• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚಂದ್ರಯಾನ – 3, ಯಶಸ್ವಿ ಆಯ್ತು.. ಇನ್ಮುಂದೆ ರಾಜಕೀಯ ಲಾಭ.. ನಷ್ಟದ ಲೆಕ್ಕ..!!

ಪ್ರತಿಧ್ವನಿ by ಪ್ರತಿಧ್ವನಿ
August 24, 2023
in Top Story, ಅಂಕಣ, ರಾಜಕೀಯ
0
ಚಂದ್ರಯಾನ – 3, ಯಶಸ್ವಿ ಆಯ್ತು.. ಇನ್ಮುಂದೆ ರಾಜಕೀಯ ಲಾಭ.. ನಷ್ಟದ ಲೆಕ್ಕ..!!
Share on WhatsAppShare on FacebookShare on Telegram

ಭಾರತ ಇಡೀ ವಿಶ್ವದಲ್ಲಿ ಯಾವುದೇ ದೇಶ ಮಾಡದೆ ಇರುವ ಸಾಧನೆಯ ಮೈಲಿಗಲ್ಲು ಮುಟ್ಟಿದೆ. ಚಂದ್ರದ ದಕ್ಷಿಣ ಧ್ರುವದಲ್ಲಿ ಸೂರ್ಯನನ್ನೇ ಕಾಣದ ಧ್ರುವ ಪ್ರದೇಶಕ್ಕೆ ಲ್ಯಾಂಡರ್​ ಇಳಿಸುವ ಮೂಲಕ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ ಭಾರತದ ಇಸ್ರೋ ವಿಜ್ಞಾನಿಗಳ ತಂಡ. ಆಂಧ್ರದ ಸತೀಶ್​ ಧವನ್​​ ಉಡಾವಣಾ ಕೇಂದ್ರದಿಂದ ರಾಕೇಟ್​ ಉಡಾವಣೆ ಆದರೂ ಚಂದ್ರಯಾನ – 03 ಸಂಪೂರ್ಣ ಯಶಸ್ಸಿನ ಹೊಣೆಯನ್ನು ಹೊತ್ತುಕೊಂಡಿದ್ದು ಬೆಂಗಳೂರಿನ ಇಸ್ರೋ ಕೇಂದ್ರದ ವಿಜ್ಞಾನಿಗಳು. ಇದೀಗ ಚಂದ್ರಯಾನ – 02 ಯಶಸ್ಸು ಸಾಧಿಸಿದ್ದು, ಹಿರಿಹಿರಿ ಹಿಗ್ಗುವಂತೆ ಮಾಡಿದೆ. ಇದರ ನಡುವೆ ರಾಜಕೀಯವೂ ರಂಗು ಪಡೆದುಕೊಂಡಿದೆ.

ADVERTISEMENT

ಒಂದು ನಿಮಿಷವೂ ಹೆಚ್ಚು ಕಡಿಮೆ ಆಗದಂತೆ ಜಾಣ್ಮೆ..!

ಭಾರತದ ಚಂದ್ರಯಾನದ ಬಳಿಕ ರಷ್ಯಾ ಕೂಡ ಚಂದ್ರಯಾನ ಲೂನಾ – 25 ಹೆಸರಿನಲ್ಲಿ ರಾಕೆಟ್​ ಲಾಂಚ್​ ಮಾಡಿತ್ತು. ಭಾರತದ ರಾಕೆಟ್​ಗೂ ಮುನ್ನವೇ ಅಂದರೆ ಆಗಸ್ಟ್​ 21ರಂದು ಚಂದ್ರ ಮೇಲೆ ರಷ್ಯಾ ಬಾವುಟ ಹಾರಬೇಕಿತ್ತು. ಆದರೆ ರಷ್ಯಾ ಚಂದ್ರಯಾನ ಒಂದು ದಿನ ಮುಂಚಿತವಾಗಿಯೇ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ಒಳಗಾಯ್ತು. ಇದೀಗ ಭಾರತ ಚಂದ್ರಯಾನ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಸಿದ್ದು, ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ ಪುಟಿನ್​. ಇನ್ನು ಭಾರತದ ಇಸ್ರೋ ವಿಜ್ಞಾನಿಗಳು ನಿಗದಿಯಂತೆ ಸಂಜೆ 6 ಗಂಟೆ 04 ನಿಮಿಷಕ್ಕೆ ಶಿಸ್ತುಬದ್ಧವಾಗಿ ಐತಿಹಾಸಿಕ ದಾಖಲೆ ಸೃಷ್ಟಿಸಿದ್ದಾರೆ. ಈಗಾಗಲೇ ಚಂದ್ರನ ಮೇಲೆ ಪ್ರಗ್ಯಾನ್​ ರೋವರ್ ಇಳಿದಿದ್ದು, ಬೆಂಗಳೂರಿನ ಪೀಣ್ಯಾ ISRO ಕೇಂದ್ರಕ್ಕೆ ಫೋಟೋಗಳನ್ನು ರವಾನೆ ಮಾಡಿದೆ. ಲ್ಯಾಂಡಿಂಗ್​ ವೇಳೆ ವೆಲಾಸಿಟಿ ಕ್ಯಾಮರಾ ಮೂಲಕ ಸ್ಥಳ ಪರಿಶೀಲನೆಗೆ ತೆಗೆದಿದ್ದ ಫೋಟೋ ಭೂಮಿಗೆ ತಲುಪಿವೆ. ಈ ನಡುವೆ ರಾಜಕೀಯ ಶುರುವಾಗಿದೆ.

ಚಂದ್ರಯಾನ – 03 ಇಳಿಯುತ್ತಿದ್ದಂತೆ ಮೋದಿ ಭಾಷಣ..!

ಕಳೆದ ಬಾರಿ ಚಂದ್ರಯಾನ 02 ಲ್ಯಾಂಡಿಂಗ್​ ವೇಳೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಪೀಣ್ಯಾ ಇಸ್ರೋ ಕೇಂದ್ರಕ್ಕೇ ಆಗಮಿಸಿದ್ರು. ಆದರೆ ಚಂದ್ರಯಾನ 02 ಸಾಫ್ಟ್​ ಲ್ಯಾಂಡಿಂಗ್​ ಮಾಡುವಾಗ ಕೆಲವೇ ಅಂತರದಲ್ಲಿ ಅಪಘಾತಕ್ಕೆ ಈಡಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಬಂದಿದ್ದರಿಂದಲೇ ವಿಜ್ಞಾನಿಗಳು ಒತ್ತಡದಿಂದ ಕೈಚೆಲ್ಲಬೇಕಾಯ್ತು ಅನ್ನೋ ಟೀಕೆಗಳು ಕೇಳಿ ಬಂದಿದ್ದವು. ಆದರೆ ಈ ಬಾರಿ ದಕ್ಷಿಣ ಆಫ್ರಿಕಾದಲ್ಲಿ BRICS ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಆನ್​ಲೈನ್​ ಮೂಲಕವೇ ಭಾಗಿಯಾಗಿದ್ದರು. ಇಸ್ರೋ ವಿಜ್ಞಾನಿಗಳ ಕೆಲಸವನ್ನು ಕಣ್ತುಂಬಿಕೊಂಡರು. ಆ ಬಳಿಕ ಇಡೀ ದೇಶವನ್ನು ಉದ್ದೇಶಿಸಿ ಭಾಷಣವನ್ನೂ ಮಾಡಿದರು. ಭಾರತದ ಮುಂದಿನ ಟಾರ್ಗೆಟ್​ಸೂರ್ಯ ಮತ್ತು ಶುಕ್ಲ ಎಂದು ಘೋಷಣೆಯನ್ನೂ ಮಾಡಿದರು. ಆದರೆ ಮೋದಿ ದೇಶದಲ್ಲಿ ಇಲ್ಲದಿದ್ದರಿಂದಲೇ ಚಂದ್ರಯಾನ 03 ಯಶಸ್ಸು ಸಾಧಿಸಿದೆ ಎಂದು ಜಾಲತಾಣದಲ್ಲಿ ಪೋಸ್ಟ್​ಗಳನ್ನು ಹರಿಯಬಿಡಲಾಗ್ತಿದೆ.

ಮೋದಿಗೂ ಮುನ್ನವೇ ರಾಜ್ಯ ನಾಯಕರ ಭೇಟಿ..!

ದಕ್ಷಿಣ ಧ್ರುವದಲ್ಲಿ ಇಳಿದು ಅಧ್ಯಯನ ಶುರು ಮಾಡಿದ ವಿಶ್ವದ ಮೊದಲ ರಾಷ್ಟ್ರ ಭಾರತ. ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಇಸ್ರೋ ವಿಜ್ಞಾನಿಗಳ ತಂಡವನ್ನು ಅಭಿನಂದಿಸಲು ಶನಿವಾರ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬರುತ್ತಿದ್ದಾರೆ. ಬ್ರಿಕ್ಸ್​ ಶೃಂಗಸಭೆ ಬಳಿಕ ಗ್ರೀಸ್​​ ದೇಶಕ್ಕೆ ತೆರಳಲಿರುವ ನರೇಂದ್ರ ಮೋದಿ, ನೇರವಾಗಿ ಬೆಂಗಳೂರಿಗೆ ಬರಲಿದ್ದು, ಶನಿವಾರ ಸಂಜೆ ಪೀಣ್ಯಾದ ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಗಳ ಜೊತೆ ಚರ್ಚಿಸಲಿದ್ದಾರೆ. ಈ ನಡುವೆ ಇಂದೇ ಸಿಎಂ ಸಿದ್ದರಾಮಯ್ಯ ಇಸ್ರೋ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದು, ಇಸ್ರೋ ವಿಜ್ಞಾನಿಗಳ ತಂಡವನ್ನು ಅಭಿನಂದಿಸಲಿದ್ದಾರೆ. ಇಸ್ರೋ ವಿಜ್ಞಾನಿಗಳನ್ನು ಗೌರವಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯಗೂ ಮೊದಲೂ ಬುಧವಾರ ಸಂಜೆಯೇ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್​ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿ, ಗೌರವಿಸುವ ಕೆಲಸ ಮಾಡಿದ್ದಾರೆ.

ನಮ್ಮದೇ ಸಾಧನೆ.. ನಮ್ಮದೇ ಸಾಧನೆ ಅನ್ನೋ ರಾಜಕೀಯ..

ಚಂದ್ರಯಾನ 03 ಯಶಸ್ವಿಯಾಗಿದೆ ಅಂದರೆ ನಮ್ಮ ಭಾರತ ದೇಶದ ಇಸ್ರೋ ವಿಜ್ಞಾನಿಗಳ ತಂಡದ ಶ್ರಮ. ಆದರೆ ನರೇಂದ್ರ ಮೋದಿ ಎಲ್ಲಾ ಕ್ರೆಡಿಟ್​ ತೆಗೆದುಕೊಳ್ಳುವ ಕೆಲಸ ಮಾಡ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ. ಇದರ ನಡುವೆ ಇಸ್ರೋ ಪಂಡಿತ್​ ಜವಾಹರಲಾಲ್​ ನೆಹರೂ ಅವರ ಕನಸು. ಇಂದು ಚಂದ್ರಯಾನ 03ರ ಮೂಲಕ ಸಾಕಾರಗೊಮಡಿದೆ ಅನ್ನೋ ಪೋಸ್ಟರ್​ಗಳೂ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ರಾಜಕೀಯ ಏನೇ ಇರಲಿ, ಇಡೀ ವಿಶ್ವದಲ್ಲಿ ಯಾವುದೇ ದೇಶ ಮಾಡಲು ಸಾಧ್ಯವಾಗದ್ದನ್ನು ನಮ್ಮ ವಿಜ್ಞಾನಿಗಳ ತಂಡ ಮಾಡಿದೆ ಎನ್ನುವುದೇ ಹೆಮ್ಮೆಯ ವಿಚಾರ. ಅದನ್ನು ಸಂಭ್ರಮಿಸಬೇಕೇ ವಿನಃ ರಾಜಕಾರಣ ಮಾಡಿದರೆ ಪ್ರಯೋಜನ ಇಲ್ಲ ಅಲ್ಲವೇ..?

Tags: chandrayaanISROlandingPoliticssuccessfulVikram Lander
Previous Post

ರಷ್ಯಾದಲ್ಲಿ ವಿಮಾನ ಪತನ- 10 ಸಾವು; ಕೊಲೆಯೋ..? ಅಪಘಾತವೋ..?

Next Post

ನಾಟಕ ವಿಮರ್ಶೆ | ಜಾತಿ ಸೂಕ್ಷ್ಮತೆಯ ನಾಡಿ ಹಿಡಿವ ರಂಗಪ್ರಯೋಗ ʼ ಮುಟ್ಟಿಸಿಕೊಂಡವನು ʼ

Related Posts

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!
Top Story

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!

by ಪ್ರತಿಧ್ವನಿ
April 20, 2026
0

ಬೆಂಗಳೂರು : ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು‌ ಕಳೆದ ಮಾರ್ಚ್‌ 29ರಂದು ಜಲಸಮಾಧಿಯಾಗಿರುವ ಘಟನೆಗೆ...

Read moreDetails
ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ  : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

April 20, 2026
“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

April 20, 2026
ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

April 20, 2026
ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

April 20, 2026
Next Post
ನಾಟಕ ವಿಮರ್ಶೆ | ಜಾತಿ ಸೂಕ್ಷ್ಮತೆಯ ನಾಡಿ ಹಿಡಿವ ರಂಗಪ್ರಯೋಗ ʼ ಮುಟ್ಟಿಸಿಕೊಂಡವನು ʼ

ನಾಟಕ ವಿಮರ್ಶೆ | ಜಾತಿ ಸೂಕ್ಷ್ಮತೆಯ ನಾಡಿ ಹಿಡಿವ ರಂಗಪ್ರಯೋಗ ʼ ಮುಟ್ಟಿಸಿಕೊಂಡವನು ʼ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada