿರುವ ಜೆಡಿಎಸ್‌ ಪ್ರಯತ್ನವೂ ಈ ಮೈತ್ರಿಯೊಂದಿಗೆ ಸಂಪೂರ್ಣವಾಗಿ ನಿಷ್ಪ್ರಯೋಜಕಾರಿ ಆಗಲಿದೆ.

ಇನ್ನು ಮಂಡ್ಯದ ಸುಮಲತಾ ಅಂಬರೀಶ್‌ ಅವರ ಕತೆ. ಬಿಜೆಪಿ ಬೆಂಬಲದಿಂದ ಸುಮಲತಾ ಗೆದ್ದಿರುವ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ ಬಿಟ್ಟು ಕೊಡುವ ಬಗ್ಗೆ ಕಾಣಿಸುತ್ತಿಲ್ಲ. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳು ಸಾಂದ್ರೀಕರಿಸಿ ಇರುವ ಮಂಡ್ಯದಲ್ಲಿ ಎದುರಾದ ಸೋಲು ಜೆಡಿಎಸ್‌ನ ಅವನತಿಗೆ ಪ್ರಥಮ ಮೊಳೆಯಂತೆ ಪರಿಗಣಿಸಲಾಗುತ್ತಿದೆ. ಹಾಗಾಗಿ, ಮಂಡ್ಯವನ್ನು ಮತ್ತೆ ತೆಕ್ಕೆಗೆ ತೆಗೆದುಕೊಂಡು ಅಲ್ಲಿ ಪಕ್ಷವನ್ನು ಬಲಪಡಿಸಲು ಟಿಕೆಟ್‌ ಹಂಚಿಕೆ ವೇಳೆ ಜೆಡಿಎಸ್‌ ಪ್ರಸ್ತಾಪ ಇಡುವ ಪಕ್ಕಾ ಸಾಧ್ಯತೆ ಇದೆ. ಇದು ಸುಮಲತಾ ಅವರಿಗೆ ಅತಂತ್ರವನ್ನು ಸೃಷ್ಟಿಸಲಿದೆ.

ಸುಮಲತಾರೊಂದಿಗೆ ಹೋಲಿಸಿದರೆ ಬಿಜೆಪಿಗೆ ಜೆಡಿಎಸ್‌ ಮೈತ್ರಿಯೇ ಲಾಭದಾಯಕವಾಗುವುದರಿಂದ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಸಾಧ್ಯತೆ ಇದೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಮ ಬಲ ಒಂದರಿಂದಲೇ ಗೆದ್ದು ಬಿಡಬಲ್ಲೆವು ಎಂಬ ನಂಬಿಕೆಯಲ್ಲಿದ್ದ ಕಮಲ ನಾಯಕರಿಗೆ ರಾಜ್ಯ ವಿಧಾನಸಭೆ ಚುನಾವಣೆ ಮರ್ಮಾಘಾತ ನೀಡಿದೆ. ಮೋದಿ ಸಾಲು ಸಾಲು ರ್ಯಾಲಿ ನಡೆಸಿಯೂ ಬಿಜೆಪಿಯ ಅತ್ಯಂತ ನಿಕೃಷ್ಟ ಪ್ರದರ್ಶನದಿಂದ ಮೋದಿ-ಶಾ ಜೋಡಿಗೂ ಆತಂಕ ಶುರುವಾಗಿದೆ. ಈ ಬಾರಿಯ ಇಂಡಿಯಾ ಮೈತ್ರಿಕೂಟವೂ ಚಾಣಾಕ್ಷ ನಡೆಯಿಂದ ಗುಜರಾತಿ ನಾಯಕರನ್ನು ಭೀತಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ನಂತಹ ಪಕ್ಷದೊಂದಿಗೆ ಮೈತ್ರಿಯಗುವುದು ಬಿಜೆಪಿಗೆ ರಕ್ಷಣಾತ್ಮಕ ಆಟ. ಆದರೆ, ಈ ಆಟದಲ್ಲಿ ಯಾವೆಲ್ಲಾ ರಾಜಕಾರಣಿಗಳು ಮೂಲೆಗುಂಪಾಗಲಿದ್ದಾರೆ ಅನ್ನುವುದು ಸದ್ಯದ ಪ್ರಶ್ನೆ!

Tags: BJPCongress PartyJDS-BJPಎಚ್ ಡಿ ಕುಮಾರಸ್ವಾಮಿಬಿಜೆಪಿ
Previous Post

ತೇಜಸ್ವಿನಿ ಶರ್ಮ ಹುಟ್ಟುಹಬ್ಬಕ್ಕೆ “ಫುಲ್ ಮೀಲ್ಸ್” ಚಿತ್ರತಂಡದಿಂದ ವಿಶೇಷ ಉಡುಗೊರೆ

Next Post

ಅಂಕಣ | ನೆನಪಿನ ಚೌಕಗಳಲ್ಲಿ ವಿನಾಯಕ ಚೌತಿ

Related Posts

ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು
Top Story

ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು

by ಪ್ರತಿಧ್ವನಿ
November 19, 2025
0

ಉಡುಪಿ: ವಿದ್ಯಾರ್ಥಿಗಳ ಜನಿವಾರ ತೆಗೆಯುವಂತೆ ಒತ್ತಾಯಿಸಿ ಕಾರಣವಿಲ್ಲದೇ ಮನಸೋ ಇಚ್ಛೆ ಬಸ್ಕಿ ಹೊಡೆಸಿರುವ ಶಿಕ್ಷಕನನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಕಾರ್ಕಳದ ಮೊರಾರ್ಜಿ ದೇಸಾಯಿ ಇಂಗ್ಲಿಷ್ ಮಾಧ್ಯಮ ವಸತಿ...

Read moreDetails
ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌

ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌

November 19, 2025
ರಾಜ್ಯದ ʼಶಕ್ತಿ ಕೇಂದ್ರʼದ ಮುಂದೆ ಡಕಾಯಿತಿ ಮತ್ತು ಗುಂಪು ಗಲಾಟೆ

ರಾಜ್ಯದ ʼಶಕ್ತಿ ಕೇಂದ್ರʼದ ಮುಂದೆ ಡಕಾಯಿತಿ ಮತ್ತು ಗುಂಪು ಗಲಾಟೆ

November 19, 2025
ಚಳಿ ತಡಿಯೋಕೆ ಆಗ್ತಿಲ್ಲ ಕಂಬಳಿ ನೀಡಿ: ಕೋರ್ಟ್‌ಗೆ ನಟ ದರ್ಶನ್‌ ಮನವಿ..!

ಚಳಿ ತಡಿಯೋಕೆ ಆಗ್ತಿಲ್ಲ ಕಂಬಳಿ ನೀಡಿ: ಕೋರ್ಟ್‌ಗೆ ನಟ ದರ್ಶನ್‌ ಮನವಿ..!

November 19, 2025
ಇಂದಿರಾ ಗಾಂಧಿ 108ನೇ ಜನ್ಮದಿನ: ಕಾಂಗ್ರೆಸ್‌ ನಾಯಕರಿಂದ ಗೌರವ ನಮನ

ಇಂದಿರಾ ಗಾಂಧಿ 108ನೇ ಜನ್ಮದಿನ: ಕಾಂಗ್ರೆಸ್‌ ನಾಯಕರಿಂದ ಗೌರವ ನಮನ

November 19, 2025
Next Post
ಅಂಕಣ | ನೆನಪಿನ ಚೌಕಗಳಲ್ಲಿ ವಿನಾಯಕ ಚೌತಿ

ಅಂಕಣ | ನೆನಪಿನ ಚೌಕಗಳಲ್ಲಿ ವಿನಾಯಕ ಚೌತಿ

Please login to join discussion

Recent News

ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು
Top Story

ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು

by ಪ್ರತಿಧ್ವನಿ
November 19, 2025
ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌
Top Story

ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌

by ಪ್ರತಿಧ್ವನಿ
November 19, 2025
ರಾಜ್ಯದ ʼಶಕ್ತಿ ಕೇಂದ್ರʼದ ಮುಂದೆ ಡಕಾಯಿತಿ ಮತ್ತು ಗುಂಪು ಗಲಾಟೆ
Top Story

ರಾಜ್ಯದ ʼಶಕ್ತಿ ಕೇಂದ್ರʼದ ಮುಂದೆ ಡಕಾಯಿತಿ ಮತ್ತು ಗುಂಪು ಗಲಾಟೆ

by ಪ್ರತಿಧ್ವನಿ
November 19, 2025
ಇಂದಿರಾ ಗಾಂಧಿ 108ನೇ ಜನ್ಮದಿನ: ಕಾಂಗ್ರೆಸ್‌ ನಾಯಕರಿಂದ ಗೌರವ ನಮನ
Top Story

ಇಂದಿರಾ ಗಾಂಧಿ 108ನೇ ಜನ್ಮದಿನ: ಕಾಂಗ್ರೆಸ್‌ ನಾಯಕರಿಂದ ಗೌರವ ನಮನ

by ಪ್ರತಿಧ್ವನಿ
November 19, 2025
ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು-ಪುರುಷೋತ್ತಮ ಬಿಳಿಮಲೆ
Top Story

ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು-ಪುರುಷೋತ್ತಮ ಬಿಳಿಮಲೆ

by ಪ್ರತಿಧ್ವನಿ
November 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು

ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು

November 19, 2025
ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌

ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌

November 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!