ಸೂರ್ಯನ ಬಗ್ಗೆ ಅಧ್ಯಯನ ಮಾಡಲು ಭಾರತದ ಇಸ್ರೋ ವಿಜ್ನಾನ ಸಂಸ್ಥೆ ಆದಿತ್ಯ L1 ಯೋಜನೆ ಕೈಗೊಂಡಿದೆ. ಆಂಧ್ರದ ಶ್ರೀಹರಿಕೋಟಾದಿಂದ ಆದಿತ್ಯ L1 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಉಡಾವಣೆ ಮಾಡಿದ ಕಲವೇ ಗಂಟೆಗಳಲ್ಲಿ ತನ್ನ ಕಕ್ಷೆ ಸೇರಿಕೊಂಡಿರುವ ಆದಿತ್ಯ L1, ಭೂಮಿಯನ್ನು ಸುತ್ತು ಹಾಕುವುದಕ್ಕೆ ಶುರು ಮಾಡಿದೆ. ವಿಶ್ವಪರ್ಯಟನೆ ಮಾಡುತ್ತ ವೇಗ ಹೆಚ್ಚಿಸಕೊಳ್ಳುವ ಆದಿತ್ಯ L1, ಆ ಬಳಿಕ ಸೂರ್ಯನ ಕಡೆಗೆ ಜಿಗಿಯಲಿದೆ. ಸುಮಾರು 10 ಲಕ್ಷ ಕಿ.ಲೋ ಮೀಟರ್ ದೂರ ಸಾಗಿದ ಬಳಿಕ ವೇಗ ನಿಯಂತ್ರಣ ಮಾಡಲಿರುವ ಇಸ್ರೋ ವಿಜ್ಞಾನಿಗಳ ತಂಡ, L1 ಸಮೀಪದಲ್ಲಿ ಮಾರ್ಗ ಬದಲಿಸಿ ಮತ್ತೆ ಸುತ್ತು ಹಾಕುವ ಮೂಲಕ L1 ಕೇಂದ್ರದ ಸುತ್ತಲು ಸುತ್ತುವಂತೆ ಮಾಡುತ್ತದೆ. ಅಲ್ಲಿ ಆದಿತ್ಯ L1 ಉದ್ದೇಶಿತ ಕೆಲಸ ಆರಂಭ ಮಾಡಲಿದೆ.
ವಿಶ್ವದ ಯಾವುದೇ ದೇಶದ ರಾಕೆಟ್ L1ಗೆ ಹೋಗಿಲ್ಲ..!
ಚಂದ್ರಯಾನ 3 ಕೈಗೊಂಡಿದ್ದ ಭಾರತದ ಇಸ್ರೋ ವಿಜ್ಞಾನಿಗಳು ಇಲ್ಲೀವರೆಗೂ ಯಾವ ದೇಶವೂ ಸ್ಪರ್ಶ ಮಾಡಲು ಸಾಧ್ಯವಾಗದ ಚಂದ್ರನ ದಕ್ಷಿಣ ತುದಿಯಲ್ಲಿ ನೌಕೆಯನ್ನು ಇಳಿಸುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಅದೇ ರೀತಿ ಸೂರ್ಯಯಾನದಲ್ಲೂ ಭಾರತ ಇತಿಹಾಸ ಸೃಷ್ಟಿಸಿದೆ. L1 ಪಾಯಿಂಟ್ಗೆ ವಿಶ್ವದ ಯಾವುದೇ ದೇಶ ಉಪಗ್ರಹ ಕಳುಹಿಸಿಲ್ಲ. ಇದೀಗ ಭಾರತದ ಇಸ್ರೋ ತಂಡ ಆದಿತ್ಯ L1 ಕಳುಹಿಸುವ ಮೂಲಕ ವೈಶಿಷ್ಟ್ಯತೆ ಮೆರೆಯಲಾಗಿದೆ. ಸೂರ್ಯನ ಸುತ್ತಲು 5
ಜಾಗಗಳಲ್ಲಿ ಮಾತ್ರ ಅವಕಾಶವಿದ್ದು, ಇಲ್ಲೀವರೆಗೂ ಯಾವುದೇ ದೇಶವೂ ಉಪಗ್ರಹ ಕಳಹಿಸದ ಜಾಗ ಎಲ್-1 ಗೆ ಆದಿತ್ಯ ಮಿಷನ್ ಹೋಗ್ತಿದೆ. ಬೆಳಗ್ಗೆ 11:50ಕ್ಕೆ ಉಡಾವಣೆಯಾದ PSLV-C57 10 ಗಂಟೆ ಬಳಿಕ ಕಕ್ಷೆಗೆ ಸೇರಿದ್ದು, ಇನ್ನು 125 ದಿನಗಳ ಕಾಲ ಪ್ರಯಾಣ ನಡೆಸಲಿದೆ.

15 ಲಕ್ಷ ಕಿ.ಮೀ ದೂರದಲ್ಲಿ ಸುತ್ತಲಿದೆ ಆದಿತ್ಯ L1..!
ಭೂಮಿಯಿಂದ ಸೂರ್ಯನ ಅಂತರ ಸುಮಾರು 15 ಕೋಟಿ ಕಿಲೋ ಮೀಟರ್ ದೂರದಲ್ಲಿದ್ದು, ಅದರಲ್ಲಿ ಆದಿತ್ಯ L1 ನೌಕೆಯು ಭೂಮಿಯಿಂದ ಕೇವಲ 15 ಲಕ್ಷ ಕಿಲೋ ಮೀಟರ್ ದೂರದಲ್ಲಿ L1 ಜಾಗವನ್ನು ಸುತ್ತು ಹಾಕುತ್ತ ವಿಜ್ಞಾನಿಗಳ ಅಧ್ಯಯನಕ್ಕೆ ಸಹಕಾರಿ ಆಗಲಿದೆ. ಸೌರಶಕ್ತಿ ಬಳಸಿಕೊಂಡು ಆದಿತ್ಯ – L1 ಸೌರ ಲ್ಯಾಬ್ ಕೆಲಸ ಶುರು ಮಾಡಲಿದ್ದು, ಸೌರಶಕ್ತಿ ಬಳಸಿಕೊಂಡು 5 ವರ್ಷ ಆದಿತ್ಯ – L1 ಅಧ್ಯಯನಕ್ಕೆ ಅನುಕೂಲ ಮಾಡಿಕೊಡಲಿದೆ. 5 ವರ್ಷ 2 ತಿಂಗಳ ಕಾಲ ಅಧ್ಯಯನ ನಡೆಸಲಿದೆ. ಪ್ರತಿದಿನ 1,440 ಫೋಟೋವನ್ನು ಇಸ್ರೋ ಕೇಂದ್ರಕ್ಕೆ ಕಳಿಸುವ ಆದಿತ್ಯ L1, ಸೂರ್ಯನ ಅಧ್ಯಯನಕ್ಕೆ ಬರೋಬ್ಬರಿ 7 ವಿಭಿನ್ನ ಸಲಕರಣೆಗಳನ್ನು ಕೊಂಡೊಯ್ದಿದೆ ಎನ್ನುವುದು ವಿಶೇಷ. ಆದಿತ್ಯ – L1ನಲ್ಲಿರುವ 4 ಪೇಲೋಡ್ಗಳು ಸೂರ್ಯನಿಂದ ಬರುವ ಬೆಳಕಿನ ಬಗ್ಗೆ ಅಧ್ಯಯನ ಮಾಡಿದ್ರೆ, ಇನ್ನುಳಿದ 3 ಪೇಲೋಡ್ಗಳು ಪ್ಲಾಸ್ಮಾ ಮತ್ತು ಮ್ಯಾಗ್ನೆಟಿಕ್ ಕ್ಷೇತ್ರ, ಸೌರ ಗಾಳಿ, ಸೂರ್ಯನ ಪ್ರಭೆ ಬದಲಾವಣೆ ಸೇರಿದಂತೆ ಸೌರ ವಾತಾವರಣಗಳ ಬಗ್ಗೆ ಅಧ್ಯಯನ ನಡೆಸಲಿದೆ.
ಆದಿತ್ಯ L1 ಹೊಂದಿರುವ 7 ಪೇಲೋಡ್ ವಿಶೇಷತೆ ಏನು..?
ಇಸ್ರೋ ಕಳುಹಿಸಿರುವ ಆದಿತ್ಯ L1 ನೌಕೆಯಲ್ಲಿ ಒಟ್ಟು 7 ಪೇಲೋಡ್ಗಳು ಇವೆ. ಅದ್ರಲ್ಲಿ ಒಂದೊಂದು ಪೆಲೋಡ್ಗಳು ಏನೇನು ಕೆಲಸ ಮಾಡುತ್ತೆ ಅಂತಾ ನೋಡೋದಾದ್ರೆ, ಪೆಲೋಡ್ 1ರಲ್ಲಿ VCLV ಇದ್ದು, ಸೂರ್ಯನ ಕೊರೋನಾ ಭಾಗ ಹಾಗು ಸೌರ ಶಾಖದ ಅಧ್ಯಯನ ನಡೆಸಲಿದೆ. ಇನ್ನು ಎರಡಲ್ಲಿ SUIT ಇದ್ದು, ಸೂರ್ಯನಿಂದ ಹೊರಹೊಮ್ಮುವ ಅತಿ ನೇರಳಾತೀತ ವಿಕಿರಣ, ನೇರಳೆ ವಿಕಿರಣಗಳ ಪ್ರಮಾಣದ ಅಧ್ಯಯನ ನಡೆಸಲಿದೆ. ಮೂರರಲ್ಲಿ SOLEXS ಮೂಲಕ ಸೂರ್ಯನ ಸಂಯೋಜನೆ ಹೇಗೆ ನಡೆಯುತ್ತದೆ. ಸೂರ್ಯನ ಎಕ್ಸ್-ಕಿರಣಗಳ ಅಧ್ಯಯನ ಮಾಡಲಿದೆ. ಅದರಂತೆ 4ನೇ ಪೇಲೋಡ್ HEL1OS, ಎಕ್ಸ್-ರೇ ಸಾಧನ ಆಗಿದ್ದು, ಸೂರ್ಯ ಕಿರಣಗಳ ಶಕ್ತಿಯುತ ಪ್ರಕ್ರಿಯೆಗಳ ಅಧ್ಯಯನ ನಡೆಸಲಿದೆ. 5ರಲ್ಲಿ ASPEX ಇದ್ದು, ಸೂರ್ಯನಿಂದ ಬರುವ ಸಣ್ಣ ಕಣಗಳನ್ನು ಹಿಡಿಯುವ ವಿಶೇಷ ಸಂಗ್ರಾಹಕ ಆಗಿದೆ. 6 ರಲ್ಲಿ PAPA ಸೌರ ಮಾರುತದ ಅಧ್ಯಯನ ಮಾಡಲಿದ್ದು, ಸೂರ್ಯನ ಕಾಂತೀಯ ಚಟುವಟಿಕೆ ಹಾಗು ಬಾಹ್ಯಾಕಾಶದ ಮೇಲೆ ಪ್ರಭಾವದ ಅಧ್ಯಯನ ಮಾಡಲಿದೆ. 7ರಲ್ಲಿ MAG ಸೂರ್ಯನ ಕಾಂತೀಯ ಕ್ಷೇತ್ರಗಳ ಅಧ್ಯಯನ ಮಾಡಲಿದ್ದು, ಬಾಹ್ಯಾಕಾಶದಲ್ಲಿ ಹೇಗೆ ಆಧಾರಿತವಾಗಿವೆ. ಸೌರ ಚಟುವಟಿಕೆಯಲ್ಲಿ ಹೇಗೆ ನಿರ್ಣಾಯಕ ಅನ್ನೋ ಬಗ್ಗೆ ಅಧ್ಯಯನ ನಡೆಸಲಿದೆ.

ಸೂರ್ಯಯಾನದ ಮತ್ತಷ್ಟು ವಿಶೇಷತೆಗಳು..!
‘ಸೂರ್ಯ’ ಶಿಕಾರಿಗೆ ಹೊರಟಿರುವ ಆದಿತ್ಯ L1 ಏನೆಲ್ಲಾ ಅಧ್ಯಯನ? ಮಾಡುತ್ತೆ ಅನ್ನೋದನ್ನು ನೋಡೋದಾದ್ರೆ, ಸೂರ್ಯನ ಮೇಲಿನ ಗುರುತ್ವಾಕರ್ಷಣೆ ಪ್ರಮಾಣ ಹೇಗಿದೆ..? ಸೂರ್ಯನ ಮೇಲಿನ ತಾಪಮಾನ ಯಾವ ಪ್ರಮಾಣದಲ್ಲಿದೆ. ಸೂರ್ಯನ ಮೇಲಿನ ಮೇಲ್ಮೈ ಬದಲಾವಣೆ ಹೇಗಾಗುತ್ತದೆ. ಸೂರ್ಯನ ಸುತ್ತಲಿನ ಮಾರ್ಗಗಳು ಯಾವುವು ಅನ್ನೋ ಬಗ್ಗೆಯೂ ಮಾಹಿತಿ ಸಿಗಲಿದೆ. ಈ ಆದಿತ್ಯ L1 ನೌಕೆ ಯಾವುದೇ ಪ್ರದೇಶದಲ್ಲಿ ಲ್ಯಾಂಡ್ ಆಗುವುದಿಲ್ಲ. ಸೂರ್ಯನಿಂದ ಸುಮಾರು 14.50 ಕೋಟಿ ಕಿಲೋ ಮೀಟರ್ ದೂರದಲ್ಲೇ L1 ಸ್ಥಳವನ್ನು ಸುತ್ತು ಹಾಕುತ್ತಲೇ ಇರುತ್ತದೆ. ಅಲ್ಲಿಂದಲೇ ಸೂರ್ಯನ ಬಗ್ಗೆ ಮಾಹಿತಿಯನ್ನು ರವಾನೆ ಮಾಡುತ್ತದೆ. ಭೂಮಿಯಿಂದ 15 ಲಕ್ಷ ಕಿಲೋ ಮೀಟರ್ ದೂರದಲ್ಲಿ ಇದ್ದುಕೊಂಡು ವಿಜ್ಞಾನಿಗಳ ಅಧ್ಯಯನಕ್ಕೆ ಅನುಕೂಲಕಾರಿ. ಯಾವುದೇ ಲ್ಯಾಂಡಿಂಗ್ ಪ್ರಕ್ರಿಯೆ ಇಲ್ಲದೆ ಇರುವ ಪರಿಣಾಮ ಕಕ್ಷೆ ಸೇರಿರುವ ಆದಿತ್ಯ L1 ಫೇಲ್ ಆಗುವ ಸಂಭವ ಕಡಿಮೆ ಎನ್ನಬಹುದು.
ಕೃಷ್ಣಮಣಿ






